ನವದೆಹಲಿ: ಕಣ್ಣುಗಳಲ್ಲಿ ಕಿರಿಕಿರಿ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಕಣ್ಣುಗಳಲ್ಲಿನ ಕಿರಿಕಿರಿಯಿಂದ ಕಣ್ಣುಗಳು ಕೆಂಪಾಗುತ್ತವೆ. ಈ ರೀತಿ ಆಗಲು ಹಲವು ಕಾರಣಗಳಿವೆ. ಈ ಸಮಸ್ಯೆ ಉಲ್ಬಣಗೊಂಡರೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು. ಪ್ರಪಂಚದಾದ್ಯಂತ ಸುಮಾರು 2.2 ಶತಕೋಟಿ ಜನರು ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಕಣ್ಣುಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ


ಕಣ್ಣುಗಳ ಉರಿ ಸಮಸ್ಯೆಗೆ ಕಾರಣವೇನು?   


ಕಣ್ಣುಗಳಲ್ಲಿ ಕಿರಿಕಿರಿಯನ್ನು ಉಂಟುಮಾಡಲು ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಅತಿಯಾದ ಒತ್ತಡದಿಂದ ಕಣ್ಣುಗಳಲ್ಲಿ ನೋವು ಪ್ರಾರಂಭವಾಗುತ್ತದೆ ಮತ್ತು ನಂತರ ಉರಿ ಪ್ರಾರಂಭವಾಗುತ್ತದೆ. ಇದಕ್ಕೆ ಕಾರಣವೆಂದರೆ ನಾವು ಹೆಚ್ಚು ಸಮಯ ಮೊಬೈಲ್, ಕಪ್ಯೂಟರ್ ಅಥವಾ ಲ್ಯಾಪ್‍ಟಾಪ್‍ ಸ್ಕ್ರೀನ್ ಮುಂದೆ ಕಳೆಯುತ್ತೇವೆ. ಇದು ಕಣ್ಣುಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅಲರ್ಜಿಗಳು ಕಿರಿಕಿರಿಯ 2ನೇ ಮುಖ್ಯ ಕಾರಣ. ಧೂಳು, ಸಾಕುಪ್ರಾಣಿಗಳ ಕೂದಲು ಇತ್ಯಾದಿಗಳು ಅಲರ್ಜಿಯನ್ನು ಉಂಟುಮಾಡುತ್ತವೆ. ಕಣ್ಣುಗಳನ್ನು ಉರಿಯಲು 3ನೇ ಕಾರಣ ಗಾಯಗಳು. ಯಾವುದೋ ಕಾರಣದಿಂದ ಕಣ್ಣುಗಳಲ್ಲಿ ನೋವು ಕಂಡುಬಂದರೆ ಕೆಂಪಾಗುತ್ತವೆ. ನಂತರ ನೀವು ನೋವು ಮತ್ತು ಉರಿ ಅನುಭವಿಸುತ್ತೀರಿ.  


ಇದನ್ನೂ ಓದಿ: Coconut Chutney: ಬಿಪಿ-ಶುಗರ್-ಬೊಜ್ಜು ನಿಯಂತ್ರಣದ ಜೊತೆಗೆ ಹಲವು ಸಮಸ್ಯೆಗಳ ನಿವಾರಣೆಗೆ ರಾಮಬಾಣ ಕೊಬ್ಬರಿ ಚಟ್ನಿ


ಉರಿಯುವ ಕಣ್ಣಿಗೆ ಚಿಕಿತ್ಸೆ


ಬಹಳಷ್ಟು ಉರಿ ಕಂಡುಬಂದರೆ ಕಣ್ಣುಗಳನ್ನು ನೀರಿನಿಂದ ತೊಳೆಯಬೇಕು. ಕಿರಿಕಿರಿ ಕಡಿಮೆ ಮಾಡಲು ಇದು ತುಂಬಾ ಸಹಾಯ ಮಾಡುತ್ತದೆ. ರೋಸ್ ವಾಟರ್ ಬಳಸಿ ಸಹ ಕಣ್ಣುಗಳನ್ನು ತೊಳೆಯಬಹುದು. ಇದು ಕಣ್ಣು ಉರಿಗೆ ಸಾಕಷ್ಟು ಪರಿಹಾರ ನೀಡುತ್ತದೆ. ಡಿಜಿಟಲ್ ಕಣ್ಣಿನ ಆಯಾಸದಿಂದ ಕಿರಿಕಿರಿಯುಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ನೀವು ಹೆಚ್ಚುಹೊತ್ತು ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ನೋಡುವುದನ್ನು ಕಡಿಮೆ ಮಾಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.