Chewing gum : ಅಯ್ಯೋ..! ಮಗು ಚ್ಯೂಯಿಂಗ್ ಗಮ್ ನುಂಗಿ ಬಿಡ್ತಾ..!?
ಮಕ್ಕಳಷ್ಟೇ ಅಲ್ಲ , ದೊಡ್ಡವರಿಗೂ ಚ್ಯೂಯಿಂಗ್ ಗಮ್ ಅಂದರೆ ಅದೇನೋ ಮೋಹ. ಚ್ಯೂಯಿಂಗ್ ಗಮ್ ತಿನ್ನೋದು ಕೆಲವರ ದೊಡ್ಡ ಚಟ. ಅಮ್ಮ ನಿಮಗೆ ಹೇಳಿರಬಹುದು..`ಮಗನೇ ಚ್ಯೂಯಿಂಗ್ ಗಮ್ ನುಂಗಬೇಡ..ನುಂಗಿದ್ರೆ ಹೊಟ್ಟೆಯಲ್ಲಿ ಅದು 7 ವರ್ಷ ಇರುತ್ತೆ` ಅಂತ.
ಬೆಂಗಳೂರು : ಮಕ್ಕಳಷ್ಟೇ ಅಲ್ಲ , ದೊಡ್ಡವರಿಗೂ ಚ್ಯೂಯಿಂಗ್ ಗಮ್ ಅಂದರೆ ಅದೇನೋ ಮೋಹ. ಚ್ಯೂಯಿಂಗ್ ಗಮ್ (Chewing gum) ತಿನ್ನೋದು ಕೆಲವರ ದೊಡ್ಡ ಚಟ. ಅಮ್ಮ ನಿಮಗೆ ಹೇಳಿರಬಹುದು..`ಮಗನೇ ಚ್ಯೂಯಿಂಗ್ ಗಮ್ ನುಂಗಬೇಡ..ನುಂಗಿದ್ರೆ (Swallowed) ಹೊಟ್ಟೆಯಲ್ಲಿ ಅದು 7 ವರ್ಷ ಇರುತ್ತೆ' ಅಂತ. ಚ್ಯೂಯಿಂಗ್ ಗಮ್ ಹೊಟ್ಟೆಯಲ್ಲಿ ಏಳು ವರ್ಷ ಇರುತ್ತೆ ಅನ್ನೋದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ (Scientific evidence) ಇಲ್ಲ. ಆದರೆ, ತಪ್ಪಿ ಚ್ಯೂಯಿಂಗ್ ಗಮ್ ನುಂಗಿದರೆ ಏನೆಲ್ಲಾ ಆಗಬಹುದು? ಅದಕ್ಕೆ ಉತ್ತರ ಹುಡುಕೋಣ.
ಗೊತ್ತಿರಲಿ, 40 ಗಂಟೆ ಹೊಟ್ಟೆಯಲ್ಲಿರುತ್ತದೆ ಚ್ಯೂಯಿಂಗ್ ಗಮ್..!
ಚ್ಯೂಯಿಂಗ್ ಗಮ್ (Chewing gum) ಜಗಿಯಬೇಕು. ಅದನ್ನು ನುಂಗಬಾರದು. ಚ್ಯೂಯಿಂಗ್ ಗಮ್ ನುಂಗಿದರೆ ಅದು ಆರೋಗ್ಯ (Health) ಸಮಸ್ಯೆಗೆ ಕಾರಣವಾಗುತ್ತದೆ. ಚ್ಯೂಯಿಂಗ್ ಗಮ್ ಹೊಟ್ಟೆಗೆ ಹೋದರೆ ಅದು ಯಾವುದೇ ಕಾರಣಕ್ಕೆ ಜೀರ್ಣವಾಗುವುದಿಲ್ಲ. ಚ್ಯೂಯಿಂಗ್ ಗಮಲ್ಲಿ ಅಂಟಿನ ವಸ್ತು ಅಧಿಕವಾಗಿರುವುದರಿಂದ ಜೀರ್ಣರಸಗಳಿಂದ ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ (Digestion). ಅದು ಅದೇ ಅವಸ್ಥೆಯಲ್ಲಿ ಸುಮಾರು 40 ಗಂಟೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕವೇ ಅದು ಮಲದ ರೂಪದಲ್ಲಿ ಹೊಟ್ಟೆಯಿಂದ ಹೊರಗೆ ಬರುತ್ತದೆ.
ಇದನ್ನೂ ಓದಿ : One Rupee Clinic: ಕೇವಲ 1 ರೂಪಾಯಿಯಲ್ಲಿ ಚಿಕಿತ್ಸೆ
ಮಕ್ಕಳು ಪದೇ ಪದೇ ಚ್ಯೂಯಿಂಗ್ ಗಮ್ ನುಂಗಿದರೆ..?
ಅಪರೂಪಕ್ಕೊಮ್ಮೆ ಮಗು ಚ್ಯೂಯಿಂಗ್ ಗಮ್ ನುಂಗಿದರೆ ದೊಡ್ಡ ಸಮಸ್ಯೆ ಏನೂ ಉಂಟಾಗುವುದಿಲ್ಲ. ಆದರೆ, ಮಗು ಪದೇ ಪದೇ ಚ್ಯೂಯಿಂಗ್ ಗಮ್ ನುಂಗಿದರೆ ಅದು ಮಗುವಿನ ಆರೋಗ್ಯಕ್ಕೆ ಖತರ್ನಾಕ್ ಆಗಿ ಪರಿಣಮಿಸುತ್ತದೆ. ನಿಮ್ಮ ಮಗುವಿಗೆ ಮಲಬದ್ದತೆ (Constipation) ಏನಾದರೂ ಇದ್ದರೆ ಈ ಬಬಲ್ ಗಮ್ ಅನಾಹುತಕಾರಿ ಆಗಬಲ್ಲದು. ಇದು ಕರುಳಿನಲ್ಲಿ ಸೇರಿಕೊಂಡು ಕರುಳಿನ ಬ್ಲಾಕೇಜ್ ಸೃಷ್ಟಿಸಬಹುದು.
ಮಕ್ಕಳ ಡಾಕ್ಟರ್ ಏನು ಹೇಳುತ್ತಾರೆ..?
1998ರ ಪಿಡಿಯಾಟ್ರಿಕ್ಸ್ ಜರ್ನಲಲ್ಲಿ ಪ್ರಕಾಶಿತವಾಗಿರುವ ವರದಿ ಪ್ರಕಾರ, ಒಂದು ವೇಳೆ ಮಕ್ಕಳು ಬಬಲ್ ಗಮ್ ನುಂಗಿದರೆ ಮಕ್ಕಳಲ್ಲಿ ತೀವ್ರ ತರಹದ ಹೊಟ್ಟೆ ನೋವು (Stomach pain) ಕಾಣಿಸುತ್ತದೆ. ವಾಂತಿ (Vomit) ಉಂಟಾಗುತ್ತದೆ. ಮಲ ಬದ್ದತೆಯಾಗುತ್ತದೆ. ಚ್ಯೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುತ್ತದೆ. ಗಂಟಲಲ್ಲಿ (food pipe) ಸಿಕ್ಕಿಕೊಂಡರೆ ಅಪಾಯ ಹೆಚ್ಚು. ಹಾಗಾಗಿ ಯಾವುದೇ ಕಾರಣಕ್ಕೆ ಮಕ್ಕಳಿಗೆ ಚ್ಯೂಯಿಂಗ್ ಗಮ್ ತಿನ್ನಲು ಬಿಡಬೇಡಿ ಎಂಬ ಸಲಹೆಯನ್ನು ಡಾಕ್ಟರ್ ನೀಡುತ್ತಾರೆ.
ಇದನ್ನೂ ಓದಿ : Anxiety disorder : ಚಿಂತೆ ಏತಕೊ ಮನದ ಭ್ರಾಂತಿ ಏತಕೋ..! ಆಂಕ್ಸಾಯಿಟಿ ಡಿಸಾರ್ಡರನ್ನ ಕಡೆಗಣಿಸಬೇಡಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.