ಸಂಬಲ್ಪುರ್: One Rupee Clinic: - ಓಡಿಷಾದ ಸಂಬಲ್ಪುರ್ ಜಿಲ್ಲೆಯ ವೈದ್ಯರೊಬ್ಬರು ಬಡವರು ಹಾಗೂ ವಂಚಿತರಿಗಾಗಿ ಒಂದು ರೂಪಾಯಿ ಕ್ಲಿನಿಕ್ (One Rupe Clinic) ತೆರೆದಿದ್ದಾರೆ. ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ (VIMSR)ನಲ್ಲಿ ಮೆಡಿಸಿನ್ ವಿಭಾಗದ ಸಹಾಯಕ ಪ್ರೊಫೆಸರ್ ಶಂಕರ್ ರಾಮಚಂದಾನಿ ಅವರ ಐಡಿಯಾ ಇದಾಗಿದೆ. ಈ ಕ್ಲಿನಿಕ್ ನಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಮಾತ್ರ 1 ರೂ. ಶುಲ್ಕ ನೀಡಬೇಕು.
ಅನುಮತಿ ಪಡೆದು ಬಳಿಕ ಕ್ಲಿನಿಕ್ ಆರಂಭ
ಈ ಕುರಿತು ಮಾತನಾಡುವ ರಾಮ್‌ಚಂದಾನಿ (38), 'ನಾನು ವಿಐಎಂಎಸ್‌ಆರ್‌ನಲ್ಲಿ ಸಿನಿಯರ್ ರೆಸಿಡೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ ಆ ಸ್ಥಾನದಲ್ಲಿದ್ದುಕೊಂಡು ಖಾಸಗಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಅನುಮತಿ ನೀಡಲಾಗುವುದಿಲ್ಲ. ಹಾಗಾಗಿ ಆ ಸಮಯದಲ್ಲಿ ನನಗೆ ಕ್ಲಿನಿಕ್ (Clinic) ತೆರೆಯಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಸಿಕ್ಕಿತು ಹಾಗೂ ಅದರ ಜೊತೆಗೆ ಕ್ಲಿನಿಕ್ ತೆರೆಯಲು ಈ ಅನುಮತಿ ದೊರೆಯಿತು. ಹೀಗಾಗಿ ನಾನು ಈಗ ಬಾಡಿಗೆ ಮನೆಯಲ್ಲಿ ನನ್ನ 'ಒಂದು ರೂಪಾಯಿ' ಕ್ಲಿನಿಕ್ ಅನ್ನು ಆರಂಭಿಸಿದ್ದೇನೆ' ಎನ್ನುತ್ತಾರೆ.
ಇದನ್ನು ಓದಿ-Chips, Burger, Pizza ಪ್ರಿಯರಿಗೊಂದು ಮಹತ್ವದ ಸುದ್ದಿ, FSSAI ಹೊಸ ನಿಯಮ ನಿಮಗೂ ತಿಳಿದಿರಲಿ
ಕೇವಲ 1 ರೂ. ಶುಲ್ಕ ಯಾಕೆ?
ಈ ಕುರಿತು ರಾಮ್ ಚಂದಾನಿ ಅವರನ್ನು ಪ್ರಶ್ನಿಸಲಾಗಿ, "ನಾನು ಬಡವರಿಂದ ಹಾಗೂ ವನ್ಚಿತರಿಂದ ಕೇವಲ 1 ರೂ. ಶುಲ್ಕ ಪಡೆಯುತ್ತೇನೆ. ಏಕೆಂದರೆ ತಾವು ನಿಶುಲ್ಕ ಸೇವೆ ಪಡೆಯುತ್ತಿದ್ದೇವೆ ಎಂಬುದು ಅವರಿಗೆ ಅನಿಸಬಾರದು. ತಮ್ಮ ಉಪಚಾರಕ್ಕಾಗಿ ತಾವು ಅಲ್ಪ ಹಣವನ್ನಾದರು ನೀಡಿದ್ದೇವೆ ಎಂಬುದು ಅವರಿಗೆ ಮನವರಿಕೆಯಾಗಬೇಕು." ಎಂದಿದ್ದಾರೆ. ಈ ಕ್ಲಿನಿಕ್ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 7ಗಂಟೆಯವರೆಗೆ ತೆರೆದಿರುತ್ತದೆ.
ಇದನ್ನು- Googleನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್ ಫೋನ್ ಮೂಲಕ Heart Rate ಪರೀಕ್ಷೆ
ಮೊದಲ ದಿನ ಎಷ್ಟು ರೋಗಿಗಳು ಭೇಟಿ ನೀಡಿದ್ದಾರೆ?
ತಮ್ಮ ಪತ್ನಿ ದಂತ ವೈದ್ಯೆಯಾಗಿರುವುದಾಗಿ ಹೇಳುವ ರಾಮಚಂದಾನಿ ಅವರು ಕೂಡ ತಮಗೆ ಈ ಕಾರ್ಯದಲ್ಲಿ ಸಹಕರಿಸುತ್ತಾರೆ ಎಂದು ಹೇಳುತ್ತಾರೆ. ಈ ಕ್ಲಿನಿಕ್ ಅನ್ನು ಶುಕ್ರವಾರ ಉದ್ಘಾಟಿಸಲಾಗಿದೆ ಹಾಗೂ ಮೊದಲ ದಿನ 33 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇದನ್ನು ಓದಿ- Corona Vaccination ಬಳಿಕ ನಾಪತ್ತೆಯಾದ 1800 ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು
ತಂದೆಯ ಮಾತಿಗೆ ಗೌರವ
ಕುಷ್ಠರೋಗದ ರೋಗಿಯೋರ್ವನನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಅವರ ಮನೆಗೆ ಕರೆದೊಯ್ದಿದ್ದಕ್ಕಾಗಿ 2019 ರಲ್ಲಿ ಬೆಳಕಿಗೆ ಬಂದ ರಾಮಚಂದಾನಿ , 'ನನ್ನ ದಿವಂಗತ ತಂದೆ ಬ್ರಹ್ಮಾನಂದ್ ರಾಮ್‌ಚಂದಾನಿ ಅವರು ನರ್ಸಿಂಗ್ ಹೋಮ್ ತೆರೆಯಲು ಹೇಳಿದ್ದರು, ಆದರೆ ಇದಕ್ಕೆ ದೊಡ್ಡ ಹೂಡಿಕೆ ಬೇಕಾಗುತ್ತದೆ ಮತ್ತು ಅದರಿಂದ ಬಡರೋಗಿಗಳಿಗೆ 1 ರೂ.ಗಳಿಗೆ ಚಿಕಿತ್ಸೆ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು 'ಒಂದು ರೂಪಾಯಿ' ಕ್ಲಿನಿಕ್ ತೆರೆದಿದ್ದೇನೆ ಎಂದಿದ್ದಾರೆ.
ಇದನ್ನು ಓದಿ- ಅಮ್ಮ ತಿನ್ನಲೇ ಬೇಕಾದ ಆರು ಸೂಪರ್ ಫುಡ್.! ತಾಯಿ ದೇವರ ಆರಾಧಿಸುವವರು ಓದಲೇ ಬೇಕು.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.