Liver damage symptoms on Tongue : ನಾಲಿಗೆ ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿ ನೀಡುತ್ತದೆ.ಈ ಕಾರಣಕ್ಕಾಗಿಯೇ ಅಸ್ವಸ್ಥರಾದಾಗ ವೈದ್ಯರ ಬಳಿಗೆ ಹೋದಾಗ,ವೈದ್ಯರು ಮೊದಲು ನಿಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ನಮ್ಮ ದೇಹದ ಯಾವುದೇ ಭಾಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಅದು ನಾಲಗೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಯಕೃತ್ತು, ಜೀರ್ಣಾಂಗ ವ್ಯವಸ್ಥೆ ಮತ್ತು ಇತರ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾಲಗೆ ಮೂಲಕವೇ ತಿಳಿದುಕೊಳ್ಳಬಹುದು.


COMMERCIAL BREAK
SCROLL TO CONTINUE READING

ನಾಲಗೆ ಹೇಳುತ್ತದೆ ಲಿವರ್ ಡ್ಯಾಮೇಜ್ ಲಕ್ಷಣಗಳನ್ನು : 
ಯಕೃತ್ತು ದೇಹದ ಪ್ರಮುಖ ಅಂಗವಾಗಿದ್ದು,ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಶುದ್ಧೀಕರಿಸುತ್ತದೆ.ಆಹಾರವನ್ನು ಜೀರ್ಣಿಸಿಕೊಳ್ಳಲು ಕೂಡಾ ಇದು  ಸಹಾಯ ಮಾಡುತ್ತದೆ.ಹಾಗಾಗಿಯೇ ಯಕೃತ್ತು ಹಾನಿಗೊಳಗಾದಾಗ,ಅದರ ಪರಿಣಾಮ ದೇಹದ ಇತರ ಭಾಗಗಳ ಮೇಲೂ ಗೋಚರಿಸುತ್ತದೆ.ಲಿವರ್ ಹಾನಿಗೊಳಗಾದರೆ ನಮ್ಮ ನಾಲಗೆಯ ಮೇಲೆ ಕೂಡಾ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  


ಇದನ್ನೂ ಓದಿ :ರಾತ್ರಿ ಮಲಗುವ ಮುನ್ನ ಒಂದೇ ಒಂದು ಚಮಚ ಈ ಜೀಜ ಸೇವಿಸಿ !ಯೂರಿಕ್ ಆಸಿಡ್ ಕರಗುವುದಲ್ಲದೆ ಕೀಲು ನೋವು ಊತ ಕೂಡಾ ಕಡಿಮೆಯಾಗುವುದು !


ನಾಲಿಗೆ ಮೇಲೆ ಬಿರುಕುಗಳು : 
ನಾಲಿಗೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ,ಅದನ್ನು  ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.ಈ ಬಿರುಕುಗಳು ಯಕೃತ್ತಿಗೆ ಸಂಬಂಧಿಸಿದ ಕೆಲವು ಗಂಭೀರ ಸಮಸ್ಯೆ ಅಥವಾ ಕಾಯಿಲೆಯ ಲಕ್ಷಣವಾಗಿರಬಹುದು.


ನಾಲಗೆ ಒಣಗುವುದು : 
ಸಾಕಷ್ಟು ಪ್ರಮಾಣದ ನೀರು ಕುಡಿದ ನಂತರವೂ ನಾಲಿಗೆ ಮತ್ತೆ ಮತ್ತೆ ಒಣಗುತ್ತಿದ್ದರೆ, ಅದು ಫ್ಯಾಟಿ ಲಿವರ್ ನ ಲಕ್ಷಣವಾಗಿರಬಹುದು. 


ನಾಲಿಗೆ ಮೇಲೆ ಗುಳ್ಳೆಗಳು : 
ನಾಲಿಗೆಯಲ್ಲಿ ಸಣ್ಣ ಮೊಡವೆಗಳ ರೀತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ಅದರಲ್ಲಿ ನೀರು ತುಂಬುವುದನ್ನು ಗಮನಿಸಿದರೆ,ಅದು ಯಕೃತ್ತಿನ ಹಾನಿಯ ಸಂಕೇತವಾಗಿರುತ್ತದೆ. ಪಿತ್ತಜನಕಾಂಗವು ವಿಷವನ್ನು ಸರಿಯಾಗಿ ತೆರವುಗೊಳಿಸಲು ಸಾಧ್ಯವಾಗದಿದ್ದಾಗ,ಅದು ದೇಹದಲ್ಲಿ ಸಣ್ಣ ಗುಳ್ಳೆಗಳನ್ನು ಉಂಟುಮಾಡಬಹುದು.


ಇದನ್ನೂ ಓದಿ :ಈ ಕಾಳು ನೆನೆಸಿದ ನೀರು ಕುಡಿಯಿರಿ ಸಾಕು.. ಕೀಲುಗಳಲ್ಲಿನ ಯುರಿಕ್‌ ಆಸಿಡ್‌ ಕರಗಿ ದೇಹದಿಂದ ಹೊರ ಹೋಗುವುದು!


ನಾಲಿಗೆ ಮೇಲೆ ಹಳದಿ ಲೇಪನ : 
ಮೌಖಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದ ಕಾರಣ,ನಾಲಿಗೆಯ ಬಣ್ಣವು ಹಳದಿ ಬಣ್ಣಕ್ಕೆ ತಿರುಗಬಹುದು.ಆದರೆ,ಪ್ರತಿದಿನ ನಿಮ್ಮ ನಾಲಿಗೆಯನ್ನು ಚೆನ್ನಾಗಿ ಶುಚಿಗೊಳಿಸಿದ ನಂತರವೂ ನಾಲಗೆಯ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಲಿವರ್ ಸಂಬಂಧಿತ ಸಮಸ್ಯೆಗಳ ಸಂಕೇತವಾಗಿರಬಹುದು.ಆದ್ದರಿಂದ ತಕ್ಷಣ  ವೈದ್ಯರನ್ನು ಸಂಪರ್ಕಿಸಿ ಮತ್ತು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.