ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ ಈ ವಸ್ತುಗಳು
Tooth Decay: ಸಾಮಾನ್ಯವಾಗಿ ನಾವು ನಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಆದರೆ, ಅನೇಕ ಬಾರಿ ನಮ್ಮ ಒರಲ್ ಹೆಲ್ತ್ ಅಂದರೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇದು ಹಲ್ಲುಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಲ್ಲಿನ ಸಮಸ್ಯೆಗಳಿಗೆ ಮನೆಮದ್ದು: ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದು. ಸಾಮಾನ್ಯವಾಗಿ ಅತಿಯಾದ ಸಿಹಿ ಪದಾರ್ಥಗಳ ಸೇವನೆ, ಚಾಕೊಲೇಟ್ ಸೇವನೆಯಿಂದ ಹಲ್ಲುಗಳಲ್ಲಿ ಹುಳುಕು ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಕಾರಣ ಏನೇ ಇರಲಿ ಹಲ್ಲಿನ ಸಮಸ್ಯೆಗಳಿಗೆ ಮನೆಯಲ್ಲಿ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿ ಪರಿಹಾರ ಪಡೆಯಬಹುದು. ಇಂದು ಅಂತಹ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ ಈ ವಸ್ತುಗಳು :
ಸಾಮಾನ್ಯವಾಗಿ ನಾವು ನಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಆದರೆ, ಅನೇಕ ಬಾರಿ ನಮ್ಮ ಒರಲ್ ಹೆಲ್ತ್ ಅಂದರೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇದು ಹಲ್ಲುಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಹಲ್ಲುಗಳ ಸಮಸ್ಯೆಯನ್ನು ಪರಿಹರಿಸಲು ನಮ್ಮ ಸುತ್ತಲೂ ಲಭ್ಯವಿರುವ ಕೆಲವು ವಸ್ತುಗಳು ನಮಗೆ ಸಹಕಾರಿ ಆಗಿದೆ. ಅವುಗಳಲ್ಲಿ ಲವಂಗ, ಬೇವಿನ ಎಲೆಗಳು ಮತ್ತು ಅಲೋವೆರಾ ಸಹ ಸೇರಿವೆ. ಇವುಗಳನ್ನು ಬಳಸಿ ಹಲ್ಲಿನ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ತಿಳಿಯೋಣ...
ಇದನ್ನೂ ಓದಿ- Hing Health Benefits: ಚಿಟಿಕೆ ಇಂಗಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ
ಲವಂಗ:
ಸಾಮಾನ್ಯವಾಗಿ ನಾವು ಕೆಲವು ಖಾದ್ಯಗಳಲ್ಲಿ ಮಸಾಲೆ ಪದಾರ್ಥವಾಗಿ ಬಳಸುವ ಲವಂಗ ಬಾಯಿಯ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ಈ ಮಸಾಲೆ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಲವಂಗದ ಎಣ್ಣೆಯನ್ನು ನೋವಿನ ಸ್ಥಳಗಳಿಗೆ ಅನ್ವಯಿಸಿ ಅಥವಾ ಕಚ್ಚಾ ಲವಂಗವನ್ನು ಅಗಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ಬೇವು:
ಆಯುರ್ವೇದದಲ್ಲಿ ಬೇವನ್ನು ಔಷಧೀಯ ಗುಣಗಳ ಆಗರ ಎಂದು ಬಣ್ಣಿಸಲಾಗಿದೆ. ಬೇವು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಬೇವಿನ ಎಳೆಗಳು, ಅದರ ಕಡ್ಡಿ ಹೀಗೆ ಬೇವಿನ ಪ್ರತಿಯೊಂದು ಭಾಗವೂ ಔಷಧೀಯ ಗುಣಗಳನ್ನು ಹೊಂದಿದೆ. ಇದು ಯಾವುದೇ ಆರೋಗ್ಯ ನಿಧಿಗಿಂತ ಕಡಿಮೆ ಇಲ್ಲ. ಹಲ್ಲುಗಳಲ್ಲಿ ಹುಳುಕು ಕಂಡು ಬಂದಾಗ ಅದರ ಸೊಪ್ಪನ್ನು ರುಬ್ಬಿ ಬಾಧಿತ ಜಾಗಕ್ಕೆ ಹಚ್ಚುವುದರಿಂದ ಪರಿಹಾರ ಪಡೆಯಬಹುದು. ಇದಲ್ಲದೆ, ಬೇವಿನ ಕಡ್ಡಿಯನ್ನು ಬಳಸಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳು ಸ್ವಚ್ಛವಾಗುವುದು ಮಾತ್ರವಲ್ಲ, ಆರೋಗ್ಯವಾಗಿಯೂ ಇರುತ್ತವೆ.
ಇದನ್ನೂ ಓದಿ- ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ
ಅಲೋ ವೆರಾ :
ಸಾಮಾನ್ಯವಾಗಿ ಅಲೋ ವೆರಾವನ್ನು ಸೌಂದರ್ಯವರ್ಧಕವಾಗಿ ಬಳಸುತ್ತೇವೆ. ಆದರೆ, ಇದು ಹಲ್ಲುಗಳ ಸಮಸ್ಯೆಗಳಿಗೂ ಪರಿಹಾರವಾಗಿ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಲೋ ವೆರಾ ರಸದಿಂದ ಹಲ್ಲುಗಳನ್ನು ತೊಳೆದರೆ ಅದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಚರ್ಮದ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.