ನವದೆಹಲಿ: ನಿಮ್ಮ ಮೂತ್ರದ ಬಣ್ಣದಿಂದ ನೀವು ಯಾವ ಕಾಯಿಲೆಯಿಂದ ಬಳಲುತ್ತಿದ್ದೀರಿ ಎನ್ನುವುದನ್ನು ಹೇಳಬಹುದು (Colour Of Urine). ನಮ್ಮ ದೇಹದಲ್ಲಿ ಸಂಭವಿಸುವ ಎಲ್ಲಾ ಬದಲಾವಣೆಗಳನ್ನು ಮೂತ್ರದ ಬಣ್ಣದಿಂದ ಕಂಡು ಹಿಡಿಯಬಹುದು.   ಮೂತ್ರದ ಬಣ್ಣ ಬದಲಾದರೆ ಅದಕ್ಕೆ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.   


COMMERCIAL BREAK
SCROLL TO CONTINUE READING

ಮೂತ್ರ ಬಣ್ಣ ಗಾಢ ವಾಗಿದ್ದರೆ ಅಪಾಯದ ಸಂಕೇತ : 
ವರದಿಗಳ ಪ್ರಕಾರ, ಮೂತ್ರದ ಬಣ್ಣವು ಗಾಢವಾಗಿದ್ದರೆ, ದೇಹದೊಳಗೆ ರೋಗಗಳ ಅಪಾಯವು ಹೆಚ್ಚಾಗಿದೆ ಎಂದರ್ಥ. ವಾಸ್ತವವಾಗಿ, ಮೂತ್ರವು (Urine) ಯುರೋಕ್ರೋಮ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಯುರೋಕ್ರೋಮ್ ಹಳದಿ ವರ್ಣದ್ರವ್ಯವಾಗಿದೆ. ಈ ಕಾರಣದಿಂದಾಗಿ ಮೂತ್ರದ ಬಣ್ಣವು ಹಳದಿ ಬಣ್ಣದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಔಷಧಿಗಳ ಬಳಕೆಯಿಂದಲೂ ಮೂತ್ರದ ಬಣ್ಣ ಬದಲಾಗುತ್ತದೆ (reason for urine colour change). 


ಇದನ್ನೂ ಓದಿ : Morning Drinks: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಡ್ರಿಂಕ್ಸ್ ಸೇವಿಸಿದರೆ ಸ್ಲಿಮ್ ಆಗಬಹುದು!


ಪಾರದರ್ಶಕ ಬಣ್ಣದ ಮೂತ್ರ  :
 ಮೂತ್ರವು ಪಾರದರ್ಶಕ ಬಣ್ಣದ್ದಾಗಿದ್ದರೆ, ನೀವು ಹೆಚ್ಚು ನೀರು (Water) ಕುಡಿಯುತ್ತೀರಿ ಎನ್ನುವುದನ್ನು  ಅರ್ಥಮಾಡಿಕೊಳ್ಳಿ. ಹೈಡ್ರೀಕರಿಸಿರುವುದು ಒಳ್ಳೆಯದು, ಆದರೆ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹದ ಎಲೆಕ್ಟ್ರೋಲೈಟ್‌ಗಳು ಕಡಿಮೆಯಾಗಬಹುದು. ಕೆಲವೊಮ್ಮೆ ಮೂತ್ರದ ಬಣ್ಣವು ಪಾರದರ್ಶಕವಾಗಿ ಕಂಡುಬಂದರೆ, ಭಯಪಡುವ ಅಗತ್ಯವಿಲ್ಲ. ನಿಮ್ಮ ಮೂತ್ರವು ಯಾವಾಗಲೂ ಪಾರದರ್ಶಕವಾಗಿ ಕಾಣುತ್ತಿದ್ದರೆ, ನೀರು ಕುಡಿಯುವುದನ್ನು ಸ್ವಲ್ಪ ಕಡಿಮೆ ಮಾಡಬೇಕು ಎನ್ನುವುದರ ಸಂಕೇತವಾಗಿರುತ್ತದೆ.  


ಮೂತ್ರವು ಗಾಢ ಹಳದಿ ಬಣ್ಣವಾಗಿದ್ದರೆ :  
ಯುರೋಕ್ರೋಮ್ ವರ್ಣದ್ರವ್ಯಗಳಿಂದಾಗಿ ಮೂತ್ರದ ಬಣ್ಣವು ತಿಳಿ ಹಳದಿಯಿಂದ ಗಾಢ ಹಳದಿಗೆ ಬದಲಾಗುತ್ತದೆ. ನೀರನ್ನು ಕುಡಿಯುವಾಗ, ಈ ವರ್ಣದ್ರವ್ಯವು ದುರ್ಬಲಗೊಳ್ಳುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ (Himoglobin)ವಿಭಜನೆಯ ಕಾರಣದಿಂದಾಗಿ ಯುರೋಕ್ರೋಮ್ ರೂಪುಗೊಳ್ಳುತ್ತದೆ. ಕೆಲವೊಮ್ಮೆ ರಕ್ತದಲ್ಲಿ ವಿಟಮಿನ್-ಡಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮೂತ್ರದ ಗಾಢ ಹಳದಿ ಬಣ್ಣವು ಕಂಡುಬರುತ್ತದೆ ಎನ್ನಲಾಗಿದೆ.  


ಇದನ್ನೂ ಓದಿ : ಬೆಳಗ್ಗಿನ ಹೊತ್ತು ಎಷ್ಟಿರಬೇಕು ರಕ್ತದಲ್ಲಿನ ಸಕ್ಕರೆ ಪ್ರಮಾಣ? ಈ ಬಗ್ಗೆ ಅಸಡ್ಡೆ ಬೇಡವೇ ಬೇಡ


ಕೆಂಪು ಮತ್ತು ಗುಲಾಬಿ ಬಣ್ಣದ ಮೂತ್ರ : 
 ಕೆಂಪು ಮತ್ತು ಗುಲಾಬಿ ಬಣ್ಣದ ಮೂತ್ರ ವಿಸರ್ಜನೆಯಾಗುತ್ತಿದ್ದರೆ, ಭಯಪಡುವ ಅಗತ್ಯವಿಲ್ಲ.  ಏಕೆಂದರೆ ಅದು ನೀವು ಏನು ತಿಂದಿದ್ದೀರಿ ಎನ್ನುವುದನ್ನು ಕೂಡಾ ಅವಲಂಬಿಸಿರುತ್ತದೆ. ಇದರ ನಂತರವೂ, ನಿಮ್ಮ ಮೂತ್ರದ ಬಣ್ಣವು ನಿರಂತರವಾಗಿ ಗುಲಾಬಿ ಮತ್ತು ಕೆಂಪು ಬಣ್ಣದಿನದ ಕೂಡಿದ್ದರೆ ಸ್ವಲ್ಪ ಜಾಗರೂಕರಾಗಿರಬೇಕು. ಇದು ಬೇರೆ ಬೇರೆ ರೋಗದ ಲಕ್ಷಣವಾಗಿರಬಹುದು.  ಮೂತ್ರಪಿಂಡದ ಕಲ್ಲು (Kidney stone), ಬ್ಲಾಡರ್ ಮತ್ತು ಕಿಡ್ನಿಯಲ್ಲಿ ಟ್ಯೂಮರ್ ಇದ್ದರೂ ಮೂತ್ರ ಕೆಂಪು ಮತ್ತು ಗುಲಾಬಿ ಬಣ್ಣವನ್ನು ಹೊಂದಿರಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.