Vegetable Juices For HIgh BP: ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಹೀಗಿರುವಾಗ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತಿದೆ, ಜೊತೆಗೆ ವ್ಯಸ್ತ ಜೀವನಶೈಲಿಯ ಕಾರಣ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ ಮತ್ತು ಅವರು ತಮ್ಮ ತಮ್ಮ  ಕೆಲಸದಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಅನೇಕ ಜೀವನಶೈಲಿಯ ರೋಗಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ರಕ್ತದೊತ್ತಡ, ರಕ್ತಹೀನತೆ, ಮೆದುಳಿನ ಕಾಯಿಲೆ ಇತ್ಯಾದಿಗಳು ಉಂಟಾಗುತ್ತಿವೆ.ಇದನ್ನು ನಿರ್ಲಕ್ಷಿಸುವುದು ಸಾಕಷ್ಟು ಮಾರಕ ಸಾಬೀತಾಗಬಹುದು (high bp control bp vegetable juices ). ರಕ್ತದೊತ್ತಡವು ಒಂದು ರೀತಿಯ ಜೀವನಶೈಲಿಯ ಕಾಯಿಲೆಯಾಗಿದ್ದು ಇದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವನ್ನು ಹೈಪರ್ ಟೆನ್ಶನ್ ಎಂದೂ ಕರೆಯುತ್ತಾರೆ, ದೇಹದ ಎಲ್ಲಾ ಭಾಗಗಳಿಗೆ ರಕ್ತ ಪಂಪ್ ಮಾಡುವಲ್ಲಿ ಹೃದಯವು ಒಂದು ವೇಳೆ ಹೆಚ್ಚು ಒತ್ತಡಕ್ಕೆ ಒಳಗಾದರೆ, ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಾಗುತ್ತದೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುವ ಕೆಲ ಪ್ರಯೋಜನಕಾರಿ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (Health News In Kannada)


COMMERCIAL BREAK
SCROLL TO CONTINUE READING

ಅಧಿಕ ರಕ್ತದೊತ್ತಡ ಸಮಸ್ಯೆ ಇರುವ ರೋಗಿಗಳು ಈ ರಸವನ್ನು ನಿಯಮಿಉತವಾಗಿ ಸೇವಿಸಬೇಕು
ಅಧಿಕ ರಕ್ತದೊತ್ತಡಕ್ಕೆ ಅಜ್ವೈನ್ ಜ್ಯೂಸ್ (Morning drink for high blood pressure)

ಅಜ್ವೈನ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸಾಂಬಾರ ಪದಾರ್ಥವಿದೆ.ಆಯುರ್ವೇದದ ಪ್ರಕಾರ, ಇದು ಎಲ್ಲಾ ರೀತಿಯ ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವ ಔಷಧಿಯಾಗಿದೆ. ಅಜ್ವೈನ್ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ವಿಟಮಿನ್ ಕೆ, ಪೊಟ್ಯಾಸಿಯಮ್, ವಿಟಮಿನ್ ಬಿ 6, ಫೋಲೇಟ್ ಮುಂತಾದ ಅನೇಕ ರೀತಿಯ ಪೌಷ್ಟಿಕಾಂಶಗಳು ಇದರಲ್ಲಿ ಕಂಡುಬರುತ್ತವೆ, ಈ ಎಲ್ಲಾ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತವೆ.


ಅಧಿಕ ರಕ್ತದೊತ್ತಡಕ್ಕೆ ಪಾಲಕ್ ಜ್ಯೂಸ್ (Tricks to lower blood pressure instantly home remedies)
ಪಾಲಕ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಪೊಟ್ಯಾಸಿಯಮ್ನ ಉತ್ತಮ ಆಗರವಾಗಿದೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಪೊಟ್ಯಾಸಿಯಮ್ ಕಾರಣದಿಂದ, ರಕ್ತ ಪರಿಚಲನೆ ಸುಲಲಿತಗೊಳ್ಳುತ್ತದೆ, ಇದು ಹೃದಯಕ್ಕೆ ಒತ್ತಡವನ್ನು ಉಂಟುಮಾಡುವುದಿಲ್ಲ. ನಿಮಗೆ ರಕ್ತದೊತ್ತಡ ಸಮಸ್ಯೆ ಇದ್ದರೆ ಪಾಲಕ್ ಜ್ಯೂಸ್ ಸೇವನೆ ನಿಮಗೆ ಪ್ರಯೋಜನವನ್ನು ನೀಡಲಿದೆ.


ಅಧಿಕ ರಕ್ತದೊತ್ತಡಕ್ಕೆ ಬೀಟ್ರೂಟ್ ಜ್ಯೂಸ್ (Beet juice for high blood pressure)
ಬೀಟ್ರೂಟ್ ಕೂಡ ಆರೋಗ್ಯಗಳಿಂದ ಭರಪೂರವಾಗಿರುವ ತರಕಾರಿಯಾಗಿದೆ. ಸೋಡಿಯಂ, ಪೊಟ್ಯಾಸಿಯಮ್, ಫಾಸ್ಫರಸ್ ಮುಂತಾದ ಸಾಕಷ್ಟು ಪೌಷ್ಟಿಕಾಂಶಗಳು ಇದರಲ್ಲಿ ಕಂಡುಬರುತ್ತವೆ.  ಇವು ರಕ್ತದೊತ್ತಡ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿ ನೈಟ್ರೇಟ್ ಕೂಡ ಹೇರಳ ಪ್ರಮಾಣದಲ್ಲಿರುವ ಕಾರಣ ದೇಹದಲ್ಲಿನ ರಕ್ತ ಪರಿಚಲನೆ ಇದರಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣದಿಂದ ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಸಾಕಷ್ಟು ಪರಿಹಾರ ನೀಡುತ್ತದೆ. 


ಇದನ್ನೂ ಓದಿ-Hair Fall Causing Food: ಈ ಪದಾರ್ಥಗಳ ಸೇವನೆ ಬೋಳು ತಲೆ ಸಮಸ್ಯೆಗೆ ಕಾರಣ, ತಕ್ಷಣ ನಿಲ್ಲಿಸಿ!


ಅಧಿಕ ರಕ್ತದೊತ್ತಡಕ್ಕೆ ಟೊಮೆಟೊ ಜ್ಯೂಸ್(BP Care Juice benefits)
ಟೊಮೇಟೊ ಪ್ರತಿಯೊಬ್ಬರ  ಅಡುಗೆಮನೆಯಲ್ಲಿಯೂ ಕಂಡುಬರುವ ಒಂದು ಸಾಮಾನ್ಯ ತರಕಾರಿಯಾಗಿದೆ.ಇದು ವಿಟಮಿನ್ ಸಿ, ಎ ಮುಂತಾದ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ, ಜೊತೆಗೆ ಇದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾದ ರಂಜಕ, ತಾಮ್ರ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜ ಪದಾರ್ಥಗಳನ್ನು ಇದು ಒಳಗೊಂಡಿದೆ. ನೀವು ದೈನಂದಿನ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿದರೆ, ಅದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.


ಇದನ್ನೂ ಓದಿ-Diabetes-Cholesterol Control Tips: ಮಧುಮೇಹ-ಕೊಲೆಸ್ಟರಾಲ್ ಸೇರಿದಂತೆ ಹಲವು ಕಾಯಿಲೆಗಳಿಗೆ ಪರಿಣಾಮಕಾರಿ ಮನೆಮದ್ದು ಈ ಹಣ್ಣು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI