Eggs In Pregnancy : ಗರ್ಭಾವಸ್ಥೆಯಲ್ಲಿ ಮಹಿಳೆಯರು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.ವಾಸ್ತವವಾಗಿ, ಗರ್ಭಾವಸ್ಥೆಯಲ್ಲಿ, ಮಹಿಳೆ ತನ್ನ ಆರೋಗ್ಯ ಮತ್ತು ಭ್ರೂಣದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸ ಬೇಕಾಗುತ್ತದೆ.ಗರ್ಭಾವಸ್ಥೆಯಲ್ಲಿ ಮಹಿಳೆ ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮೊಟ್ಟೆ ಒಂದು ಸೂಪರ್ ಫುಡ್ ಆಗಿದ್ದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಆದರೆ, ಅದರ ಸ್ವಭಾವವು ಉಷ್ಣವಾಗಿರುತ್ತದೆ. ಹಾಗಿರುವಾಗ ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಗರ್ಭಿಣಿಯರ ಮನಸ್ಸಿನಲ್ಲಿ ಮೂಡುವುದು ಸಹಜ. 


COMMERCIAL BREAK
SCROLL TO CONTINUE READING

ಗರ್ಭಾವಸ್ಥೆಯಲ್ಲಿ ಮೊಟ್ಟೆ ತಿನ್ನುವುದು ಸುರಕ್ಷಿತವೇ? :
ತಜ್ಞರ ಪ್ರಕಾರ, ಗರ್ಭಿಣಿಯರು ಮೊಟ್ಟೆಯನ್ನು ಸೇವಿಸಬಹುದು.ಮೊಟ್ಟೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ.ಇದರಲ್ಲಿ ವಿಟಮಿನ್-ಬಿ12, ವಿಟಮಿನ್-ಡಿ, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಸತು,ಒಮೆಗಾ 3 ಕೊಬ್ಬಿನಾಮ್ಲಗಳು, ಕೋಲಿನ್ ಮತ್ತು ರೈಬೋಫ್ಲಾವಿನ್ ಮುಂತಾದ ಹಲವು ಪೋಷಕಾಂಶಗಳಿದ್ದು,ಗರ್ಭಿಣಿಯರಿಗೆ ಸರಿಯಾದ ಪೋಷಣೆಯನ್ನು ನೀಡುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ಸೇವಿಸುವಾಗ ಮಹಿಳೆಯರು ಸ್ವಲ್ಪ ಎಚ್ಚರಿಕೆ ವಹಿಸಬೇಕು. 


ಇದನ್ನೂ ಓದಿ : ಮಾವಿನ ಹಣ್ಣು ತಿಂದ ಬಳಿಕ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ 


ಗರ್ಭಾವಸ್ಥೆಯಲ್ಲಿ ಮೊಟ್ಟೆ ತಿನ್ನುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ :
ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತ.  ಆದರೆ, ಮೊಟ್ಟೆಯನ್ನು ಸೇವಿಸುವಾಗ ಸರಿಯಾಗಿ ಬೇಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ.ಅರ್ಧ ಬೆಂದ ಮೊಟ್ಟೆ ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ.ಇದು ಫುಡ್ ಪಾಯಿಸನ್ ಉಂಟು ಮಾಡುತ್ತದೆ. ಮೊಟ್ಟೆಯನ್ನು ಸರಿಯಾಗಿ ಬೇಯಿಸಿದಾಗ ಅದರಲ್ಲಿರುವ  ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.ಇದರಿಂದಾಗಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿಲ್ಲ.ಗರ್ಭಿಣಿಯಾಗಿದ್ದರೆ,ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆಯ ಆಮ್ಲೆಟ್ ಅನ್ನು ತಿನ್ನಬಹುದು.ಹಸಿ ಅಥವಾ ಆಫ್ ಬಾಯಿಲ್ ನಂಥಹ ಆಹಾರ ಗರ್ಭಾವಸ್ಥೆಯಲ್ಲಿ ನಿಷಿದ್ದ. ಅದರಲ್ಲಿಯೂ  ಗರ್ಭಿಣಿಯರು ದಿನಕ್ಕೆ ಒಂದರಿಂದ ಎರಡು ಮೊಟ್ಟೆಗಳನ್ನು ಮಾತ್ರ ಸೇವಿಸಬೇಕು. 


ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು : 
ಮೊಟ್ಟೆಯಲ್ಲಿರುವ ಪ್ರೋಟೀನ್ ಭ್ರೂಣದ ಜೀವಕೋಶಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ : ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದು


ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ :
ಮೊಟ್ಟೆಯಲ್ಲಿ ಕೋಲಿನ್ ಅಂಶವಿದ್ದು,ಇದು ಮಗುವಿನ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಸಹಕಾರಿಯಾಗಿದೆ.


ಮೂಳೆಗಳನ್ನು ಬಲಪಡಿಸುತ್ತದೆ :
ಮೊಟ್ಟೆ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.ಇದು ಗರ್ಭಿಣಿ ಮತ್ತು ಭ್ರೂಣದ ಮೂಳೆಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಮೊಟ್ಟೆ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತವೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.