Cholesterol Lowering Diet: ಈ ಡ್ರೈ ಫ್ರೂಟ್ ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್
Cholesterol Lowering Diet: ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಾವು ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿದಿರಬೇಕು.
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಡ್ರೈ ಫ್ರೂಟ್: ಒಣ ಹಣ್ಣನ್ನು ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಅಂತಹ ಒಂದು ಹಣ್ಣನ್ನು ಗೋಡಂಬಿ. ಭಾರತದಲ್ಲಿ ಗೋಡಂಬಿ ಯನ್ನು ತುಂಬಾ ಇಷ್ಟಪಟ್ಟು ತಿನ್ನಲಾಗುತ್ತದೆ. ಯಾವುದೇ ಸಿಹಿ ಖಾದ್ಯ ಇದಿಲ್ಲದೇ ಅಪೂರ್ಣ ಎಂದೆನಿಸುತ್ತದೆ. ಆದರೆ, ಗೋಡಂಬಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರಿದು ಸತ್ಯವೇ? ನಿಜವಾಗಿಯೂ ಗೋಡಂಬಿಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆಯೇ? ಎಂದು ತಿಳಿಯೋಣ...
ಗೋಡಂಬಿ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೇ?
ಬೇಸಿಗೆ ಕಾಲದಲ್ಲಿ ಒಣಹಣ್ಣನ್ನು ಕಡಿಮೆ ತಿನ್ನುತ್ತಿದ್ದರೂ ಅದರ ಪರಿಣಾಮ ಬಿಸಿಯಾಗಿರುತ್ತದೆ. ಆದರೆ ಇದು ಖಂಡಿತವಾಗಿಯೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕೆಲವರು ಒಣಹಣ್ಣುಗಳಲ್ಲಿ ಗೋಡಂಬಿ ಸೇವಿಸುವುದರಿಂದ ದೇಹದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂದು ಭಯಪಡುತ್ತಾರೆ. ಆದರಿದು ಸತ್ಯವಲ್ಲ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ- Weight Loss Tips: ಜಿಮ್‌ಗೆ ಹೋಗಬೇಕಾಗಿಲ್ಲ, ಈ ತರಕಾರಿ ಸೇವಿಸಿದರೂ ಕಡಿಮೆ ಆಗುತ್ತೆ ತೂಕ
ಗೋಡಂಬಿಯಲ್ಲಿ ಕಂಡುಬರುವ ಪೋಷಕಾಂಶಗಳು:
ಗೋಡಂಬಿಯಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್, ತಾಮ್ರ, ಮ್ಯಾಂಗನೀಸ್, ರಂಜಕ, ಮೆಗ್ನೀಸಿಯಮ್, ಸತು, ಥಯಾಮಿನ್, ವಿಟಮಿನ್ ಬಿ 6, ವಿಟಮಿನ್ ಕೆ, ಕಬ್ಬಿಣ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಇರುವುದರಿಂದ ಗೋಡಂಬಿಯನ್ನು ಪೋಷಕಾಂಶಗಳ ಖಜಾನೆ ಎಂದು ಕರೆಯಲಾಗುತ್ತದೆ, ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ.
ಗೋಡಂಬಿ ಹೃದಯಕ್ಕೆ ಒಳ್ಳೆಯದು:
ಗೋಡಂಬಿಯನ್ನು ತಿನ್ನುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿ ಉಳಿಯುತ್ತದೆ, ಜೊತೆಗೆ ಕಾಲಿನ ಸೆಳೆತವೂ ಕಡಿಮೆ ಆಗುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ಈ ಸೊಪ್ಪು ತಿಂದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ಗೋಡಂಬಿ ತಿನ್ನುವ ಇತರ ಪ್ರಯೋಜನಗಳು:
1. ಈ ಡ್ರೈ ಫ್ರೂಟ್ ಚರ್ಮಕ್ಕೆ ಒಳ್ಳೆಯದು ಮತ್ತು ಇದು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
2. ಗೋಡಂಬಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ, ಅದಕ್ಕಾಗಿಯೇ ವಿದ್ಯಾರ್ಥಿಗಳು ಇದನ್ನು ಹೆಚ್ಚು ತಿನ್ನುತ್ತಾರೆ.
3. ಅಧಿಕ ರಕ್ತದೊತ್ತಡ ರೋಗಿಗಳಿಗೆ ಸಹ ಗೋಡಂಬಿಯನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
4. ಗೋಡಂಬಿಯನ್ನು ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯಕ ಎಂದು ಹೇಳಲಾಗುತ್ತದೆ.
5. ಇದರಿಂದ ದೇಹಕ್ಕೆ ಚೈತನ್ಯ ದೊರೆತು ಮೂಳೆಗಳೂ ಬಲಿಷ್ಠವಾಗುತ್ತವೆ.
6. ಗೋಡಂಬಿಯಲ್ಲಿ ತಾಮ್ರ ಮತ್ತು ಕಬ್ಬಿಣದ ಅಂಶವಿದೆ, ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ.
ಆದಾಗ್ಯೂ, ಯಾವುದನ್ನೇ ಆದರೂ ಹಿತ-ಮಿತವಾಗಿ ಬಳಸುವುದರಿಂದ ಮಾತ್ರವೇ ಅದರ ಪ್ರಯೋಜನ ಲಭ್ಯವಾಗುತ್ತದೆ. ಹಾಗಾಗಿ, ಗೋಡಂಬಿಯಿಂದ ಇಷ್ಟೆಲ್ಲಾ ಪ್ರಯೋಜನಗಳು ಲಭ್ಯವಿದ್ದರೂ ಇದನ್ನು ಅತಿಯಾಗಿ ತಿನ್ನುವುದನ್ನು ತಪ್ಪಿಸಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.