Diabetes ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಈ ತರಕಾರಿ ಸೂಪ್ ಗಳು

Diabetes: ಮಧುಮೆಹಿಗಳು ತಮ್ಮ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡಲು ತಮ್ಮ ಆಹಾರ ಪಾನೀಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಕೆಲವು ವೆಜಿಟೇಬಲ್ ಸೂಪ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jun 27, 2023, 11:12 AM IST
  • ಕೆಲವು ಸಸ್ಯಾಹಾರಿ ಸೂಪ್ ಸೇವನೆಯಿಂದ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು.
  • ಮಾತ್ರವಲ್ಲ, ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಕೂಡ ಇದು ತುಂಬಾ ಪ್ರಯೋಜನಕಾರಿ ಆಗಿದೆ.
  • ಅಂತಹ ಕೆಲವು ಸೂಪ್ ಗಳು ಯಾವುವೆಂದರೆ...
Diabetes ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಈ ತರಕಾರಿ ಸೂಪ್ ಗಳು title=

Vegetable Soups For Diabetes: ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ. ಡಯಾಬಿಟಿಸ್ ಸಮಯದಲ್ಲಿ ಅನಾರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ.  ಅದರಲ್ಲೂ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸದಂತಹ ಮಾಂಸಾಹಾರಿ ಆಹಾರಗಳಂತೂ ಮಧುಮೇಹಿಗಳಿಗೆ ವಿಷಕ್ಕೆ ಸಮಾನ ಎಂತಲೇ ಹೇಳಬಹ್ದೂ. ಆದರೆ, ಕೆಲವು ವೆಜಿಟೇಬಲ್ ಸೂಪ್ ಗಳ ಸೇವನೆಯು ಮಧುಮೇಹ ಇರುವವರಿಗೆ ದಿವ್ಯೌಷಧವಿದ್ದಂತೆ ಎಂದು ಬಣ್ಣಿಸಲಾಗುತ್ತದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ... 

ಆರೋಗ್ಯ ತಜ್ಞರ ಪ್ರಕಾರ, ಕೆಲವು ಸಸ್ಯಾಹಾರಿ ಸೂಪ್ ಸೇವನೆಯಿಂದ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ, ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಕೂಡ ಇದು ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ಕೆಲವು ಸೂಪ್ ಗಳು ಯಾವುವೆಂದರೆ... 

* ಟೊಮಾಟೊ ಸೂಪ್: 
ಮಧುಮೇಹಿಗಳಿಗೆ ಟೊಮೆಟೊ ಸೂಪ್ ಅನ್ನು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಟೊಮಾಟೊ ಹೃದ್ರೋಗ, ಕ್ಯಾನ್ಸರ್, ಮಧುಮೇಹದಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಟೊಮಾಟೊ ಸರ್ವಶಕ್ತ ಲೈಕೋಪೀನ್, ಉತ್ಕರ್ಷಣ ನಿರೋಧಕವಾಗಿದ್ದು ಅದು ಅನೇಕ ವಿಧಗಳಲ್ಲಿ ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಟೊಮೆಟೊಗಳನ್ನು ಸೇವಿಸುವುದರಿಂದ ಅಥವಾ ಟೊಮಾಟೊ ಸೂಪ್ ಕುಡಿಯುವುದರಿಂದ ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Bottle Gourd : ಆರೋಗ್ಯಕ್ಕೆ ಬಲು ಸೊಗಸು ಸೋರೆಕಾಯಿ..!

ಟೊಮಾಟೊ ಸೂಪ್ ತಯಾರಿಸುವ ವಿಧಾನ: 
ಟೊಮಾಟೊ ಸೂಪ್ ತಯಾರಿಸಾಲು ಮೊದಲು ಒಂದೆರಡು ಟೊಮಾಟೊ ಅರ್ಧ ಟೀ ಸ್ಪೂನ್ ಕೆಂಪು ಮೆಣಸಿನಪುಡಿ, ಮ್ಯಾಶ್ ಮಾಡಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪನ್ನು ತೆಗೆದುಕೊಳ್ಳಿ. ಬಳಿಕ ಗ್ಯಾಸ್ ಮೇಲೆ ಒಂದು ಫ್ಯಾನ್ ಹಾಕಿ ಅದರಲ್ಲಿ ಒಂದು ಕಪ್ ನೀರು ಹಾಕಿ ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ. ಅದು ಚೆನ್ನಾಗಿ ಕುದ್ದ ಬಳಿಕ ಸೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದನ್ನು ಒಂದು ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಮತ್ತೊಮ್ಮೆ, ಒಲೆ ಹಚ್ಚಿ ಸೂಪ್ ಅನ್ನು ಬಿಸಿ ಮಾಡಿ, ನಿಮಗೆ ಅಗತ್ಯವೆನಿಸಿದರೆ ಸ್ವಲ್ಪ ಬ್ಲಾಕ್ ಪೆಪ್ಪರ್ ಪೌಡರ್, ಬ್ಲಾಕ್ ಸಾಲ್ಟ್ ಮಿಶ್ರಣ ಮಾಡಿ ಸೇವಿಸಿ. 

* ರೆಡ್ ಲೆಂಟಿಲ್ ಸೂಪ್:
ಟೊಮಾಟೊ ಮಾತ್ರವಲ್ಲದೆ, ರೆಡ್ ಲೆಂಟಿಲ್  ಎಂದರೆ ಕೆಂಪು ಬೇಳೆ, ಕೆಂಪು ಮಸೂರವೂ ಮಧುಮೆಹಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ. ಇದಕ್ಕಾಗಿ ಒಂಸು ಸಣ್ಣ ಬೌಲ್ ನೆನೆಸಿದ ಕೆಂಪು ಮಸೂರವನ್ನು ತೆಗೆದುಕೊಂಡು ಇದಕ್ಕೆ  ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಅನ್ನು ಸಣ್ಣಗೆ ಹೆಚ್ಚಿ ತಯಾರಿ ಮಾಡಿಕೊಳ್ಳಿ. ಬಳಿಕ, ಒಂದು ಬಾಣಲೆಯಲ್ಲಿ 2 ಕಪ್ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಇದಕ್ಕೆ ನೆನೆಸಿದ ಕೆಂಪು ಮಸೂರ ಮತ್ತು ನೀವು ಈಗಾಗಲೇ ರೆಡಿ ಮಾಡಿ ಇಟ್ಟಿರುವ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ, ಒಗ್ಗರಣೆ ಹಾಕಿ ಸರ್ವಿಂಗ್ ಬೌಲ್ ನಲ್ಲಿ ಅದನ್ನು ಸರ್ವ್ ಮಾಡಿ. 

ಇದನ್ನೂ ಓದಿ- ಡಯಾಬಿಟಿಸ್‌ಗೆ ರಾಮಬಾಣ ಈ ಹೂವಿನ ಗಿಡದ ಎಲೆ, ಈ ರೀತಿ ಬಳಸಿ ಮಧುಮೇಹ ಹೊಡೆದೋಡಿಸಿ!

* ಮಶ್ರೂಮ್ ಸೂಪ್: 
ಮಧುಮೇಹಿಗಳು ಮಶ್ರೂಮ್ ಸೂಪ್ ಕುಡಿಯುವುದರಿಂದ ಬ್ಲಡ್ ಶುಗರ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಕ್ಕಾಗಿ ಒಂದು ಕಪ್ ಮಶ್ರೂಮ್, ಒಂದು ಚಮಚ ಗೋಧಿ ಹಿಟ್ಟು, ಅರ್ಧ ಕಪ್ ಕಡಿಮೆ ಕೊಬ್ಬಿನ ಹಾಲು, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ , ಒಂದು ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ತೆಗೆದುಕೊಳ್ಳಿ. ಮೊದಲಿಗೆ ಒಲೆ ಹಚ್ಚಿ ಪ್ಯಾನ್ ಅನ್ನು ಇಡಿ.  ಅದು ಚೆನ್ನಾಗಿ ಕಾದ ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಒಂದೊಂದಾಗಿ ನೀವು ಈಗಾಗಲೇ ತಯಾರಿಟ್ಟುಕೊಂಡಿರುವ ಪದಾರ್ಥಗಳನ್ನು ಹಾಕಿ, ಸ್ವಲ್ಪ ಹುರಿಯಿರಿ. ಬಳಿಕ ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿದ ಬಳಿಕ ಸ್ಟೌ ಆಫ್ ಮಾಡಿ. ಬಳಿಕ ಈ ಮಿಶ್ರಣವನ್ನು ಮೊದಲೇ ಕಾಯಿಸಿರುವ ಹಾಲಿಗೆ ಹಾಕಿ ಬೆರೆಸಿ. ಬೌಲ್‌ಗೆ ಬಡಿಸಿ. ಡಯಾಬಿಟಿಸ್ ರೋಗಿಗಳು ಈ ಸೂಪ್ ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News