Hyperthyroidism: ಹೈಪರ್ ಥೈರಾಯಿಡಿಸಮ್ ನಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಇಗ್ನೋರ್ ಮಾಡಬೇಡಿ!

Hyper Thyroidsm Symptoms: ಹೈಪರ್ ಥೈರಾಯ್ಡಿಸಮ್ ನಿಂದ ಮಹಿಳೆಯರ ಋತುಚಕ್ರ ಪ್ರಭಾವಕ್ಕೆ ಒಳಗಾಗುತ್ತದೆ (hyperthyroidism symptoms in females treatment) ಮತ್ತು ಇದರಿಂದ ಗರ್ಭಧಾರಣೆಗೆ ಅಡಚಣೆ ಎದುರಾಗುತ್ತದೆ. (Health News In Kannada)  

Written by - Nitin Tabib | Last Updated : Mar 15, 2024, 06:15 PM IST
  • ಹೈಪರ್ ಥೈರಾಯ್ಡಿಸಮ್ ಕಾರಣ, ಮಹಿಳೆಯರಿಗೆ ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
  • ಹೈಪರ್ ಥೈರಾಯ್ಡಿಸಮ್ ಕಾರಣ ಗರ್ಭಿಣಿಯಾಗಲು ಅವರಿಗೆ ಕಷ್ಟವಾಗುತ್ತದೆ.
  • ಅಷ್ಟಾಗ್ಯೂ ಮಹಿಳೆ ಗರ್ಭಧರಿಸಿದರೆ, ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತ
Hyperthyroidism: ಹೈಪರ್ ಥೈರಾಯಿಡಿಸಮ್ ನಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಇಗ್ನೋರ್ ಮಾಡಬೇಡಿ! title=

Hyperthyroidism Symptoms In Women: ಥೈರಾಯ್ಡ್ ಗ್ರಂಥಿಯು ಹೆಚ್ಚಿನ ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನ್ ಸೃವಿಸಿದಾಗ ಅಂತಹ ಸ್ಥಿತಿಯನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಇದನ್ನು ನಾವು ಅತಿ ಕ್ರಿಯಾಶೀಲವಾಗಿರುವ ಥೈರಾಯ್ಡ್ ಎಂದು ಸಹ ಕರೆಯಬಹುದು. ಹೈಪರ್ ಥೈರಾಯ್ಡಿಸಮ್ ದೇಹದ ಚಯಾಪಚಯ ದರ ಹೆಚ್ಚಿಸುತ್ತದೆ. ಹೀಗಿರುವಾಗ ಹಠಾತ್ ತೂಕ ಇಳಿಕೆ, ಕೈಗಳಲ್ಲಿ ನಡುಕ ಮತ್ತು ವೇಗದ ಹಾಗೂ ಅನಿಯಮಿತ ಹೃದಯ ಬಡಿತದಂತಹ ಅನೇಕ ರೀತಿಯ ರೋಗಲಕ್ಷಣಗಳನ್ನು ಮಹಿಳೆಯರಲ್ಲಿ ಕಂಡುಬರುತ್ತವೆ. ಆದಾಗ್ಯೂ, ಹೈಪರ್ ಥೈರಾಯ್ಡಿಸಮ್‌ಗೆ ಹಲವಾರು ರೀತಿಯ ಚಿಕಿತ್ಸೆಗಳಿವೆ. ಇದಕ್ಕಾಗಿ ರೋಗಿ ನಿಯಮಿತವಾಗಿ ಔಷಧ ಸೇವಿಸಬೇಕು. ತನ್ಮೂಲಕ ಥೈರಾಯ್ಡ್ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಈ ಸ್ಥಿತಿಯು ತುಂಬಾ ತೀವ್ರವಾದಾಗ, ಕೆಲವು ಗಂಭೀರ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ. ಹೈಪರ್ ಥೈರಾಯ್ಡಿಸಮ್‌ನಂತಹ ಗಂಭೀರ ಕಾಯಿಲೆಯಿಂದ ನೀವು ಸುರಕ್ಷಿತವಾಗಿರಲು ಬಯಸಿದರೆ, ಅದರ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ತುಂಬಾ ಮುಖ್ಯ. ವಿಶೇಷವಾಗಿ, ಹೈಪರ್ ಥೈರಾಯ್ಡಿಸಮ್ ಅಪಾಯವು ಮಹಿಳೆಯರಲ್ಲಿ ಹೆಚ್ಚು. ಹೈಪರ್ ಥೈರಾಯ್ಡಿಸಮ್ (hyperthyroidism symptoms in females treatment) ನಿಂದಾಗಿ ಮಹಿಳೆಯರಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Health News In Kannada).

ಹೈಪರ್ ಥೈರಾಯ್ಡಿಸಮ್‌ನಿಂದ ಮಹಿಳೆಯರಲ್ಲಿ ಕಂಡುಬರುವ ಲಕ್ಷಣಗಳು
ಋತುಚಕ್ರದಲ್ಲಿ ಏರುಪೇರು

ಹೈಪರ್ ಥೈರಾಯ್ಡಿಸಮ್ ಕಾರಣ, ಮಹಿಳೆಯರ ಋತುಚಕ್ರ ಅನಿಯಮಿತವಗುತದೆ. ವರದಿಯೊಂದರ ಪ್ರಕಾರ ಹೈಪರ್ ಥೈರಾಯ್ಡಿಸಮ್‌ನಿಂದಾಗಿ ಮಹಿಳೆಯರಲ್ಲಿ ಕೆಲವೊಮ್ಮೆ ಭಾರೀ ರಕ್ತಸ್ರಾವ ವಾದರೆ, ಕೆಲವೊಮ್ಮೆ ಲಘು ರಕ್ತಸ್ರಾವ ಆಗುತ್ತದೆ. ಹಾಗೆಯೇ ಕೆಲವೊಮ್ಮೆ ಪಿರಿಯಡ್ಸ್ ಕೂಡ ತಪ್ಪಬಹುದು. ಮಹಿಳೆಗೆ ನಿರಂತರವಾಗಿ ಎರಡರಿಂದ ಮೂರು ತಿಂಗಳು ಮುಟ್ಟು ಇದ್ದಲ್ಲಿ. ಅಂತಹ ಸಮಸ್ಯೆಯನ್ನು ಅವರು ನಿರ್ಲಕ್ಷಿಸಬಾರದು. ತಕ್ಷಣವೇ ಹೈಪರ್ ಥೈರಾಯ್ಡಿಸಮ್ ಪರೀಕ್ಷೆಯನ್ನು (hyperthyroidism treatments) ಮಾಡಿಸಿಕೊಳ್ಳಬೇಕು ಮತ್ತು ಇದಕ್ಕಾಗಿ, ವೈದ್ಯರನ್ನು ಸಂಪರ್ಕಿಸಬೇಕು. 

ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳು
ಹೈಪರ್ ಥೈರಾಯ್ಡಿಸಮ್ ಮಹಿಳೆಯ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾಸ್ತವದಲ್ಲಿ, ಹೈಪರ್ ಥೈರಾಯ್ಡಿಸಮ್ ಕಾರಣದಿಂದಾಗಿ, ಮಹಿಳೆಯ ಋತುಚಕ್ರವು ಪ್ರಭಾವಕ್ಕೆ ಒಳಗಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಉಂಟಾಗುತ್ತದೆ. ಹೈಪರ್ ಥೈರಾಯ್ಡಿಸಮ್ ನಿಂದಾಗಿ ಗರ್ಭ ಧರಿಸುವುದು ಮತ್ತು ನಿರ್ವಹಿಸುವುದು ಮಹಿಳೆಯರಿಗೆ ಒಂದು ಸವಾಲಾಗಿ ಪರಿಣಮಿಸುತ್ತದೆ. ಅಷ್ಟೇ ಅಲ್ಲ, ಹೈಪರ್ ಥೈರಾಯ್ಡಿಸಮ್ ನಿಂದಾಗಿ ಮಹಿಳೆಯ ಅಂಡೋತ್ಪತ್ತಿ ಅವಧಿಯೂ ಪ್ರಭಾವಕ್ಕೆ ಒಳಗಾಗುತ್ತದೆ. ಈ ಸ್ಥಿತಿಯು ಗರ್ಭಧಾರನೆಗೆ ಒಳ್ಳೆಯದಲ್ಲ.

ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆ
ಹೈಪರ್ ಥೈರಾಯ್ಡಿಸಮ್ ಕಾರಣ, ಮಹಿಳೆಯರಿಗೆ ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೈಪರ್ ಥೈರಾಯ್ಡಿಸಮ್ ಕಾರಣ ಗರ್ಭಿಣಿಯಾಗಲು ಅವರಿಗೆ ಕಷ್ಟವಾಗುತ್ತದೆ. ಅಷ್ಟಾಗ್ಯೂ ಮಹಿಳೆ ಗರ್ಭಧರಿಸಿದರೆ, ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಥೈರಾಯ್ಡ್ ಗ್ರಂಥಿಯ ಅತಿಯಾದ ಚಟುವಟಿಕೆಯಿಂದಾಗಿ ಇದು ಸಂಭವಿಸುತ್ತದೆ. ಹೈಪರ್ ಥೈರಾಯ್ಡಿಸಮ್‌ನಿಂದಾಗಿ, ಗರ್ಭದಲ್ಲಿರುವ ಮಗುವಿನ ಮತ್ತು ಗರ್ಭಿಣಿ ಮಹಿಳೆಯ ಆರೋಗ್ಯವು ಪ್ರಭಾವಕ್ಕೆ ಒಳಗಾಗುತ್ತದೆ. 

ಮಹಿಳೆಯರಲ್ಲಿ ಹೈಪರ್ ಥೈರಾಯ್ಡಿಸಮ್ನ ಇತರ ಲಕ್ಷಣಗಳು (hyperthyroidism symptoms checklist)
ಹೈಪರ್ ಥೈರಾಯ್ಡಿಸಮ್ ಕಾರಣ, ಮಹಿಳೆಯು ಅನೇಕ ಇತರ ರೋಗಲಕ್ಷಣಗಳನ್ನು ಸಹ ಕಾಣಬಹುದು. ಆದಾಗ್ಯೂ, ಇವುಗಳು ಅಂತಹ ಕೆಲವು ರೋಗಲಕ್ಷಣಗಳಾಗಿವೆ, ಇದು ಇತರ ಆರೋಗ್ಯ ಪರಿಸ್ಥಿತಿಗಳ ಉಪಸ್ಥಿತಿಯಲ್ಲಿಯೂ ಸಹ ಕಂಡುಬರುತ್ತದೆ, ಉದಾಹರಣೆಗೆ-
ಅತಿಸಾರ
ಆತಂಕ
ಹಾಟ್ ಫ್ಲ್ಯಾಷೆಜ್ 
ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು
ಶಕ್ತಿ ಹೀನತೆಯ ಭಾವನೆ 
ಆಗಾಗ್ಗೆ ಮನಸ್ಥಿತಿ ಬದಲಾವಣೆಗಳು
ಆಗಾಗ್ಗೆ ಮೂತ್ರ ವಿಸರ್ಜನೆ
ಹಸಿವಿನ ಹಠಾತ್ ಹೆಚ್ಚಳ
ಲೈಂಗಿಕ ಬಯಕೆಯಲ್ಲಿ ಇಳಿಕೆ

ಇದನ್ನೂ ಓದಿ-Bad Cholesterol Symptoms: ಪಾದಗಳ ಮೇಲೆ ಈ ನಾಲ್ಕು ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ!

ಸ್ತ್ರೀ ಹೈಪರ್ ಥೈರಾಯ್ಡಿಸಮ್ನ ದೈಹಿಕ ಲಕ್ಷಣಗಳು (what are the symptoms of thyroid problems in females?)
ಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ
ಅನಿಯಮಿತ ಹೃದಯ ಬಡಿತ
ಹಠಾತ್ ತೂಕ ಇಳಿಕೆ
ಉಗುರು ದುರ್ಬಲಗೋಳ್ಳುವಿಕೆ
ಕೆಂಪು ಅಂಗೈ ಸಮಸ್ಯೆ 
ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ, ಉದಾಹರಣೆಗೆ ಕಣ್ಣುಗಳು ಕೆಂಪಾಗುವುದು, ದೃಷ್ಟಿ ಮಂದವಾಗುವುದು ಇತ್ಯಾದಿ.
ಅತಿಯಾದ ಬೆವರುವಿಕೆ

ಇದನ್ನೂ ಓದಿ-Benefits Of Apple Peel: ಸೇಬು ಹಣ್ಣು ತಿಂದು ನೀವೂ ಅದರ ಸಿಪ್ಪೆ ಎಸೆಯುತ್ತೀರಾ? ಹಾಗಾದ್ರೆ ಲೇಖನ ತಪ್ಪದೆ ಓದಿ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News