ಆಕಸ್ಮಿಕವಾಗಿ ನುಂಗಿದ ಚೂಯಿಂಗ್ ಗಮ್ ದೇಹದ ಮೇಲೆ ಏನು ಪರಿಣಾಮ ಬೀರುತ್ತೆ..?
Health tips : ಮಕ್ಕಳು ಮತ್ತು ವಯಸ್ಕರು ಚೂಯಿಂಗ್ ಗಮ್ ಅಗಿಯಲು ಇಷ್ಟ ಪಡುತ್ತಾರೆ. ಕೆಲವರು ದವಡೆಯ ವ್ಯಾಯಾಮ, ಹಲ್ಲುಗಳ ಬಲ, ಶುಚಿಗೊಳಿಸುವಿಕೆ, ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದನ್ನು ತಿನ್ನುತ್ತಾರೆ, ಇನ್ನು ಕೆಲವರು ಸಮಯ ಕಳೆಯಲು ಇದನ್ನು ತಿನ್ನುತ್ತಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಚೂಯಿಂಗ್ ಗಮ್ ಅನ್ನು ತಮಗೆ ಅರಿವಿಲ್ಲದಂತೆ ನುಂಗಿ ಬಿಡುತ್ತಾರೆ..
Chewing Gum Swallowed : ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮವಿದೆಯೇ? ದೇಹದ ಭಾಗಗಳ ಮೇಲೆ ಇದು ಯಾವುದಾದರು ಪರಿಣಾಮ ಬಿರುತ್ತದೆಯೇ? ಎಂಬುದು ಹಲವರಿಗೆ ಕಾಡುವ ಪ್ರಶ್ನೆ. ಈಗ ನಾವು ಚೂಯಿಂಗ್ ಗಮ್ ನುಂಗುವುದರಿಂದ ಉಂಟಾಗುವ ಹಾನಿಯನ್ನು ತಿಳಿಯೋಣ.
ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಅದು ಹೊಟ್ಟೆಯ ಮೂಲಕ ಹಾದುಹೋದ ನಂತರ ಕರುಳನ್ನು ನಿರ್ಬಂಧಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಚೂಯಿಂಗ್ ಗಮ್ ಸುಮಾರು 7 ವರ್ಷಗಳ ಕಾಲ ಹೊಟ್ಟೆಯಲ್ಲಿ ಇರುತ್ತದೆ ಎಂಬ ಮಾತಿದೆ. ಆದಾಗ್ಯೂ, ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಟ್ರೇಲರ್ ಮೂಲಕವೇ ಕುತೂಹಲ ಮೂಡಿಸಿದ ʻಜಿಗರ್ʼ
ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ.. ಇದು ಕರಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಆದರೂ, ಅದನ್ನು ನುಂಗಿದರೆ, ಅದು ಕೆಲವು ಗಂಟೆಗಳಲ್ಲಿ ಅಥವಾ ಕೆಲವು ದಿನಗಳ ನಂತರವೂ ಮಲದಲ್ಲಿ ಸ್ವತಃ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ. ಚೂಯಿಂಗ್ ಗಮ್ ಅನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಚೂಯಿಂಗ್ ಗಮ್ ಅನ್ನು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.