ನವದೆಹಲಿ : ಮಧುಮೇಹ ಎನ್ನುವುದು ಈಗ ಸಣ್ಣ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಮಧುಮೇಹದ ಸಮಸ್ಯೆ ಇದ್ದವರು ತಮ್ಮ ಊಟ ತಿಂಡಿಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗಿರುವ ಅಗತ್ಯವಿದೆ (Health tips for diabetec). ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ (blood sugar level) ಪ್ರಮಾಣ ಹೆಚ್ಚಾಗಿ, ಪ್ರಾಣಕ್ಕೆ ಸಂಚಕಾರವಾಗಬಹುದು. ಇನ್ನು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಮಧುಮೇಹ ರೋಗಿಗಳು ಸಕ್ಕೆರೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಅದು ಸರಿ. ಆದರೆ ಸಕ್ಕರೆ ಬದಲು ಬೆಲ್ಲ  ಸೇವಿಸಬಹುದು ಎನ್ನುವ ಅಭಿಪ್ರಾಯವನ್ನು ಬಹುತೇಕರು ಹೊಂದಿರುತ್ತಾರೆ (benefits of jaggery). ಇದು ಎಷ್ಟು ಸರಿ ? ನೀವು ಕೂಡಾ ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುತ್ತೀರಾ? ಹಾಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳುವುದು ಸೂಕ್ತ. ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಸೇವಿಸುತ್ತಿದ್ದರೆ ಅದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.


ಇದನ್ನೂ ಓದಿ : ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಐದು ವಿಧಾನಗಳನ್ನು ಅನುಸರಿಸಿ, ಆರೋಗ್ಯ ವೃದ್ದಿಸುತ್ತದೆ


ಬೆಲ್ಲವು ಹಾನಿಕಾರಕವಾಗಬಹುದು :
ಆಯುರ್ವೇದದ ಪ್ರಕಾರ (ayurveda) ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಾರದು. ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಲಿದೆ (benefits of jaggery). ಆದರೆ , ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲವನ್ನು ತಿಂದರೆ ಹಾನಿಯುಂಟಾಗಬಹುದು. ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಆದರೆ ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ.


ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ :
ಬೆಲ್ಲದಲ್ಲಿ (jaggery) ಶೇಕಡಾ 65 ರಿಂದ 85 ರಷ್ಟು ಸುಕ್ರೋಸ್ ಇರುತ್ತದೆ. ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ, ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿ (Side effects of jaggery).


ಇದನ್ನೂ ಓದಿ :  Apples: ಸೇಬು ತಿನ್ನುವ ಮುನ್ನ ಸಿಪ್ಪೆ ತೆಗೆಯಬೇಕೇ ಅಥವಾ ಬೇಡವೇ? ಯಾವುದು ಹೆಚ್ಚು ಪ್ರಯೋಜನಕಾರಿ


ಬೆಲ್ಲದ ಬದಲಿಗೆ ಜೇನುತುಪ್ಪ :


ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನದೆ ಸಾವಯವ ಜೇನುತುಪ್ಪವನ್ನು (benefits of honey) ಸೇವಿಸಬಹುದು. ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು ಎಂಬ ಭಾವನೆ ಮಧುಮೇಹ ರೋಗಿಗಳಲ್ಲಿ ಇದೆ. ಆದರೆ ಇದು  ತಪ್ಪು ತಿಳುವಳಿಕೆ. ನಿಮಗೆ ಮಧುಮೇಹವಿಲ್ಲದಿದ್ದರೆ, ಸಕ್ಕರೆ ಬದಲು ಬೆಲ್ಲ ತಿನ್ನಬಹುದು. ಆದರೆ ಮಧುಮೇಹವಿದ್ದರೆ ಮಾತ್ರ ಸಕ್ಕರೆಯಂತೆ ಬೆಲ್ಲದಿಂದಲೂ ದೂರವಿರಿ . 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.