Weight Loss Remedy : ನಾವು ಅನುಸರಿಸುತ್ತಿರುವ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಸ್ಥೂಲಕಾಯತೆಯು ನಮ್ಮ ದೇಹ ಸೌಂದರ್ಯವನ್ನು ಹಾಳು ಮಾಡುವುದು ಮಾತ್ರವಲ್ಲ, ಅನೇಕ ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತದೆ. ಸ್ಥೂಲಕಾಯತೆಯಿಂದ ಥೈರಾಯ್ಡ್, ಮಧುಮೇಹ,ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್ ನಂಥಹ ಕಾಯಿಲೆಗಳ ಅಪಾಯ ಕೂಡಾ ಹೆಚ್ಚಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಅನುಸರಿಸುತ್ತಾರೆ. ಜಿಮ್ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ.ಆದರೆ ಕಠಿಣ ಪರಿಶ್ರಮದ ಹೊರತಾಗಿಯೂ, ಬೊಜ್ಜು ಕರಗಿಸುವುದು ಮತ್ತು ತೂಕ ಇಳಿಸುವುದು ಸಾಧ್ಯವಾಗುವುದಿಲ್ಲ. ಹೀಗಿರುವಾಗ ತೂಕವನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ನಾವಿಲ್ಲಿ ವಿಶೇಷವಾದ ರೀತಿಯಲ್ಲಿ ನೀರನ್ನು ಸೇವಿಸುವ ಬಗ್ಗೆ ಹೇಳುತ್ತಿದ್ದೇವೆ. ನಿಯಮಿತವಾಗಿ ಹೀಗೆ ಮಾಡುವುದರಿಂದ ತ್ವರಿತವಾಗಿ ತೂಕ ಕಳೆದುಕೊಳ್ಳಲು ಸಹಾಯವಾಗಲಿದೆ.ಇಲ್ಲಿ ನೀರು ಅಂದರೆ ಬರೀ ನೀರಲ್ಲ ಆ ನೀರಿಗೆ ಅಡುಗೆ ಮನೆಯಲ್ಲಿರುವ ಎರಡು ಮಸಾಲೆಯನ್ನು ಸೇರಿಸಬೇಕಾಗುತ್ತದೆ.
ಇದನ್ನೂ ಓದಿ : ವೀಳ್ಯದೆಲೆ ಜೊತೆಗೆ ಇದನ್ನು ಬೆರೆಸಿ ತಿಂದರೆ ಯೂರಿಕ್ ಆಸಿಡ್ ಕರಗಿಸಿ ನೀರಾಗುತ್ತದೆ ! ಆದರೆ ಹೀಗೆಯೇ ಮತ್ತು ಇಷ್ಟೇ ತಿನ್ನಬೇಕು
ತೂಕ ನಷ್ಟಕ್ಕೆ ಅರಿಶಿನ ಮತ್ತು ಕರಿಮೆಣಸು ನೀರು :
ಸ್ಥೂಲಕಾಯದ ಸಮಸ್ಯೆಯನ್ನು ತೊಡೆದುಹಾಕಲು,ಅಡುಗೆಮನೆಯಲ್ಲಿ ಇರುವ ಕೆಲವು ಮಸಾಲೆಗಳು ತುಂಬಾ ಪ್ರಯೋಜನಕಾರಿ. ಈ ಮಸಾಲೆಗಳಲ್ಲಿ ಅರಿಶಿನ ಮತ್ತು ಕರಿಮೆಣಸು ಕೂಡಾ ಸೇರಿದೆ. ಈ ಎರಡೂ ಮಸಾಲೆಗಳನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.ಆದರೆ ಅವುಗಳಲ್ಲಿರುವ ಅಂಶಗಳು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಜೊತೆಗೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳೂ ಇದ್ದು,ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಅದೇ ಸಮಯದಲ್ಲಿ, ಕರಿಮೆಣಸಿನಲ್ಲಿ ಪೈಪರಿನ್ ಕಂಡುಬರುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.ದೇಹದಲ್ಲಿ ಕೊಬ್ಬು ಹೆಚ್ಚಿಸುವ ಕೋಶಗಳ ರಚನೆಯನ್ನು ತಡೆಯುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ.ಕರಿಮೆಣಸು ಬೆರೆಸಿದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ತ್ವರಿತ ತೂಕ ನಷ್ಟಕ್ಕೆ ಸಹಾಯವಾಗುವುದು.
ಇದನ್ನೂ ಓದಿ : ಮಧುಮೇಹ ಇದ್ದವರು ಈ ತರಕಾರಿ ಸೇವಿಸಿ, ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ಬ್ಲಡ್ ಶುಗರ್ !
ಸೇವಿಸುವುದು ಹೇಗೆ? :
ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ.ನಂತರ ಅರ್ಧ ಚಮಚಕ್ಕಿಂತ ಸ್ವಲ್ಪ ಕಡಿಮೆ ಅರಿಶಿನ ಪುಡಿಯನ್ನು ಸೇರಿಸಿ ಅದನ್ನು ಕುದಿಸಿ.ನೀರು ಕುದಿ ಬಂದಾಗ ಅದಕ್ಕೆ ಚಿಟಿಕೆ ಕರಿಮೆಣಸಿನ ಪುಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ 5-7 ನಿಮಿಷಗಳವರೆಗೆ ಕುದಿಯಲು ಬಿಡಿ.ನಂತರ ಫಿಲ್ಟರ್ ಮಾಡಿ ಈ ನೀರನ್ನು ಕುಡಿಯಿರಿ.ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಭಾಗದ ಬೊಜ್ಜು ಕರಗುತ್ತದೆ.
ಅರಿಶಿನ ಮತ್ತು ಕರಿಮೆಣಸಿನ ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.ಇದರ ಜೊತೆಗೆ ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡಾ ಮುಖ್ಯ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ