Chyawanprash In Summer: ಬೇಸಿಗೆಯಲ್ಲಿ ಚವನ್ ಪ್ರಾಶ್ ಎಷ್ಟು ಹಿತಕಾರಿ? ಆರೋಗ್ಯದ ವಿಷಯದಲ್ಲಿ ರಿಸ್ಕ್ ಬೇಡ
Disadvantages Of Chyawanprash In Summer: ಬೇಸಿಗೆ ಆರಂಭವಾಗುತ್ತಿದ್ದಂತೆ ಬಹುತೇಕರ ಮನದಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಹೌದು, ಬೇಸಿಗೆ ಕಾಲದಲ್ಲಿ ಚವನ್ ಪ್ರಾಶ್ ಸೇವನೆ ಮಾಡಬೇಕೆ ಅಥವಾ ಬೇಡ? ಇದರ ಸೇವನೆ ಆರೋಗ್ಯಕ್ಕೆ ಎಷ್ಟು ಹಿತಕಾರಿ ಎಂಬುದು.
Chyawanprash In Summer Benefits: ಬೇಸಿಗೆ ಆರಂಭವಾಗುತ್ತಿದ್ದಂತೆ ಬಹುತೇಕರ ಮನದಲ್ಲಿ ಮೂಡುವ ಪ್ರಶ್ನೆ ಎಂದರೆ, ಈ ಋತುವಿನಲ್ಲಿ ಚವನ್ ಪ್ರಾಶ್ ತಿಂದರೆ ಎಷ್ಟು ಹಿತಕಾರಿ? ಎಂಬುದು. ಹಾಗೆ ನೋಡಿದರೆ ಚವನ್ ಪ್ರಾಶ್ ಒಂದು ಬಿಸಿ ಪದಾರ್ಥ, ಇದೆ ಕಾರಣದಿಂದ ಹೆಚ್ಚಿನ ಜನರ ಮನಸ್ಸಿನಲ್ಲಿ ಈ ಪ್ರಶ್ನೆ ಮೂಡುವುದು ಸಹಜ.
ಚವನ್ ಪ್ರಾಶ್ ಬಿಸಿ ಪದಾರ್ಥ
ಚವನ್ ಪ್ರಾಶ್ ನಲ್ಲಿ ಹಲವು ಬಿಸಿ ಪದಾರ್ಥ ಹಾಗೂ ಔಷಧೀಯ ಪದಾರ್ಥಗಳ ಬಳಕೆಯಾಗುತ್ತವೆ, ಹೀಗಾಗಿ ಇದು ತುಂಬಾ ಬಿಸಿ ಗುಣಧರ್ಮ ಹೊಂದಿರುತ್ತದೆ. ಹೀಗಾಗಿ, ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ನಿಮಗೆ ಹಾನಿಯಾಗಬಹುದು. ಆದಾಗ್ಯೂ, ನೀವು ಆಮ್ಲಾ ಅಥವಾ ತಂಪು ಪದಾರ್ಥಗಳನ್ನು ಬಳಕೆ ಮಾಡಿ ತಯಾರಿಸಲಾದ ಚವನ್ ಪ್ರಾಶ್ ಅನ್ನು ಸೇವಿಸಿದರೆ, ನಿಮಗೆ ಹಾನಿಯಾಗುವುದಿಲ್ಲ. ಬೇಸಿಗೆಯಲ್ಲಿ ಚವನ್ ಪ್ರಾಶ್ ಸೇವಿಸುವಾಗ ಯಾವ ಕಾಳಜಿ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Moringa Leaves: ನಿಮ್ಮ ಡಯಟ್ ನಲ್ಲಿರಲಿ ನುಗ್ಗೆಸೊಪ್ಪು, ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಲಾಭಕಾರಿ
ಚವನ್ ಪ್ರಾಶ್ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ
ಚವನ್ ಪ್ರಾಶ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ಮೊದಲು ತಿಳಿದಿರಲಿ, ಆದರೆ ನೀವು ಇದನ್ನು ಅತಿಯಾಗಿ ಸೇವಿಸಿದರೆ, ಪ್ರಯೋಜನದ ಬದಲು ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ಸೇವಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇದರಿಂದ ನೀವು ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಬೇಸಿಗೆಯಲ್ಲಿ ಚವನ್ ಪ್ರಾಶ್ ದ ಅತಿಯಾದ ಸೇವನೆಯು ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ, ಲೂಸ್ ಮೋಶನ್ ಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ಹಲವು ವರದಿಗಳಲ್ಲಿ ಹೇಳಲಾಗಿದೆ.
ಇದನ್ನೂ ಓದಿ-Drinking Cold Water After Workout: ವರ್ಕೌಟ್ ಬಳಿಕ ನೀವೂ ಕೂಡ ತಣ್ಣೀರು ಕುಡಿಯುತ್ತೀರಾ?
ಈ ರೋಗಿಗಳು ಜಾಗ್ರತೆವಹಿಸಬೇಕು
ಬೇಸಿಗೆಯಲ್ಲಿ ಚವನ್ ಪ್ರಾಶ್ ವನ್ನು ಸೇವಿಸುವುದರಿಂದ ಚರ್ಮದ ಅಲರ್ಜಿ, ಕೆಂಪು ದದ್ದು ಮತ್ತು ತುರಿಕೆಯಂತಹ ಸಮಸ್ಯೆಯನ್ನು ಸಹ ನೀವು ಎದುರಿಸಬೇಕಾಗಬಹುದು. ಇದೇ ವೇಳೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳು ಅದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.