Coconut Water Benefits - ಮನೆಯಲ್ಲಿ ಅಜ್ಜಿ ಮತ್ತು ಅಮ್ಮಮ್ಮರು ಗರ್ಭಾವಸ್ಥೆಯಲ್ಲಿ (Pregnancy) ಸಾಮಾನ್ಯವಾಗಿ ತೆಂಗಿನ ನೀರನ್ನು ಕುಡಿಯಲು ಶಿಫಾರಸು ಮಾಡುವುದನ್ನು ನೀವೆಲ್ಲರೂ ಕೇಳಿರಬಹುದು. ಇದನ್ನು ಕುಡಿಯುವುದರಿಂದ ಮಗುವಿನ ಬಣ್ಣ ಸ್ಪಷ್ಟವಾಗುತ್ತದೆ ಮತ್ತು ಕೂದಲು ಕೂಡ ಚೆನ್ನಾಗಿರುತ್ತದೆ ಎಂದು ಅವರು ನಂಬುತ್ತಾರೆ, ಆದರೆ ಇದು ನಿಜವೋ ಅಥವಾ ಒಂದು ಮಿಥ್ಯವೋ? ತಿಳಿದುಕೊಳ್ಳೋಣ ಬನ್ನಿ...

COMMERCIAL BREAK
SCROLL TO CONTINUE READING

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ (Health Tips) ತೆಂಗಿನ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಆರಂಭದಲ್ಲಿ, ಅಜ್ಜಿಯರು ತೆಂಗಿನ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಇದನ್ನುಕುಡಿಯುವ ಮೂಲಕ, ಮಗು ಬೆಳ್ಳಗಾಗುತ್ತದೆ ಮತ್ತು ಮಗುವಿನ ಕೂದಲುಗಳು ದಟ್ಟ ಹಾಗೂ ಕಪ್ಪಗಾಗುತ್ತವೆ ಎಂಬುದು ಅವರ ನಂಬಿಕೆ. ಆದಾಗ್ಯೂ ಇದು ಸಂಪೂರ್ಣ ನಿಜವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು (Coconut Water) ಕುಡಿಯುವುದರಿಂದ ಆಗುವ ಪ್ರಯೋಜನಗಳು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಮಿಥ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ. 

ಗರ್ಭಾವಸ್ಥೆಯಲ್ಲಿ ತೆಂಗಿನ ನೀರು ಅಥವಾ ಎಳೆ ನೀರು ಕುಡಿಯುವುದರಿಂದಾಗುವ ಲಾಭಗಳು (Coconut Water Benefits)
ತೆಂಗಿನ ನೀರು ಫ್ಯಾಟ್ ಫ್ರೀ ಆಗಿದ್ದು, ಇದು ಹೆಲ್ದಿ, ತಂಪು ಹಾಗೂ ರಿಫ್ರೆಶಿಂಗ್ ಆಗಿರುತದೆ. ಇದು ಸಾಮಾನ್ಯವಾಗಿ ಶರೀರವನ್ನು ಹೈಡ್ರೇಟ್ ಆಗಿ ಇರಿಸುವ ಒಂದು ಡ್ರಿಂಕ್ ಆಗಿದೆ.ಗರ್ಭಾವಸ್ಥೆಯಲ್ಲಿ ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಹೀಗಿರುವಾಗ ಅದರ ಕೆಲ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ
ತನ್ನ ಜೀರೋ ಕೊಲೆಸ್ಟ್ರಾಲ್ ಗುಣಧರ್ಮದ ಕಾರಣ ತೆಂಗಿನ ನೀರು ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ.

ಇಮ್ಯೂನ್ ಸಿಸ್ಟಂ ಬಲವರ್ಧನೆ
ತೆಂಗಿನ ನೀರಿನಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದೆ ಕಾರಣದಿಂದ ಇದು ತಾಯಿ ಮತ್ತು ಮಗುವನ್ನು ರೋಗಗಳಿಂದ ರಕ್ಷಿಸುತ್ತದೆ. ವರದಿಗಳ ಪ್ರಕಾರ, 'ಮೊನೊಲೌರಿನ್' ಎಂಬ ರೋಗಗಗಳ ವಿರುದ್ಧ ಹೋರಾಡುವ ಆಮ್ಲದ ಉತ್ಪಾದನೆಗೆ ಕಾರಣವಾದ ಲಾರಿಕ್ ಆಮ್ಲವು ಜ್ವರ ಮತ್ತು ಎಚ್ಐವಿಯಂತಹ ಕಾಯಿಲೆಗಳನ್ನು ತಡೆಯುತ್ತದೆ.


ಪಚನ ಶಕ್ತಿ ಹೆಚ್ಚಿಸುತ್ತದೆ
ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ, pH ಅನ್ನು ನಿರ್ವಹಿಸುತ್ತದೆ. ತೆಂಗಿನ ನೀರು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.

ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ
ಗರ್ಭಾವಸ್ಥೆಯಲ್ಲಿ ತೆಂಗಿನ ನೀರು ಉತ್ತಮ ಆಯ್ಕೆಯಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಇದು ಶೇ. 95 ಶುದ್ಧ ನೀರಾಗಿದೆ. ಆದ್ದರಿಂದ ಇದು ಎಲೆಕ್ಟ್ರೋಲೈಟ್ಸ್ ಅನ್ನು ಒದಗಿಸುತ್ತದೆ. ತೆಂಗಿನ ನೀರು ಹೈಡ್ರೇಟಿಂಗ್ ಏಜೆಂಟ್‌ಗಳಿಂದ ತುಂಬಿರುತ್ತದೆ, ಇದು ದೇಹದಲ್ಲಿನ ಖನಿಜಗಳ ಶುದ್ಧ ಮೂಲಗಳಲ್ಲಿ ಒಂದಾಗಿದೆ. ಹೈಡ್ರೇಟಿಂಗ್ ಏಜೆಂಟ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗಿವೆ. ಏಕೆಂದರೆ ಅವರಿಗೆ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ಹೈಡ್ರೇಶನ್ ಅವಶ್ಯಕತೆ ಇರುತ್ತದೆ.


ಇದನ್ನೂ ಓದಿ-Weight Loss tips : ದೇಹ ಸಣ್ಣಗಾಗಬೇಕಾದರೆ ಈ ಎಲೆಯನ್ನು ಬಳಸಿ ನೋಡಿ


ತೆಂಗಿನ ನೀರಿಗೆ ಸಂಬಂಧಿದಂತೆ ಕೆಲ ಮಿಥ್ಯಗಳು (Coconut Water Myths)
1. ಮಗುವಿನ ಬಣ್ಣ ಮಗುವಿನ ಪೋಷಕರ ಮೇಲೆ ಅವಲಂಭಿಸಿದೆ. ತೆಂಗಿನ ನೀರಿನಿಂದ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.
2. ಮಗುವಿನ ಕೂದಲುಗಳ ದಟ್ಟತನ ಹಾಗೂ ಕಪ್ಪುತನ ಜೆನೆಟಿಕ್ ಫ್ಯಾಕ್ಟರ್ ಅವಲಂಭಿಸಿದೆ. ತೆಂಗಿನ ನೀರಿನಿಂದ ಮಗುವಿನ ಕೂದಲಿನ ವಿಕಾಸದ ಮೇಲೆ ಯಾವುದೇ ರೀತಿಯ ಪ್ರಭಾವ ಉಂಟಾಗುವುದಿಲ್ಲ
3. ಎಳೆ ನೀರು ಕುಡಿದರೆ ಸಾಕು ಎಲ್ಲಾ ಪೋಷಕಾಂಶಗಳು ಸಿಗುತ್ತವೆ ಅಂತ ನೀವೂ ಕೂಡ ಯೋಚಿಸುತ್ತಿದ್ದರೆ ಅದು ಸರಿಯಲ್ಲ. ತೆಂಗಿನ ನೀರು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ, ಆದರೆ ಇದು ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಸಾಧ್ಯವಿಲ್ಲ.


ಇದನ್ನೂ ಓದಿ-Cholesterol: ಈ 5 ನೈಸರ್ಗಿಕ ವಿಧಾನಗಳಿಂದ ಕಡಿಮೆಯಾಗುತ್ತೆ ಕೊಲೆಸ್ಟ್ರಾಲ್ ಮಟ್ಟ

ಗಮನಿಸಿ: ಇಂದು ಮಾರುಕಟ್ಟೆಯಲ್ಲಿ ಹಲವು ಫ್ಲೇವರ್ ಹಾಗೂ ಹಲವು ರೂಪದಲ್ಲಿ ತೆಂಗಿನ ನೀರು ಸಿಗುತ್ತಿದೆ. ಹೀಗಾಗಿ ಫ್ರೆಶ್ ಆಗಿರುವ ಎಳೆನೀರು ಸೇವನೆ ನಿಮ್ಮ ಆದ್ಯತೆಯಾಗಿರಲಿ.

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ  ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.