ಈ ಒಂದು ವಸ್ತುವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಾಕು ತೂಕ ಕಡಿಮೆ ಮಾಡಬಹುದು

  Curd For Weight Loss:ತೂಕ ಕಳೆದುಕೊಳ್ಳಲು ಬಯಸುವವರು ಆಹಾರ ಮತ್ತು ಪಾನೀಯವನ್ನು ಕಡಿಮೆ ಮಾಡಿ ವ್ಯಾಯಾಮ ಮಾಡುತ್ತಾರೆ. ಆದರೆ ಹೀಗೆ ಮಾಡಿ ಆರೋಗ್ಯಕರ ರೀತಿಯಲ್ಲಿ ತೂಕ ನಷ್ಟ ಮಾಡಲು ಸಾಧ್ಯವಿಲ್ಲ.  

Written by - Ranjitha R K | Last Updated : Jul 21, 2022, 02:54 PM IST
  • ತೂಕ ನಷ್ಟಕ್ಕೆ ಮೊಸರಿನ ಪರಿಹಾರ
  • ಮೊಸರು ಫ್ಯಾಟ್ ಬರ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.
  • ಮೊಸರು ಪ್ರೋಟೀನ್ ಅನ್ನು ಹೊಂದಿರುತ್ತದೆ
 ಈ ಒಂದು ವಸ್ತುವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಾಕು ತೂಕ ಕಡಿಮೆ ಮಾಡಬಹುದು  title=
Curd Benefits for weight loss (file photo)

Curd For Weight Loss: ಬೊಜ್ಜು ಅಥವಾ ಹೆಚ್ಚಿದ ತೂಕವನ್ನು ಕಡಿಮೆ ಮಾಡುವುದು ಅಷ್ಟು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬೊಜ್ಜು ಮತ್ತು ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ತೂಕ ಕಳೆದುಕೊಳ್ಳಲು ಬಯಸುವವರು ಆಹಾರ ಮತ್ತು ಪಾನೀಯವನ್ನು ಕಡಿಮೆ ಮಾಡಿ ವ್ಯಾಯಾಮ ಮಾಡುತ್ತಾರೆ. ಆದರೆ ಹೀಗೆ ಮಾಡಿ ಆರೋಗ್ಯಕರ ರೀತಿಯಲ್ಲಿ ತೂಕ ನಷ್ಟ ಮಾಡಲು ಸಾಧ್ಯವಿಲ್ಲ. ಆರೋಗ್ಯಕರ ತೂಕ ನಷ್ಟ ಮಾಡಬೇಕಾದರೆ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬಹುದು. 

ತೂಕ ನಷ್ಟಕ್ಕೆ ಮೊಸರಿನ ಪ್ರಯೋಜನಗಳು :
1- ಮೊಸರು  ಫ್ಯಾಟ್ ಬರ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3- ಚಯಾಪಚಯ ಸರಿಯಾಗಿ ಕೆಲಸ ಮಾಡಿದಾಗ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
4- ಮೊಸರು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ಹೊಟ್ಟೆಯನ್ನು ತ್ವರಿತವಾಗಿ ತುಂಬುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. 

ಇದನ್ನೂ ಓದಿ : ಮಾತ್ರೆ, ಇನ್ಸುಲಿನ್ ಬೇಕಿಲ್ಲ ಈ ಮೂರು ವಸ್ತುಗಳು ಮುಕ್ತಿ ನೀಡುತ್ತವೆ ಡಯಾಬಿಟೀಸ್ ನಿಂದ

ತೂಕ ಇಳಿಸಿಕೊಳ್ಳಲು ಈ ರೀತಿಯಾಗಿ ಮೊಸರನ್ನು ಬಳಸಿ : 
ತೂಕ ಇಳಿಸಿಕೊಳ್ಳಬೇಕಾದರೆ ಆಹಾರದಲ್ಲಿ ಸಾದಾ ಮೊಸರನ್ನು ಸೇರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಒಂದು ಬೌಲ್ ಮೊಸರು ತೆಗೆದುಕೊಳ್ಳಿ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದೊಂದಿಗೆ ಇದನ್ನು ಸೇವಿಸಿ. ಮೊಸರಿ ತಿಂದಾಗ ಬೇರೆ  ಏನನ್ನೂ ಹೆಚ್ಚಿಗೆ ತಿನ್ನಲು ಸಾಧ್ಯವಾಗುವುದಿಲ್ಲ. 

ಮೊಸರು ಮತ್ತು ಡ್ರೈ ಫ್ರುಟ್ಸ್ : 
ಮೊಸರನ್ನು ಇನ್ನೂ ಹೆಚ್ಚು ಆರೋಗ್ಯಕರವಾಗಿಸಲು ಅದಕ್ಕೆ  ತುಂಡು ಮಾಡಿದ ಡ್ರೈ ಫ್ರುಟ್ ಗಳನ್ನು ಸೇರಿಸಬೇಕು. ಮೊಸರಿಗೆ ಡ್ರೈ ಫ್ರೂಟ್ಸ್ ಸೇರಿಸುವುದರಿಂದ ಅದು ಹೆಚ್ಚು ಪೌಷ್ಟಿಕವಾಗುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸಿಗುತ್ತದೆ. ಈ ಕಾಂಬಿನೇಷನ್ ತಿನ್ನುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ  ಈ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ : ಹಲ್ಲುಜ್ಜುವ ಬ್ರಷ್‌ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು?

ಮೊಸರು ಮತ್ತು ಕರಿಮೆಣಸು  : 
ಸಾದಾ ಮೊಸರು ಇಷ್ಟವಾಗದಿದ್ದರೆ, ಕರಿಮೆಣಸು ಸೇರಿಸಿ ತಿನ್ನಬಹುದು. . ಕರಿಮೆಣಸು ಮತ್ತು ಮೊಸರು ಎರಡೂ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News