Apples: ಸೇಬು ತಿನ್ನುವ ಮುನ್ನ ಸಿಪ್ಪೆ ತೆಗೆಯಬೇಕೇ ಅಥವಾ ಬೇಡವೇ? ಯಾವುದು ಹೆಚ್ಚು ಪ್ರಯೋಜನಕಾರಿ

Apples: ಸೇಬನ್ನು ಸಿಪ್ಪೆ ಸುಲಿದ ನಂತರ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಅಥವಾ ನೀವು ಇದನ್ನು ಸಿಪ್ಪೆಯೊಂದಿಗೆ ತಿಳಿದುಕೊಳ್ಳಬೇಕು. ಅದನ್ನು ತಿನ್ನಲು ಸರಿಯಾದ ಮಾರ್ಗವನ್ನು ತಿಳಿಯಿರಿ.

Written by - Yashaswini V | Last Updated : Jan 28, 2022, 12:30 PM IST
  • ಸೇಬನ್ನು ಸಿಪ್ಪೆಯೊಂದಿಗೆ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯೇ?
  • ಸೇಬನ್ನು ಹಾಲಿನೊಂದಿಗೆ ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ
  • ಸೇಬನ್ನು ಯಾವ ಸಮಯದಲ್ಲಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ
Apples: ಸೇಬು ತಿನ್ನುವ ಮುನ್ನ ಸಿಪ್ಪೆ ತೆಗೆಯಬೇಕೇ ಅಥವಾ ಬೇಡವೇ?  ಯಾವುದು ಹೆಚ್ಚು ಪ್ರಯೋಜನಕಾರಿ title=
Know the right way to eat an apple

Apples: ನಿತ್ಯ ಒಂದು ಸೇಬಿನ ಸೇವನೆ ವೈದ್ಯರನ್ನು ದೂರ ಇರಿಸುತ್ತದೆ ಎಂಬ ಮಾತಿದೆ. ನಮ್ಮಲ್ಲಿ ಸಾಕಷ್ಟು ಮಂದಿ ಸೇಬಿನ ಹಣ್ಣನ್ನು ಸಿಪ್ಪೆ ಇಲ್ಲದೆ ತಿನ್ನಲು ಇಷ್ಟಪಡುತ್ತಾರೆ. ಆದರೆ, ತಜ್ಞರ ಪ್ರಕಾರ, ಸಿಪ್ಪೆ ಸುಲಿದ ಸೇಬುಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಆಗಿರುವುದಿಲ್ಲ. ಕಾರಣ ಸೇಬಿನ ಸಿಪ್ಪೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಹಲವು ಪೋಷಕಾಂಶಗಳಿವೆ. ಹಾಗಾಗಿಯೇ, ಸೇಬನ್ನು ಸಿಪ್ಪೆಯೊಂದಿಗೆ  ಸೇವಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಸೇಬಿನಲ್ಲಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ಸಕ್ಕರೆ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ವಿಟಮಿನ್ ಸಿ (Vitamin C), ವಿಟಮಿನ್ ಬಿ 6, ವಿಟಮಿನ್ ಎ ಮತ್ತು ವಿಟಮಿನ್ ಇ ಮುಂತಾದ ಅನೇಕ ಪೋಷಕಾಂಶಗಳಿವೆ. ಹಾಗಾಗಿ ಸೇಬನ್ನು ಸಿಪ್ಪೆಯೊಂದಿಗೆ ತಿಂದರೆ ಮಾತ್ರ ಈ ಎಲ್ಲಾ ಪೋಷಕಾಂಶಗಳ ಪ್ರಯೋಜನ ಲಭ್ಯವಾಗುತ್ತದೆ.

ಇದನ್ನೂ ಓದಿ- Sore Throat: ಗಂಟಲ ಕಿರಿಕಿರಿ ಇದ್ದರೆ ಮರೆತೂ ಸಹ ಇವುಗಳನ್ನು ತಿನ್ನಬೇಡಿ

ಹಾಲಿನೊಂದಿಗೆ ತಿನ್ನುವುದು ಪ್ರಯೋಜನಕಾರಿ:
ಹಾಲಿನೊಂದಿಗೆ ಸೇಬಿನ (Apple With Milk) ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಳಗಿನ ಉಪಾಹಾರದಲ್ಲಿ ಹಾಲಿನೊಂದಿಗೆ ಸೇಬನ್ನು ಸೇವಿಸಿ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ಸೇಬು ತಿನ್ನಲು ಉತ್ತಮ ಸಮಯ :
ನೀವು ಸೇಬಿನ ಪೋಷಕಾಂಶಗಳ ಲಾಭವನ್ನು ಪಡೆಯಲು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ಸೇಬುಗಳನ್ನು ತಿನ್ನಿರಿ. ರಾತ್ರಿಯಲ್ಲಿ ಸೇಬುಗಳನ್ನು ತಿನ್ನಬೇಡಿ. ಸೇಬುಗಳಲ್ಲಿ ಕೆಫೀನ್ ಕಂಡುಬರುತ್ತದೆ. ಇದು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಂದು ದಿನದಲ್ಲಿ ಒಂದು ಸೇಬು ಅಥವಾ ಅರ್ಧ ಸೇಬು ತಿನ್ನಿರಿ. ಅದಕ್ಕಿಂತ ಹೆಚ್ಚು ಸೇವಿಸಬಾರದು. ಸೇಬುಗಳನ್ನು ಅತಿಯಾಗಿ ಸೇವಿಸುವುದರಿಂದ ಗಂಟಲು, ನಾಲಿಗೆ, ತುಟಿಗಳು ಮತ್ತು ಮುಖದ ಊತಕ್ಕೆ ಕಾರಣವಾಗಬಹುದು ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ- ಕರೋನಾದಿಂದ ಬಚಾವಾಗಲು ಈ ಐದು ವಸ್ತುಗಳನ್ನು ತಕ್ಷಣದಿಂದಲೇ ಬಳಸಲು ಆರಂಭಿಸಿ

ತೊಳೆಯದೆ ತಿನ್ನಬೇಡಿ:
ಸೇಬುಗಳನ್ನು ತೊಳೆಯದೆ ತಿನ್ನಬೇಡಿ. ಕೆಲವೊಮ್ಮೆ ಸೇಬುಗಳನ್ನು ಹೊಳೆಯುವಂತೆ ಮಾಡಲು ಬ್ಲೀಚ್ ಅನ್ನು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸೇಬನ್ನು ತೊಳೆಯದೆ ತಿಂದರೆ, ಅದು ಹಾನಿಯನ್ನುಂಟುಮಾಡುತ್ತದೆ. ಸೇಬುಗಳನ್ನು 30 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಬಳಸುವುದರಿಂದ ಅದರ ಕಲ್ಮಶಗಳನ್ನು ತೆಗೆದುಹಾಕುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News