Mint leaves for cold and cough: ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು. ಈ ಪೈಕಿ ಈ ಸೊಪ್ಪು ಕೂಡಾ ಉತ್ತಮ ಪರಿಹಾರ.
Mint leaves for cold and cough : ಹವಾಮಾನ ಬದಲಾಗುತ್ತಿದ್ದಂತೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ತಾಪಮಾನ ಅಥವಾ ಮಾಲಿನ್ಯದ ಏರಿಕೆ ಮತ್ತು ಇಳಿಕೆಯಿಂದಾಗಿ ಸಂಭವಿಸುವ ಅಲರ್ಜಿಯ ಪ್ರತಿಕ್ರಿಯೆಗಳಾಗಿವೆ. ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ನೀಡುವ ನೈಸರ್ಗಿಕ ವಸ್ತುವೆಂದರೆ ಪುದೀನ ಎಲೆಗಳು. ಆಯುರ್ವೇದದಲ್ಲಿಯೂ ಪುದೀನ ಎಲೆಗಳನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಔಷಧಿಯಾಗಿ ನೋಡಲಾಗುತ್ತದೆ.
ಒಂದು ಹಿಡಿ ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಹಾಗೆ ಮೂಸಿ ನೋಡಿ. ಪದೇ ಪದೇ ದಿನದಲ್ಲಿ ಈ ರೀತಿ ಮಾಡುವುದರಿಂದ ಶೀತ ಮತ್ತು ತಲೆನೋವಿನಿಂದ ಮುಕ್ತಿ ಪಡೆಯಬಹುದು .
ಪುದೀನ ಎಲೆಗಳನ್ನು ಜಗಿಯುವುದರಿಂದ ಎದೆಯ ಬಳಿಯ ಕಂಜೆಶನ್ ಕಡಿಮೆಯಾಗುತ್ತದೆ. ಇದು ಕಫ ಕರಗಿಸಲು ಸಹಾಯ ಮಾಡುತ್ತದೆ.ಉಸಿರಾಟದ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಪುದಿನಾ ರಸವನ್ನು ಶರಬತ್ತು ಮತ್ತು ಇತರ ಪಾನೀಯಗಳೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಶಾಖದಿಂದ ಪರಿಹಾರ ಸಿಗುತ್ತದೆ.
ಪುದೀನಾ ಆಂಟಿವೈರಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಪುದೀನ ಎಲೆಗಳು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.
ಸೂಚನೆ: ಆತ್ಮೀಯ ಓದುಗರೇ, ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಜೀ ನ್ಯೂಸ್ ಇದನ್ನು ಅನುಮೊದಿಸುವುದಿಲ್ಲ.