Coconut Chutney: ಬಿಪಿ-ಶುಗರ್-ಬೊಜ್ಜು ನಿಯಂತ್ರಣದ ಜೊತೆಗೆ ಹಲವು ಸಮಸ್ಯೆಗಳ ನಿವಾರಣೆಗೆ ರಾಮಬಾಣ ಕೊಬ್ಬರಿ ಚಟ್ನಿ

Coconut Chutney: ಬೆಳಗಿನ ಉಪಹಾರವಾಗಲಿ ಅಥವಾ ಊಟವಾಗಲಿ ವಿವಿಧ ರೀತಿಯ ಚಟ್ನಿಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಟ್ನಿಯನ್ನು ಸೇವಿಸುವುದರಿಂದ ನೀವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.  

Written by - Nitin Tabib | Last Updated : Sep 12, 2022, 08:33 PM IST
  • ತೆಂಗಿನಕಾಯಿ ತಾಜಾ ಸುವಾಸನೆಯಿಂದಾಗಿ ಈ ಚಟ್ನಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
  • ಅಷ್ಟೇ ಅಲ್ಲ, ತೆಂಗಿನಕಾಯಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ಲಾರಿಕ್ ಆಸಿಡ್ ಇರುತ್ತದೆ,
  • ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
Coconut Chutney: ಬಿಪಿ-ಶುಗರ್-ಬೊಜ್ಜು ನಿಯಂತ್ರಣದ ಜೊತೆಗೆ ಹಲವು ಸಮಸ್ಯೆಗಳ ನಿವಾರಣೆಗೆ ರಾಮಬಾಣ ಕೊಬ್ಬರಿ ಚಟ್ನಿ title=
Coconut Chutney Health Benefits

Coconut Chutney Health Benefits: ಬೆಳಗ್ಗಿನ ಉಪಹಾರವಾಗಲಿ, ಊಟವಾಗಲಿ ತೆಂಗಿನಕಾಯಿ ಚಟ್ನಿಯನ್ನು ಎಲ್ಲರೊಂದಿಗೆ ತಿನ್ನುತ್ತಾರೆ. ಇದೇ ವೇಳೆ, ತೆಂಗಿನಕಾಯಿ ತಾಜಾ ಸುವಾಸನೆಯಿಂದಾಗಿ ಈ ಚಟ್ನಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ತೆಂಗಿನಕಾಯಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ಲಾರಿಕ್ ಆಸಿಡ್ ಇರುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.

ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು
ತೂಕ ಇಳಿಕೆ

ತೆಂಗಿನಕಾಯಿ ಚಟ್ನಿ ಸೇವನೆಯು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.  ನೀವು ಮಾರುಕಟ್ಟೆಯ ಉಪ್ಪಿನಕಾಯಿ ಮತ್ತು ಚಟ್ನಿಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ, ನೀವು ತೆಂಗಿನಕಾಯಿ ಚಟ್ನಿಯನ್ನು ಸೇವಿಸಬಹುದು. ತೆಂಗಿನಕಾಯಿ ಚಟ್ನಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು, ತೂಕ ಇಳಿಕೆಗೆ ಅದು ಸಹಾಯ ಮಾಡುತ್ತದೆ.

ರಕ್ತ ಹೆಚ್ಚಾಗುತ್ತದೆ
ದೇಹದಲ್ಲಿ ಕಡಿಮೆ ರಕ್ತ ಅಥವಾ ರಕ್ತಹೀನತೆ ಸಮಸ್ಯೆಯಿಂದ ಬಳಲುವವರಿಗೆ ತೆಂಗಿನಕಾಯಿ ಚಟ್ನಿ ಒಂದು ಉತ್ತಮ ಆಹಾರವಾಗಿದೆ, ಹೀಗಾಗಿ ನೀವು ನಿಮ್ಮ ಆಹಾರದಲ್ಲಿ ತೆಂಗಿನಕಾಯಿ ಚಟ್ನಿಯನ್ನು ಸೇರಿಸಬೇಕು. ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ಕಬ್ಬಿಣದ ಕೊರತೆ ದೂರಾಗುತ್ತದೆ ಮತ್ತು ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ತೆಂಗಿನಕಾಯಿ ಚಟ್ನಿ ಸೇವನೆಯು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ತೆಂಗಿನಕಾಯಿ ಚಟ್ನಿಯು ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ, ತೆಂಗಿನಕಾಯಿ ಚಟ್ನಿಯು Ha4t ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಮೆಟಾಬಾಲಿಸಂ ಕಡಿಮೆಯಾಗುತ್ತದೆ.

ಬಿಪಿ ನಿಯಂತ್ರಣದಲ್ಲಿರುತ್ತದೆ
ರಕ್ತದೊತ್ತಡವನ್ನು ನಿಯಂತ್ರಿಸಲು ತೆಂಗಿನಕಾಯಿ ಚಟ್ನಿ ಪ್ರಯೋಜನಕಾರಿಯಾಗಿದೆ. ಇದೇ ವೇಳೆ, ತೆಂಗಿನಕಾಯಿ ಚಟ್ನಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ.

ಇದನ್ನೂ ಓದಿ-Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ

ತೆಂಗಿನಕಾಯಿ ಚಟ್ನಿ ಮಾಡುವುದು ಹೇಗೆ?
ತೆಂಗಿನಕಾಯಿ ಚಟ್ನಿ ಮಾಡಲು, ತೆಂಗಿನಕಾಯಿ ಚಿಪ್ಪನ್ನು ತೆಗೆದು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈಗ ಅದಕ್ಕೆ ಹಸಿರು ಕೊತ್ತಂಬರಿ ಸೊಪ್ಪು, ನಿಂಬೆರಸ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆಯನ್ನು ಸ್ವಲ್ಪ ಹುರಿಯಿರಿ, ಈಗ ತೆಂಗಿನಕಾಯಿ ಚಟ್ನಿಯನ್ನು ಈ ಟೆಂಪರಿಂಗ್‌ನಲ್ಲಿ ಮಿಶ್ರಣ ಮಾಡಿ. ತೆಂಗಿನಕಾಯಿ ಚಟ್ನಿ ರೆಡಿಯಾಗುತ್ತದೆ.

ಇದನ್ನೂ ಓದಿ-Body Detox: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುವ ಸಮಯ ಬಂದಿದೆ ಎನ್ನುತ್ತವೆ ಲಕ್ಷಣಗಳು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News