ಪ್ರಿಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಈ ಮಸಾಲೆ ! ಸೇವಿಸುವ ವಿಧಾನ ಹೀಗಿರಬೇಕು
ಪ್ರತಿದಿನ 4 ಗ್ರಾಂ ದಾಲ್ಚಿನ್ನಿ ಸೇವಿಸುವ ಜನರ ಫಾಸ್ಸ್ಟಿಂಗ್ ಬ್ಲಡ್ ಶುಗರ್ ನಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು. ಇದು ದೇಹದಲ್ಲಿ ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುವಲ್ಲಿ ಚಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಬೆಂಗಳೂರು : ಚಕ್ಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಂಶೋಧನೆಯೊಂದರ ಪ್ರಕಾರ ಚಕ್ಕೆ ಅಥವಾ ದಾಲ್ಚಿನ್ನಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎನ್ನಲಾಗಿದೆ. ಅದರಲ್ಲಿಯೂ ಪ್ರಿ-ಡಯಾಬಿಟಿಸ್ ಇರುವವರಿಗೆ ಇದು ರಾಮಬಾಣ ಪರಿಹಾರ.
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು ಚಕ್ಕೆ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪತ್ತೆ ಮಾಡಿದೆ. ಈ ಡಬಲ್-ಬ್ಲೈಂಡ್ ಕ್ರಾಸ್ಒವರ್ ಪ್ರಯೋಗದಲ್ಲಿ, ಜನರಿಗೆ 4 ವಾರಗಳವರೆಗೆ ಪ್ರತಿದಿನ 4 ಗ್ರಾಂ ಚಕ್ಕೆ ನೀಡಲಾಯಿತು.ಇದಾದ ನಂತರ ಅವರ ಬ್ಲಡ್ ಶುಗರನ್ನು ಚಕ್ಕೆ ನೀಡದ ಗುಂಪಿನೊಂದಿಗೆ ಹೋಲಿಸಿ ನೋಡಲಾಯಿತು. ಈ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿತ್ತು.
ಇದನ್ನೂ ಓದಿ : ಈ ಸಮಸ್ಯೆಗಳು ನಿಮಗೂ ಇದ್ದಲ್ಲಿ ಮೆಂತ್ಯೆ ಕಾಳನ್ನು ಸೇವಿಸಲೇಬಾರದು !
4 ಗ್ರಾಂ ಚಕ್ಕೆ ಸಾಕು :
ಪ್ರತಿದಿನ 4 ಗ್ರಾಂ ದಾಲ್ಚಿನ್ನಿ ಸೇವಿಸುವ ಜನರ ಫಾಸ್ಸ್ಟಿಂಗ್ ಬ್ಲಡ್ ಶುಗರ್ ನಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು. ಇದು ದೇಹದಲ್ಲಿ ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುವಲ್ಲಿ ಚಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ.gut microbiome ಮೇಲೆ ಪರಿಣಾಮ ಬೀರುವ ಮೂಲಕ ಚಕ್ಕೆ ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಎನ್ನಲಾಗಿದೆ.
ದೈನಂದಿನ ಆಹಾರದಲ್ಲಿ ಚಕ್ಕೆ ಸೇರಿಸಿ:
ಆದರೆ, ಚಕ್ಕೆ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇನ್ನೂ ತಿಳಿದಿಲ್ಲ. ಆದರೆ ಈ ಅಧ್ಯಯನದ ಫಲಿತಾಂಶಗಳಿಂದ ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುದರಿಂದ ಮಧುಮೇಹದ ಅಪಾಯದಲ್ಲಿರುವವರಿಗೆ ಪ್ರಯೋಜನವಾಗುತ್ತದೆ ಎನ್ನುವುದನ್ನು ಸೂಚಿಸಿದೆ.
ಇದನ್ನೂ ಓದಿ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ 3 ಆಹಾರಗಳನ್ನು ಸೇವಿಸಬೇಡಿ..!
ಹೆಚ್ಚಿನ ಸಂಶೋಧನೆಯ ಅಗತ್ಯವಿದೆ :
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಚಕ್ಕೆಯಲ್ಲಿ ಯಾವ ಸಕ್ರಿಯ ಪದಾರ್ಥಗಳು (ಬಯೋಆಕ್ಟಿವ್ ಸಂಯುಕ್ತಗಳು) ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುವುದು.ಅದಲ್ಲದೆ, ಪ್ರಿಡಯಾಬಿಟಿಸ್ ಅನ್ನು ನಿಯಂತ್ರಿಸುವಲ್ಲಿ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ದಾಲ್ಚಿನ್ನಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ