Cholesterol ಹೆಚ್ಚಳದ ಕುರಿತಾದ ಈ ಐದು ಲಕ್ಷಣಗಳನ್ನು ಲಘುವಾಗಿ ಪರಿಗಣಿಸುವ ತಪ್ಪು ಮಾಡ್ಬೇಡಿ
High Cholesterol Warning Signs: ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದರ ಕುರಿತಾಗಿ ಹಲವು ಲಕ್ಷಣಗಳು ಕಂಡುಬರುತ್ತವೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಐದು ಲಕ್ಷಣಗಳು ಕಂಡುಬಂದರೆ ಅವುಗಳನ್ನು ಲಘುವಾಗಿ ಪರಿಗಣಿಸುವ ತಪ್ಪು ಮಾಡ್ಬೇಡಿ.
High Cholesterol Warning Signs: ಯಾವುದೇ ಒಂದು ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುನ್ನ ನಮ್ಮ ಶರೀರ ಕೆಲ ಸಂಕೇತಗಳನ್ನು ನೀಡುತ್ತದೆ. ಕೊಲೆಸ್ಟ್ರಾಲ್ ವಿಷಯದಲ್ಲಿಯೂ ಕೂಡ ಇದೆ ರೀತಿ ಸಂಭವಿಸುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ನಮಗೆ ಅದರ ಹಲವು ಸಂಕೇತಗಳು ದೊರೆಯುತ್ತವೆ. ಆದರೆ, ಕೆಲವರು ಅವುಗಳನ್ನು ಲಘುವಾಗಿ ಪರಿಗಣಿಸುತ್ತಾರೆ. ಹೀಗಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಸಂಕೇತಗಳನ್ನು ನಿರಂತರವಾಗಿ ನಿರ್ಲಕ್ಷಿಸುವ ಜನರು ನಂತರ ಹೃದಯಾಘಾತದಂತಹ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ದೇಹದಲ್ಲಿ ಹೆಚ್ಚಾಗುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ನೀಡುವ ಐದು ಸಂಕೇತಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ.
1. ಎದೆಯಲ್ಲಿ ನೋವು - ನಿಮ್ಮಲ್ಲಿ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತಿದ್ದರೆ, ಅದನ್ನು ಲಘುವಾಗಿ ಪರಿಗಣಿಸಬೇಡಿ. ಪದೇ ಪದೇ ಎದೆ ನೋವು ಕಾಣಿಸಿಕೊಳ್ಳುವುದು ಅಧಿಕ ಕೊಲೆಸ್ಟ್ರಾಲ್ ನ ಒಂದು ಲಕ್ಷಣವಾಗಿದೆ. ಸಮಯ ಇರುವಂತೆ ಒಂದು ವೇಳೆ ನೀವು ವೈದ್ಯರನ್ನು ಸಂಪರ್ಕಿಸದೆ ಹೋದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಭಣಿಸುವ ಸಾಧ್ಯತೆ ಇದೆ.
2. ಅತಿ ಹೆಚ್ಚು ಆಯಾಸ ಉಂಟಾಗುವುದು - ಬಿಡುವಿಲ್ಲದೆ ಒತಾತದಿಂದ ಕೂಡಿದ ಜೀವನ ಮತ್ತು ಕೆಲಸದ ಒತ್ತಡದಿಂದ ಸುಸ್ತಾಗುವುದು ಒಂದು ಸಾಮಾನ್ಯ ಸಂಗತಿ ಎಂಬುದು ಎಲ್ಲರಿಗೂ ತಿಳಿದಿದೆ, ಆದರೆ ಅನೇಕ ಬಾರಿ ಈ ಸುಸ್ತು ಕಡಿಮೆಯಾಗುವುದಿಲ್ಲ. ಈ ರೋಗಲಕ್ಷಣವನ್ನು ನೀವು ಲಘುವಾಗಿ ಪರಿಗಣಿಸಬಾರದು. ಇಂತಹ ಸಮಸ್ಯೆಯು ಪದೇ ಪದೇ ಎದುರಾಗುತ್ತಿದ್ದ್ರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
3. ಕುತ್ತಿಗೆಯಲ್ಲಿ ನೋವು - ಹಲವು ಬಾರಿ ಓರ್ವ ವ್ಯಕ್ತಿ ದಿನದಲ್ಲಿ 9 ರಿಂದ 12 ಗಂಟೆಗಳವರೆಗೆ ಕೆಲಸ ಮಾಡಿದರೆ, ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅದು ಅಪಾಯದ ಸಂಕೇತ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
4. ಕೈ-ಕಾಲುಗಳ ನಿಷ್ಕ್ರೀಯಗೊಳ್ಳುವಿಕೆ - ಹಲವು ಬಾರಿ ಕುಳಿತಲ್ಲಿಯೇ ಕೈಕಾಲುಗಳು ನಿಷ್ಕ್ರೀಯಗೊಂಡ ಅನುಭಾವ ಉಂಟಾಗುತ್ತದೆ. ಕೆಲವರು ಇದನ್ನು ಲಘುವಾಗಿ ಪರಿಗಣಿಸುತ್ತಾರೆ ಮತ್ತು ಭವಿಷ್ಯದಲ್ಲಿ ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆ ಉಲ್ಭಣಿಸುವ ಮುನ್ನವೇ ಎಚ್ಚತ್ತುಕೊಳ್ಳಿ ಮತ್ತು ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ-ಕಲ್ಲಂಗಡಿ ಹಣ್ಣು ಕೆಂಪಗೆ ಮತ್ತು ಸಿಹಿಯಾಗಿದೆಯೇ ಎಂದು ಸುಲಭವಾಗಿ ಹೀಗೆ ಕಂಡುಕೊಳ್ಳಿ ..!
5. ಬೆನ್ನು ನೋವು - ಬದಲಾಗುತ್ತಿರುವ ಜೀವನಶೈಲಿಯ ಹಿನ್ನೆಲೆ ಆಗಾಗ ಬೆನ್ನುನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇತ್ತೀಚಿಗೆ ಪೋಷಕಾಂಶಗಳ ಕೊರತೆಯ ಹಿನ್ನೆಲೆಯೂ ಕೂಡ ಈ ಸಮಸ್ಯೆ ಎದುರಾಗುತ್ತದೆ. ಆದ್ರೆ, ಪ್ರತಿ ಬಾರಿ ಈ ಸಮಸ್ಯೆ ಬದಲಾದ ಜೀವನ ಶೈಲಿಯ ಸಮಸ್ಯೆಯಾಗಿರಬೇಕು ಎಂಬ ಯಾವುದೇ ನಿಯಮವಿಲ್ಲ. ಕೊಲೆಸ್ಟ್ರಾಲ್ ಹೆಚ್ಚಾದಾಗಲೂ ಕೂಡ ಈ ಸಮಸ್ಯೆ ಎದುರಾಗುತ್ತದೆ.
ಇದನ್ನೂ ಓದಿ-Ashoka Tree for Diabetes: ಬ್ಲಡ್ ಶುಗರ್ ನಿಯಂತ್ರಣಕ್ಕೆ ಸರಳ ಮನೆ ಮದ್ದು, ತಕ್ಷಣ ಸಿಗಲಿದೆ ಪರಿಹಾರ
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.