ಈ ಕಾರಣದಿಂದ ಪುರುಷರಿಗೆ ಕಾಣಿಸಿಕೊಳ್ಳುತ್ತದೆ ಬೆನ್ನಿನ ನೋವಿನ ಸಮಸ್ಯೆ .!

ನಿಮ್ಮ ಕುಳಿತುಕೊಳ್ಳುವ, ಮಲಗುವ ಭಂಗಿ ಸರಿಯಿಲ್ಲದಿದ್ದರೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾದಾಗಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. 

Written by - Ranjitha R K | Last Updated : Apr 2, 2022, 01:27 PM IST
  • ಪುರುಷರಲ್ಲಿ ಕಾಣಿಸಿಕೊಳ್ಳಲಿದೆ ಬೆನ್ನು ನೋವಿನ ಸಮಸ್ಯೆ
  • ಬೆನ್ನು ನೋವಿಗೆ ಕಾರಣ ಹಲವು
  • ಕ್ಯಾಲ್ಸಿಯಂ ಕೊರತೆ ಎದುರಾದಾಗಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ
ಈ ಕಾರಣದಿಂದ ಪುರುಷರಿಗೆ ಕಾಣಿಸಿಕೊಳ್ಳುತ್ತದೆ ಬೆನ್ನಿನ ನೋವಿನ ಸಮಸ್ಯೆ .!   title=
Reason for backpain (File photo)

ನವದೆಹಲಿ : ಬೆನ್ನುನೋವಿನ ಸಮಸ್ಯೆಗೆ ನಾನಾ ಕಾರಣಗಳಿರುತ್ತವೆ. ದಿನ ಬೆಳಗಾದರೆ ಒಬ್ಬರಲ್ಲದಿದ್ದರೆ ಒಬ್ಬರು ಬೆನ್ನು ನೋವಿನ ಸಮಸ್ಯೆಯ ಬಗ್ಗೆ ಮಾತನಾಡುತ್ತಿರುತ್ತಾರೆ (Reason for back pain). ಸಾಮಾನ್ಯವಾಗಿ ದೇಹದಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪುರುಷರಿಗೆ ಬೆನ್ನು ನೋವು ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. 

ನಿಮ್ಮ ಕುಳಿತುಕೊಳ್ಳುವ, ಮಲಗುವ ಭಂಗಿ ಸರಿಯಿಲ್ಲದಿದ್ದರೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ (Reason for back pain). ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾದಾಗಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಈ ಸಮಸ್ಯೆ ಉಲ್ಬಣಗೊಳ್ಳಬಹುದು.  

ಇದನ್ನೂ ಓದಿ : Cholesterol: ಈ 5 ನೈಸರ್ಗಿಕ ವಿಧಾನಗಳಿಂದ ಕಡಿಮೆಯಾಗುತ್ತೆ ಕೊಲೆಸ್ಟ್ರಾಲ್ ಮಟ್ಟ

ಪುರುಷರಲ್ಲಿ ಬೆನ್ನುನೋವಿನ ಕಾರಣಗಳು :
1. ಯಾವುದೇ ರೀತಿಯ ಸೋಂಕಿನಿಂದಾಗಿ (Infection), ಬೆನ್ನುನೋವಿನ ಸಮಸ್ಯೆ ಬಾಧಿಸಬಹುದು. 
2. ಇದಲ್ಲದೇ ಬೆನ್ನುಮೂಳೆಯಲ್ಲಿ ಸಮಸ್ಯೆ ಇದ್ದರೂ ಬೆನ್ನಿನ ನೋವಿನ ಎದುರಾಗಬಹುದು (Back pain). 
3. ಹೆಚ್ಚಿನ ತೂಕವನ್ನು ಎತ್ತುವ ಕಾರಣದಿಂದಾಗಿ ಬೆನ್ನು ನೋವು ಕಾಣಿಸಿಕೊಳ್ಳಬಹುದು.  
4. ಸಂಧಿವಾತ ಅಥವಾ ಗೌಟ್ ಸಮಸ್ಯೆ ಇದ್ದರೆ, ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 
5. ನಿದ್ರೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ, ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 

ಬೆನ್ನುನೋವಿನ ಚಿಕಿತ್ಸೆ :
ಮೊದಲನೆಯದಾಗಿ, ಬೆನ್ನಿನಲ್ಲಿ ನೋವು ಇದ್ದರೆ, ನೀವು ಕುಳಿತುಕೊಳ್ಳುವ ಅಥವಾ ಮಲಗುವ ಭಂಗಿಯನ್ನು ಸರಿಪಡಿಸಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಹಲವಾರು ರೀತಿಯ ಸಮಸ್ಯೆಗಳು ದೂರವಾಗುತ್ತವೆ.
2. ಇದಲ್ಲದೇ ವೈದ್ಯರ ಸಲಹೆ ಮೇರೆಗೆ ಇಂಜೆಕ್ಷನ್ ಅಥವಾ ಔಷಧಿಯನ್ನು (Medicine)ತೆಗೆದುಕೊಳ್ಳಬಹುದು.
3. ನೀವು ಬೆನ್ನು ನೋವು ಹೊಂದಿದ್ದರೆ, ಹೀಟಿಂಗ್ ಪ್ಯಾಡ್ ಬಳಸುವ ಮೂಲಕ ನೋವನ್ನು ಕಡಿಮೆ ಮಾಡಬಹುದು. 
4. ಬೆನ್ನು ನೋವನ್ನು ಗುಣಪಡಿಸಲು ವ್ಯಾಯಾಮ, ಯೋಗದ ಮೊರೆ ಹೋಗಬಹುದು. 

ಇದನ್ನೂ ಓದಿ : Weight Loss tips : ದೇಹ ಸಣ್ಣಗಾಗಬೇಕಾದರೆ ಈ ಎಲೆಯನ್ನು ಬಳಸಿ ನೋಡಿ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News