ಕರಿಬೇವಿನ ಎಲೆ ಸೇವನೆಯ ಪ್ರಯೋಜನಗಳು: ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಎಲೆ ಇಲ್ಲದೆ ಪೂರ್ಣ ಎಂದೆನಿಸುವುದೇ ಇಲ್ಲ. ಅಡುಗೆಯಲ್ಲಿ ಕರಿಬೇವಿನ ಎಲೆ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ ಎಂದು ಎಲ್ಲರಿಗೂ ತಿಲಿದಿಎ. ಆದರೆ, ಈ ಎಲೆಗಳನ್ನು ಬೆಳಿಗ್ಗೆ ಅಗಿದು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಕರಿಬೇವಿನ ಸೊಪ್ಪು ಆರೋಗ್ಯದ ನಿಧಿ:
ಕರಿಬೇವಿನ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕಂಡುಬರುತ್ತವೆ, ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಬೆಳಿಗ್ಗೆ 3 ರಿಂದ 4 ಹಸಿರು ಎಲೆಗಳನ್ನು ಅಗಿದು ತಿನ್ನುವುದರಿಂದ ಅದು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ...


ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು:-
1. ಕಣ್ಣುಗಳಿಗೆ ಒಳ್ಳೆಯದು:

ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ, ಇರುಳುಗುರುಡುತನ ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳ ಅಪಾಯವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ ಅಗತ್ಯ ಪೋಷಕಾಂಶವು ಕಂಡುಬರುತ್ತದೆ, ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!


2. ಮಧುಮೇಹದಲ್ಲಿ ಸಹಾಯಕ:
ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಮಧುಮೇಹ ರೋಗಿಗಳಿಗೆ ಹೆಚ್ಚಾಗಿ ಕರಿಬೇವಿನ ಎಲೆಗಳನ್ನು ಅಗಿಯಲು ಸಲಹೆ ನೀಡಲಾಗುತ್ತದೆ.


3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ:
ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಆಮ್ಲೀಯತೆ, ಉಬ್ಬುವುದು ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.


4. ಸೋಂಕನ್ನು ತಡೆಗಟ್ಟುವುದು:
ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ, ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ತಪ್ಪಿಸುತ್ತದೆ.


ಇದನ್ನೂ ಓದಿ- Cholesterol Control Drink: ಈ ಡ್ರಿಂಕ್ಸ್ ಸಹಾಯದಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು


5. ತೂಕವನ್ನು ಕಳೆದುಕೊಳ್ಳಲು:
ಕರಿಬೇವಿನ ಎಲೆಗಳನ್ನು ಜಗಿಯುವುದು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಈಥೈಲ್ ಅಸಿಟೇಟ್, ಮಹಾನಿಂಬಿನ್ ಮತ್ತು ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.