ಚ್ಯವನ್ಪ್ರಾಶ್ ಆರೋಗ್ಯಕ್ಕೆ ತುಂಬಾ ಲಾಭಕಾರಿ, ಆದ್ರೆ ಈ ಜನರು ಮರೆತೂ ಸೇವಿಸಬಾರದು
Chyawanprash Side Effects: ಚಳಿಗಾಲ ಬಂತೆಂದರೆ ಜನ ಚ್ಯವನಪ್ರಾಶವನ್ನು ಸೇವಿಸಲು ಆರಂಭಿಸುತ್ತಾರೆ. ಆದರೆ ಕೆಲವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಯಾರು ಚ್ಯವನಪ್ರಾಶ ಸೇವಿಸಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
Chyawanprash Health Harms: ಚಳಿಗಾಲ ಬಂದ ಕೂಡಲೇ ಜನರು ಚಳಿಗಾಲದ ಸೋಂಕು ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚ್ಯವನಪ್ರಾಶ್ ಅನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ಚ್ಯವನಪ್ರಾಶ್ ಅನ್ನು ಔಷಧಿ ಎಂದು ಪರಿಗಣಿಸಲಾಗುತ್ತದೆ. ಚ್ಯವನಪ್ರಾಶ ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಜೇನು, ಸರ್ಪ ಕೇಸರಿ, ಬಿಳಿ ಮುಸುಲಿ, ತಮಾಲಪತ್ರ ಎಲೆಗಳಂತಹ ಅನೇಕ ಗಿಡಮೂಲಿಕೆಗಳನ್ನು ಬೆರೆಸಿ ಚ್ಯವನಪ್ರಾಶ್ ಅನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಶರೀರ ಒಳಗಿನಿಂದ ಬೆಚ್ಚಗಿರುತ್ತದೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಆದರೆ ಕೆಲವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಯಾರು ಚ್ಯವನಪ್ರಾಶವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಈ ಜನರು ಚ್ಯವನಪ್ರಾಶವನ್ನು ಸೇವಿಸಬಾರದು
ಮಧುಮೇಹ ರೋಗಿಗಳು
ಮಧುಮೇಹ ರೋಗಿಗಳು ಮರೆತೂ ಕೂಡ ಚ್ಯವನಪ್ರಾಶವನ್ನು ಸೇವಿಸಬಾರದು. ಏಕೆಂದರೆ ಚ್ಯವನಪ್ರಾಶದ ರುಚಿಯನ್ನು ಸಮತೋಲನದಲ್ಲಿಡಲು ಅದರಲ್ಲಿ ಸಿಹಿಯನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಚ್ಯವನಪ್ರಾಶ್‌ನಲ್ಲಿರುವ ಸಕ್ಕರೆಯು ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಹೀಗಿರುವಾಗ ನೀವೂ ಕೂಡ ಮಧುಮೇಹ ರೋಗಿಗಳಾಗಿದ್ದರೆ ಮತ್ತು ಚ್ಯವನಪ್ರಾಶ್ ಅನ್ನು ಸೇವಿಸಿದರೆ, ಜಾಗ್ರತೆವಹಿಸಿ. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.
ಕಿಡ್ನಿ ರೋಗಿಗಳು
ಚ್ಯವನಪ್ರಾಶದ ಗುಣಧರ್ಮ ಬಿಸಿಯಾಗಿರುತ್ತದೆ, ಆದ್ದರಿಂದ ಅದು ನಿಧಾನಕ್ಕೆ ಜೀರ್ಣವಾಗುತ್ತದೆ. ನೀವು ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅಪ್ಪಿತಪ್ಪಿಯೂ ಚ್ಯವನಪ್ರಾಶವನ್ನು ಸೇವಿಸಬೇಡಿ.
ಹೊಟ್ಟೆಯ ಸಮಸ್ಯೆಗಳಿರುವವರು
ಹೊಟ್ಟೆಯ ಸಮಸ್ಯೆ ಇರುವವರು ಚ್ಯವನಪ್ರಾಶವನ್ನು ಸೇವಿಸಬಾರದು ಏಕೆಂದರೆ ಚ್ಯವನಪ್ರಾಶವನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಹೀಗಾಗಿ ನೀವು ಸಾಧ್ಯವಾದಷ್ಟು ಅದನ್ನು ತಪ್ಪಿಸಲು ಯತ್ನಿಸಿ.
ಇದನ್ನೂ ಓದಿ-ಕ್ಯಾನ್ಸರ್-ಹೃದ್ರೋಗಗಳಂತಹ ಮಾರಕ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಈ ಕಪ್ಪು ಗಜ್ಜರಿ
ಅಧಿಕ ಬಿಪಿ ರೋಗಿಗಳು
ನೀವು ಅಧಿಕ ರಕ್ತದೊತ್ತಡದ ರೋಗಿಗಳಾಗಿದ್ದರೆ, ನೀವು ಚ್ಯವನಪ್ರಾಶ್ ಅನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಚ್ಯವನಪ್ರಾಶ್ ಬಿಸಿ ಗುಣಧರ್ಮ ಹೊಂದಿರುತ್ತದೆ, ಇದರಿಂದಾಗಿ ಈ ಸಮಸ್ಯೆಯು ಹೆಚ್ಚಾಗಬಹುದು.
ಇದನ್ನೂ ಓದಿ-ಮಧುಮೇಹಿಗಳು ಮನೆಯಲ್ಲಿಯೇ ಬೆಳೆಸಬಹುದು ಈ ಇನ್ಸುಲಿನ್ ಸಸ್ಯ, ನೀಡುತ್ತೆ ಹಲವು ಲಾಭಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.