ನವದೆಹಲಿ : ನಿಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ನಮಗೆ ಗೊತ್ತಿಲ್ಲದಂತೆಯೇ, ಹೃದಯ ಸಂಬಂಧಿ ಕಾಯಿಲೆಗಳ (Heart disease) ಅಪಾಯವನ್ನು ಹೆಚ್ಚಿಸುತ್ತವೆ. ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ತಜ್ಞರ ಪ್ರಕಾರ, ಆರೋಗ್ಯಕರ ಆಹಾರ (heakthy food) ಸೇವನೆ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾದಿಸುವುದರ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.


COMMERCIAL BREAK
SCROLL TO CONTINUE READING

ದಿನಕ್ಕೆ 40 ನಿಮಿಷ ವ್ಯಾಯಾಮ :
ಇತ್ತೀಚಿನ ಜೀವನಶೈಲಿಯನ್ನು (lifestyle) ನೋಡಿದರೆ, ಉತ್ತಮ ಆರೋಗ್ಯಕ್ಕಾಗಿ, ಪ್ರತಿದಿನ 40 ನಿಮಿಷ ವ್ಯಾಯಾಮ (daily exercise) ಮಾಡುವುದು ಬಹಳ ಅವಶ್ಯಕ. ವಾರದಲ್ಲಿ 5 ದಿನ ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು. ಇದು ತೂಕ ನಷ್ಟ, ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.


ಇದನ್ನೂ ಓದಿ : ಸ್ನಾನ ಮಾಡುವಾಗ ನೀವು ಕೂಡ ಈ ತಪ್ಪನ್ನು ಮಾಡುತ್ತಿದ್ದೀರಾ? ಬ್ರೈನ್ ಸ್ಟ್ರೋಕ್ ಗೆ ಬಲಿಯಾಗಬಹುದು!


ಸದಾ ಸಂತೋಷದಿಂದ ಇರಲು ಪ್ರಯತ್ನಿಸಿ :
ಸಂತೋಷದಿಂದ ಇದ್ದಾಗ, ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್ ಗಳ ಬಿಡುಗಡೆಯಾಗುತ್ತದೆ.  ಇದು ರಕ್ತದೊತ್ತಡವನ್ನು (blood pressure) ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಭಾವನಾತ್ಮಕ ಒತ್ತಡವನ್ನು ನಿರ್ವಹಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಮಾಡಿದರೆ ಸಹಾಯವಾಗುತ್ತದೆ. 


ಸರಿಯಾಗಿ ನಿದ್ದೆ ಮಾಡುವುದು : 
ಉತ್ತಮ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ (heart disease) ಅಪಾಯವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ರಾತ್ರಿ ವೇಳೆ  7-8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು.  ರಾತ್ರಿ ಸರಿಯಾಗಿ ನಿದ್ದೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರ ಇಡಬಹುದು.  


ಇದನ್ನೂ ಓದಿ : Almonds: ಶುಗರ್, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಧ್ಯಾಹ್ನದ ಊಟಕ್ಕೂ ಮೊದಲು ಇದನ್ನು ತಪ್ಪದೇ ಸೇವಿಸಿ


ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ : 
WHO ಅಂಕಿಅಂಶಗಳ ಪ್ರಕಾರ, ಧೂಮಪಾನ ಮತ್ತು ಮದ್ಯಪಾನದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದು ಹೃದ್ರೋಗದಿಂದ ಸಾವಿನ ಅಪಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತದೆ.  ಮದ್ಯಪಾನ ಮತ್ತು ಧೂಮಪಾನದಿಂದ ಅಧಿಕ ರಕ್ತದೊತ್ತಡಡ ಸಮಸ್ಯೆ ಉಂಟಾಗಬಹುದು. ಇದು ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.


ಆಹಾರದಲ್ಲಿ ಕಡಿಮೆ ಪ್ರಮಾಣದ ಎಣ್ಣೆಬಳಕೆ :
ಆಹಾರದಲ್ಲಿ ಎಣ್ಣೆಯ ಸೇವನೆಯನ್ನು ಕಡಿಮೆ ಮಾಡಿ. ಅಂದರೆ ಆಹಾರದಲ್ಲಿ ಎಣ್ಣೆಯನ್ನು  ಮಿತವಾಗಿ ಬಳಸಿ. ಆಲಿವ್  (benefits of olive oil), ಕ್ಯಾನೋಲಾ ಮತ್ತು ಅಗಸೆಬೀಜದಂತಹ ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿರುವ ಎಣ್ಣೆಯನ್ನು ಪ್ರತಿ ತಿಂಗಳು ಅರ್ಧ ಲೀಟರ್ ನಷ್ಟು ಸೇವಿಸುವುದು ಭಾರೀ ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಬೀಜಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸಿ.


ಫುಲ್ ಬ್ಲಡ್ ಕೌಂಟ್ , ಕೊಲೆಸ್ಟ್ರಾಲ್ ಮಟ್ಟ, ಮೂತ್ರಪಿಂಡ, ಯಕೃತ್ತು ಮತ್ತು ಥೈರಾಯ್ಡ್ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇಸಿಜಿ ಈ ಎಲ್ಲಾ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.