Cholesterol Control Home Remedies: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ ಉಪಾಯ

Cholesterol Control Home Remedies: ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಉತ್ತಮ ಮಾರ್ಗ ಯಾವುದು ಎಂದು ನಿಮಗೆ ಗೊತ್ತಾ? ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ನೀವು ಕಡಿಮೆ ಮಾಡಬಹುದು. ಬೆಳ್ಳುಳ್ಳಿಯಿಂದ ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.

Written by - Nitin Tabib | Last Updated : May 22, 2022, 10:16 PM IST
  • ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಉತ್ತಮ ಮಾರ್ಗ ಯಾವುದು ಎಂದು ನಿಮಗೆ ಗೊತ್ತಾ?
  • ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ನೀವು ಕಡಿಮೆ ಮಾಡಬಹುದು.
  • ಬೆಳ್ಳುಳ್ಳಿಯಿಂದ ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
Cholesterol Control Home Remedies: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ ಉಪಾಯ title=
Cholesterol Control Home Remedies

Cholesterol Control Home Remedies: ಕೊಲೆಸ್ಟ್ರಾಲ್ ನಿಯಂತ್ರಣದ ಹೊರಗೆ ಹುಗುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ, ನೀವು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನಾವು ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಭಣಿಸಲಿದೆ. ಹಾಗಾದರೆ, ಮನೆ ಉಪಾಯ ಅನುಸರಿಸುವ ಮೂಲಕ ಇದನ್ನು ಹೇಗೆ ನಿಯಂತ್ರಿದಬಹುದು ತಿಳಿಯೋಣ ಬನ್ನಿ

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ
ಬೆಳ್ಳುಳ್ಳಿಯಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಇದಕ್ಕಾಗಿ, ನೀವು ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಬೆಳ್ಳುಳ್ಳಿಯ ಮೊಗ್ಗು ಹಾಕಬೇಕು. ಇದಾದ ನಂತರ ಈ ಉಗುರುಬೆಚ್ಚನೆಯ ನೀರನ್ನು ಕುಡಿದರೆ ಅದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಈ ವಿಧಾನವು ತುಂಬಾ ಸುಲಭ ಮತ್ತು ಸರಳವಾದ ವಿಧಾನವಾಗಿದೆ. ಆದಾಗ್ಯೂ, ಗಂಭೀರ ರೋಗಿಗಳು ಈ ಉಪಾಯವನ್ನು ಪ್ರಯತ್ನಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಬೆಳ್ಳುಳ್ಳಿ ನೀರಿನ ಪ್ರಯೋಜನಗಳು
ನಿಯಮಿತವಾಗಿ ಬೆಳ್ಳುಳ್ಳಿ ನೀರನ್ನು ಸೇವಿಸಿದರೆ ನೀವು ಹಲವು ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ನಿಮ್ಮ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಆದರೆ, ಇದರಿಂದ ದೇಹದಲ್ಲಿನ ರಕ್ತ ಪರಿಚಲನೆಯು ಕೂಡ ಉತ್ತಮವಾಗಿರುತ್ತದೆ. ಹೃದಯಾಘಾತದ ಅಪಾಯವೂ ಸ್ವತಃ ಕಡಿಮೆಯಾಗುತ್ತದೆ.

ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣ
- ಅತಿಯಾದ ಒತ್ತಡ ತೆಗೆದುಕೊಳ್ಳುವುದು ಮತ್ತು ಕೆಟ್ಟ ಆಹಾರ ಪದ್ಧತಿಯನ್ನು ಅನುಸರಿಸುವಿದರಿಂದ ಜನರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಅಭ್ಯಾಸಗಳನ್ನು ಬದಲಾಯಿಸಬೇಕು.

- ವ್ಯಾಯಾಮ ಮಾಡದ ಮತ್ತು ಯಾವಾಗಲೂ ಒತ್ತಡವನ್ನು ತೆಗೆದುಕೊಳ್ಳುವ ಜನರು ಕೂಡ ತಮ್ಮ ಕೊಲೆಸ್ಟ್ರಾಲ್ ಮಟ್ಟದ ಕುರಿತು ಗಮನಹರಿಸಬೇಕು. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ-Health Tips: ಬೆಳಗ್ಗೆ ಖಾಲಿ ಹೊಟ್ಟೆ ಟೊಮೇಟೊ ಸೇವನೆಯಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?

- ರಾಬಿ ತರಕಾರಿಗಳು ಮತ್ತು ಹಣ್ಣುಗಳನ್ನು ತಮ್ಮ ಆಹಾರದಲ್ಲಿ ಸೇರಿಸದ ಜನರೂ ಕೂಡ ಅಧಿಕ ಕೊಲೆಸ್ಟ್ರಾಲ್ಗೆ ಬಲಿಯಾಗುತ್ತಾರೆ.

ಇದನ್ನೂ ಓದಿ-Weight Loss Diet: ತೂಕ ಇಳಿಕೆಗೆ ಡಯಟ್ ಹೇಗಿರಬೇಕು? ಈ 4 ಸಂಗತಿಗಳನ್ನು ನೆನೆಪಿನಲ್ಲಿಡಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 

Trending News