ಹೈ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ನೈಸರ್ಗಿಕ ವಿಧಾನಗಳನ್ನೊಮ್ಮೆ ಟ್ರೈ ಮಾಡಿ...

High Cholesterol Control Tips: ಅಧಿಕ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಆದ್ದರಿಂದ, ಬೆಳ್ಳುಳ್ಳಿ ಮತ್ತು ಜೇನುತುಪ್ಪವು ಇದಕ್ಕೆ ತುಂಬಾ ಉಪಯುಕ್ತವಾಗಿದೆ. ಹಾಗಾದರೆ ಈ ಎರಡನ್ನೂ ಹೇಗೆ ಬಳಸುವುದು ಎಂದು ತಿಳಿಯೋಣ.

Written by - Yashaswini V | Last Updated : May 12, 2022, 02:09 PM IST
  • ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇದೆ.
  • ಮೊದಲನೆಯದು ಒಳ್ಳೆಯದು, ಎರಡನೆಯದು ಕೆಟ್ಟದು.
  • ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು.
ಹೈ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ನೈಸರ್ಗಿಕ ವಿಧಾನಗಳನ್ನೊಮ್ಮೆ ಟ್ರೈ ಮಾಡಿ... title=
Cholesterol control tips

ಅಧಿಕ ಕೊಲೆಸ್ಟ್ರಾಲ್ ನಿಯಂತ್ರಣ ಸಲಹೆಗಳು:  ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೈ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದು ಅತ್ಯಗತ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಅದಕ್ಕಾಗಿ ಔಷಧಿಗಳ  ಮೊರೆ ಹೋಗುವ ಅಗತ್ಯವಿಲ್ಲ. ನೀವು ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.

ವಾಸ್ತವವಾಗಿ, ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇದೆ. ಮೊದಲನೆಯದು ಒಳ್ಳೆಯದು, ಎರಡನೆಯದು ಕೆಟ್ಟದು. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರು ಅದನ್ನು ನೈಸರ್ಗಿಕವಾಗಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಯೋಣ. ಬೆಳ್ಳುಳ್ಳಿ ಮತ್ತು ಜೇನುತುಪ್ಪವು ಇದಕ್ಕೆ ತುಂಬಾ ಉಪಯುಕ್ತವಾಗಿದೆ. ಕೊಲೆಸ್ಟ್ರಾಲ್‌ ನಿಯಂತ್ರಿಸಲು ಇವೆರಡನ್ನೂ ಹೇಗೆ ಬಳಸುವುದು ಎಂದು ತಿಳಿಯುವುದು ಕೂಡ ಬಹಳ ಮುಖ್ಯ. ಹಾಗಾದರೆ ಇದನ್ನು ಹೇಗೆ ನಿಯಂತ್ರಿಸಬಹುದು ಎಂದು ತಿಳಿಯೋಣ. 

ಇದನ್ನೂ ಓದಿ- Tomato Flu symptoms : 80 ಮಕ್ಕಳಿಗೆ ತಗುಲಿರುವ ಟೊಮೆಟೊ ಜ್ವರ .! ಏನಿದರ ಲಕ್ಷಣಗಳು ಗೊತ್ತಾ?

ಬೆಳ್ಳುಳ್ಳಿ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:
ಅಡುಗೆಮನೆಯಲ್ಲಿರುವ ಬೆಳ್ಳುಳ್ಳಿಯಿಂದ ಅಧಿಕ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.  ಹಾಗಾಗಿ ನಿತ್ಯ ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸುವುದು ಒಳಿತು. ಆದರೆ ನೀವು ಅದನ್ನು ಹೇಗೆ ಬಳಸುತ್ತೀರಿ ಎಂಬುದು ಕೂಡ ಬಹಳ ಮುಖ್ಯ. ನೀವು ಉಗುರುಬೆಚ್ಚಗಿನ ನೀರಿನೊಂದಿಗೆ ಬೆಳ್ಳುಳ್ಳಿಯ ಮೊಗ್ಗು ಸೇವಿಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ. 

ಇದನ್ನೂ ಓದಿ- ನಿಂಬೆ ರಸವನ್ನು ಈ ವಿಧಾನದಲ್ಲಿ ಸೇವಿಸಿದರೆ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತದೆ

ಜೇನುತುಪ್ಪದಿಂದಲೂ ಕಡಿಮೆ ಆಗುತ್ತೆ ಕೊಲೆಸ್ಟ್ರಾಲ್: 
ಜೇನುತುಪ್ಪವು ಅಧಿಕ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಣದಲ್ಲಿಡುತ್ತದೆ. ನೀವು ಇದನ್ನು ಸೇವಿಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ, ಕೊಲೆಸ್ಟ್ರಾಲ್ ಮಟ್ಟ  ಹೆಚ್ಚಿರುವ ಜನರು ಜೇನುತುಪ್ಪವನ್ನು ಸೇವಿಸುವುದರಿಂದ ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.

ನೀವು ಬೇಕಿದ್ದರೆ ಬೆಳ್ಳುಳ್ಳಿಯೊಂದಿಗೆ ಸಹ ಜೇನುತುಪ್ಪವನ್ನು ಬಳಸಬಹುದು. ಬೆಳ್ಳುಳ್ಳಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿಂದರೂ ತುಂಬಾ ಪ್ರಯೋಜನಕಾರಿ. ಇದಲ್ಲದೆ, ನೀವು ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಬಹುದು. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News