ಚಳಿಗಾಲದಲ್ಲಿ ಈ 1 ಕಾರಣದಿಂದ ಹೃದಯಾಘಾತದ ಅಪಾಯ 6 ಪಟ್ಟು ಹೆಚ್ಚಾಗುತ್ತೆ: ತಕ್ಷಣ ಈ ಅಭ್ಯಾಸ ಬದಲಾಯಿಸಿ

ಅಧ್ಯಯನವೊಂದರಲ್ಲಿ ಚಳಿಗಾಲದಲ್ಲಿ ಜ್ವರ ಬಂದಾಗ ನಮ್ಮ ಹೃದಯವು ಒತ್ತಡಕ್ಕೊಳಗಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Written by - Puttaraj K Alur | Last Updated : Dec 25, 2021, 01:27 PM IST
  • ಚಳಿಗಾಲದಲ್ಲಿ ಸಾಮಾನ್ಯವಾಗಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ
  • ನಿಮ್ಮ ಕೆಟ್ಟ ಅಭ್ಯಾಸಗಳು ಹೃದಯದ ರಕ್ತನಾಳ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ
  • ವೈರಲ್ ಸೋಂಕು ಕೂಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ
ಚಳಿಗಾಲದಲ್ಲಿ ಈ 1 ಕಾರಣದಿಂದ ಹೃದಯಾಘಾತದ ಅಪಾಯ 6 ಪಟ್ಟು ಹೆಚ್ಚಾಗುತ್ತೆ: ತಕ್ಷಣ ಈ ಅಭ್ಯಾಸ ಬದಲಾಯಿಸಿ title=
ಚಳಿಗಾಲದಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚಿರುತ್ತದೆ

ನವದೆಹಲಿ: ಬೇಸಿಗೆಗಿಂತ ಶೀತ ವಾತಾವರಣದಲ್ಲಿ ಹೃದಯಾಘಾತ(Heart Attack)ದ ಅಪಾಯವು ಎರಡು ಪಟ್ಟು ಹೆಚ್ಚು. ಸಂಶೋಧನೆಯೊಂದರ ಪ್ರಕಾರ ಜ್ವರ ಬಂದ 1 ವಾರದಲ್ಲಿ ಹೃದಯಾಘಾತದ ಅಪಾಯವು 6 ಪಟ್ಟು ಹೆಚ್ಚಾಗಬಹುದು. ಆದ್ದರಿಂದ ಹೃದ್ರೋಗಿಗಳು ಈ ಋತುವಿನಲ್ಲಿ ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಹೃದಯ ರಕ್ತನಾಳದ ವ್ಯವಸ್ಥೆಗೆ ಹಾನಿ

ತಜ್ಞರ ಪ್ರಕಾರ ನಿಮ್ಮ ಕೆಟ್ಟ ಜೀವನಶೈಲಿಯು ಹೃದಯ ರಕ್ತನಾಳದ ವ್ಯವಸ್ಥೆ(Heart Disease)ಯನ್ನು ಹಾನಿಗೊಳಿಸುತ್ತದೆ. ಚಳಿಗಾಲದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಅಧ್ಯಯನವೊಂದರಲ್ಲಿ ಚಳಿಗಾಲದಲ್ಲಿ ಜ್ವರ ಬಂದಾಗ ನಮ್ಮ ಹೃದಯವು ಒತ್ತಡಕ್ಕೊಳಗಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Best Breakfast For Morning: ಚಿಟಿಕೆಯಲ್ಲಿ ತಯಾರಾಗುವ ಈ ಬ್ರೇಕ್ ಫಾಸ್ಟ್ ತೂಕ ಇಳಿಕೆಗೂ ಸಹಕಾರಿ

ಹೃದಯಾಘಾತದ ಅಪಾಯ

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌(New England Journal of Medicine)ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಸಿರಾಟದ ಸೋಂಕುಗಳು, ವಿಶೇಷವಾಗಿ ಇನ್ಫ್ಲುಯೆನ್ಸ(influenza) ಮತ್ತು ಹೃದಯಾಘಾತಗಳ ನಡುವೆ ಗಮನಾರ್ಹ ಸಂಬಂಧವನ್ನು ಕಂಡುಕೊಳ್ಳಲಾಗಿದೆ.  Express.Co.Ukನ ವರದಿಯ ಪ್ರಕಾರ, ಜ್ವರ ಬಂದ 1 ವಾರದೊಳಗೆ ಹೃದಯಾಘಾತದ ಅಪಾಯವು 6 ಪಟ್ಟು ಹೆಚ್ಚಾಗಬಹುದು. ಇನ್ಫ್ಲುಯೆನ್ಸ ಹೃದಯ ಮತ್ತು vascular system ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅಪಧಮನಿಗಳು ಈಗಾಗಲೇ ಸಂಕುಚಿತಗೊಂಡಿರುವ ಜನರಲ್ಲಿ ಈ ಸ್ಥಿತಿಯು ಹೆಚ್ಚು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಹೃದಯಾಘಾತವು ಬೆಳಿಗ್ಗೆ ಸಂಭವಿಸುವ ಸಾಧ್ಯತೆಯಿದೆ, ಅಂದರೆ ತಾಪಮಾನವು ಕಡಿಮೆಯಾದಾಗ ಆಘಾತವಾಗುತ್ತದೆ.

ಇದನ್ನೂ ಓದಿ: ಮಧುಮೇಹದಲ್ಲಿ ಕಡಲೆಕಾಯಿ ಸೇವನೆ: ಎಷ್ಟು ಪ್ರಯೋಜನಕಾರಿ ಮತ್ತು ಎಷ್ಟು ಹಾನಿಕಾರಕ?

ಈ ಅಭ್ಯಾಸಗಳನ್ನು ಬದಲಾಯಿಸಿ

ಸಂಶೋಧಕರ ಪ್ರಕಾರ, ದೇಹದಲ್ಲಿ ಯಾವುದೇ ಸೋಂಕಿನ ಸಂದರ್ಭದಲ್ಲಿ ರಕ್ತವನ್ನು ಪಂಪ್ ಮಾಡುವ ಹೃದಯದ ಅಗತ್ಯವು ಹೆಚ್ಚು ಹೆಚ್ಚಾಗುತ್ತದೆ. ಆದ್ದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದಲ್ಲದೆ ತೀವ್ರವಾದ ಇನ್ಫ್ಲುಯೆನ್ಸದಿಂದ ದೇಹದಲ್ಲಿ ಕಡಿಮೆ ಆಮ್ಲಜನಕದ ಮಟ್ಟವು ಅನಿಯಮಿತ ಹೃದಯ ಬಡಿತವನ್ನು ಪ್ರಚೋದಿಸುತ್ತದೆ. ಕಡಿಮೆ ರಕ್ತದೊತ್ತಡವು ಮಯೋಕಾರ್ಡಿಯಲ್ ಇಷ್ಕೆಮಿಯಾಕ್ಕೆ ಕಾರಣವಾಗಬಹುದು.

ಈ ಋತುವಿನಲ್ಲಿ ಉಂಟಾಗುವ ದೈಹಿಕ ಚಟುವಟಿಕೆ(Winter Heart Attack)ಯ ಕೊರತೆ, ಮಾನಸಿಕ ಒತ್ತಡ, ಕಳಪೆ ಆಹಾರ ಪದ್ಧತಿ ಮತ್ತು ವೈರಲ್ ಸೋಂಕುಗಳಿಂದ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News