ಬರ್ಲಿನ್: ಸದಾ ಯಂಗ್ ಆಗಿ ಕಾಣಬೇಕು ಅನ್ನೂ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ... ನಿಮಗೂ ಕೂಡ ಯಂಗ್ ಆಗಿ ಕಾಣಬೇಕು ಅಂತ ಅನ್ನಿಸಿದ್ರೆ ಜಿಂಕ್ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ ಎಂದು ಅಧ್ಯಯನವೊಂದು ಹೇಳಿದೆ.


COMMERCIAL BREAK
SCROLL TO CONTINUE READING

ಜಿಂಕ್ ಅಂಶ ಹೆಚ್ಚಾಗಿರುವ ಆಹಾರ ಸೇವೆಯಿಂದ ಯಂಗ್ ಆಗಿ ಕಾಣಲು ಸಾಧ್ಯ ಎಂದು ಜರ್ಮನಿಯ ಎರ್ಲಾಂಗೆನ್-ನ್ಯೂಬರ್ಗ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ. ಜೀವನ ಕ್ರಮ ಮತ್ತು ಮಾನಸಿಕ ಒತ್ತಡದ ಕಾರಣದಿಂದಾಗಿ ಜನರು ಬೇಗ ವಯಸ್ಸಾದಂತೆ ಕಾಣುತ್ತಾರೆ. ಇದಕ್ಕೆ ಜಿಂಕ್ ಯುಕ್ತ ಆಹಾರ ಉತ್ತಮ ಜೌಷಧಿ ಎಂದಿದ್ದಾರೆ. 


ಈ ಅಧ್ಯಯನದ ಪ್ರಕಾರ ಆಕ್ಸಿಡೀಕರಣದ ಒತ್ತಡವನ್ನು ತಡೆದು ಜೈವಿಕ ಅಣುವನ್ನು ಸಕ್ರಿಯಗೊಳಿಸುವ ಕಾರ್ಯವನ್ನು ಜಿಂಕ್ ಮಾಡುತ್ತದೆ ಎಂಬುದು ತಿಳಿದುಬಂದಿದೆ. "ಮುಂದಿನ ದಿನಗಳಲ್ಲಿ ಜಿಂಕ್ ಅಂಶವಿರುವ ವೈನ್, ಕಾಫಿ, ಚಹಾ ಅಥವಾ ಚಾಕೊಲೇಟ್ ಕೂಡ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ" ಎಂದು ಎರ್ಲಾಂಜೆನ್-ನೂರ್ಬರ್ಗ್ ವಿಶ್ವವಿದ್ಯಾನಿಲಯದ ಇವನೊವಿ ಬರ್ಮಾಜೋವ್ ಹೇಳಿದ್ದಾರೆ. 


ಝಿಂಕ್ ಒಂದು ಸಣ್ಣ ಪ್ರಮಾಣವನ್ನು ಹೊಂದಿರುವ ಒಂದು ಖನಿಜ. ಇದು ಒಬ್ಬ ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅಂಶಗಳಲ್ಲೊಂದು ಎಂದಿದ್ದಾರೆ. ಈ ಅಧ್ಯಯನವನ್ನು ನೇಚರ್ ಕೆಮಿಸ್ಟ್ರಿ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.