ಡಯಾಬಿಟೀಸ್ ರೋಗಿಗಳು ಈ ಸೊಪ್ಪು ತಿಂದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್

 ಮಧುಮೇಹ ರೋಗಿಗಳಿಗೆ ದೊಡ್ಡ ಸಮಸ್ಯೆ ಎಂದರೆ ಏನು ತಿನ್ನಬೇಕು ಯಾವುದನ್ನು ತಿನ್ನಾರದು ಎಂದು ನಿರ್ಧರಿಸುವುದು. ಯಾಕೆಂದರೆ ಮಧುಮೇಹವಿದ್ದಾಗ  ಆಹಾರ ತಿಂಡಿಗಳ ಮೇಲೆ ಅತಿಯಾದ ಹಿಡಿತ ಇಟ್ಟುಕೊಂಡಿರಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. 

Written by - Ranjitha R K | Last Updated : Jun 16, 2022, 08:53 AM IST
  • ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಮಧುಮೇಹದಿಂದ ಬಳಲುತ್ತಿದ್ದಾರೆ.
  • ಭಾರತವನ್ನು ಮಧುಮೇಹದ ರಾಜಧಾನಿ ಎಂದೂ ಕರೆಯಲಾಗುತ್ತದೆ.
  • ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಡಯಾಬಿಟೀಸ್ ರೋಗಿಗಳು ಈ ಸೊಪ್ಪು ತಿಂದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್ title=
Fenugreek Leaves for diabetes (file photo)

ಬೆಂಗಳೂರು : ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಮಧುಮೇಹದಿಂದ ಬಳಲುತ್ತಿದ್ದಾರೆ.  ಇನ್ನು ಭಾರತವನ್ನು ಮಧುಮೇಹದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಮಧುಮೇಹ ರೋಗಕ್ಕೆ ಗುರಿಯಾದವರ ಸಂಖ್ಯೆ ಕೋಟಿಗಳಲ್ಲಿದೆ. ಇದೊಂದು ವಿಚಿತ್ರ ಕಾಯಿಲೆ. ಈ ಕಾಯಿಲೆ ಯಾರಿಗಾದರೂ ಒಮ್ಮೆ ಬಂದರೆ, ನಂತರ ಜೀವನ ಪೂರ್ತಿ ಇದರಿಂದ ಬಳಲಬೇಕಾಗುತ್ತದೆ. ತಾವು ಏನು ತಿನುತ್ತೇವೆ, ಏನು ಕುಡಿಯುತ್ತೇವೆ ಎನ್ನುವುದರ ಸಂಪೂರ್ಣ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅನೇಕ ರೋಗಗಳು ಎದುರಾಗುವ ಅಪಾಯವಿರುತ್ತದೆ. 

ಮಧುಮೇಹವಿದ್ದಾಗ ಆರೋಗ್ಯಕರ ಆಹಾರವನ್ನು ಸೇವಿಸಿ :
ಮಧುಮೇಹ ರೋಗಿಗಳಿಗೆ ಸಿಹಿ ಆಹಾರಗಳನ್ನು ತ್ಯಜಿಸುವಂತೆ ಸೂಚಿಸಲಾಗುತ್ತದೆ. ಇಲ್ಲಿಯವರೆಗೆ ಈ ರೋಗಕ್ಕೆ ಯಾವುದೇ ಒಂದು ರೀತಿಯ ನಿರ್ದಿಷ್ಟ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ಇದರಿಂದ ಎದುರಾಗುವ ಅಪಾಯವನ್ನು ತಪ್ಪಿಸಬಹುದು.  

ಇದನ್ನೂ ಓದಿ : Face Care: ಮಲಗುವ ಮುನ್ನ ಈ ಸಣ್ಣ ಕೆಲಸ ಮಾಡಿ ಮೊಡವೆ ಸಮಸ್ಯೆಗೆ ಹೇಳಿ ಗುಡ್ ಬೈ!

ಮಧುಮೇಹಿಗಳು ಮೆಂತ್ಯ ಮತ್ತು ಅದರ ಸೊಪ್ಪನ್ನು ಸೇವಿಸಿ :
ಇಲ್ಲಿ ನಾವು ಮೆಂತ್ಯ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ.  ಈ ಸೊಪ್ಪು ಮಧುಮೇಹ ರೋಗಿಗಳಿಗೆ ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಮೆಂತ್ಯೆ ಸೊಪ್ಪು ಇದರಲ್ಲಿ ಪ್ರೋಟೀನ್, ನೈಸರ್ಗಿಕ ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್, ವಿಟಮಿನ್-ಬಿ 6, ವಿಟಮಿನ್ ಎ, ವಿಟಮಿನ್ ಕೆ, ಫೋಲೇಟ್,  ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. 
 
ಮಧುಮೇಹದಲ್ಲಿ ಮೆಂತ್ಯೆ ಮತ್ತು ಅದರ ಸೊಪ್ಪಿನ ಪ್ರಯೋಜನಗಳು : 

1.ಮೆಂತ್ಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
2. ಮೆಂತ್ಯದಲ್ಲಿ Soluble Fiber ಕಂಡುಬರುತ್ತದೆ. ಇದು ಸಕ್ಕರೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
3.  ಕೇವಲ ಮೆಂತ್ಯಯನ್ನು ಮಾತ್ರ ಮಸಾಲೆಯಾಗಿ ಬಳಸಬೇಕಿಲ್ಲ. ಅದರ ಸೊಪ್ಪನ್ನು ಲುದಾ ತಿನ್ನಬೇಕು. 
4. ಮೆಂತತ್ಯೆ ಮತ್ತು ಅದರ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
5. ಮೆಂತ್ಯೆ ಸೊಪ್ಪು ಹೃದಯದ ಆರೋಗ್ಯಕ್ಕೆ ಕೂಡಾ ಭಾರೀ ಉತ್ತಮವಾದುದು, ಒಂದರ್ಥದಲ್ಲಿ ಆಯುರ್ವೇದ ಔಷಧಕ್ಕಿಂತ ಇದು ಕಡಿಮೆಯೇನಲ್ಲ. 
6. ಪ್ರತಿದಿನ ಬೆಳಿಗ್ಗೆ ಮೆಂತ್ಯ ನೀರನ್ನು ಕುಡಿದರೆ, ಹೆಚ್ಚುತ್ತಿರುವ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ :Juice In Empty Stomach: ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳ ಜ್ಯೂಸ್ ಕುಡಿದರೆ ಎದುರಾಗುವುದು ಸಮಸ್ಯೆ

 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News