ನವ ದೆಹಲಿ:  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಅನ್ನುವುದು ನಮಗೆ ತಿಳಿದೇ ಇದೆ. ನೀವು  ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿಸುತ್ತಿರುತ್ತೀರಿ. ಹಣ್ಣು ಖರೀದಿಸುವ ವೇಳೆ, ಕೆಲವು ಹಣ್ಣುಗಳು ಮೇಲೆ ಸ್ಟಿಕ್ಕರ್ ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ. ಈ ಸ್ಟಿಕರ್ ಗಳನ್ನು (Fruit Labels)ಯಾಕೆ ಹಾಕಿರುತ್ತಾರೆ ಅನ್ನೋ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ? ಹಣ್ಣಿನ ಮೇಲೆ ಹಣ್ಣು ಲೇಬಲ್‌ಗಳನ್ನು ಹಾಕುವುದರ ಅರ್ಥ ಏನು ಅನ್ನುವುದನ್ನು ತಿಳಿಯಬೇಕಾದರೆ ಈ ಸುದ್ದಿ ಓದಿ..


COMMERCIAL BREAK
SCROLL TO CONTINUE READING

ಹಣ್ಣಿನ ಮೇಲೆ ಸ್ಟಿಕ್ಕರ್ ಇದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ : 
ಹಣ್ಣುಗಳ (Fruits) ಮೇಲಿನ ಸ್ಟಿಕ್ಕರ್‌ಗಳು (Fruit labels) ಅವುಗಳ ಗುಣಮಟ್ಟದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತವೆ. ಯಾವ ಹಣ್ಣುಗಳನ್ನು ಖರೀದಿಸಬೇಕು ಮತ್ತು ಯಾವ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದ ಅನ್ನುವುದನ್ನು ಅದು ತಿಳಿಸುತ್ತದೆ. ಹಣ್ಣುಗಳ ಮೇಲೆ ಸ್ಟಿಕ್ಕರ್  (Sticker on Fruits)ಬಗ್ಗೆಯೂ  ಕಾಳಜಿ ವಹಿಸುವ ಅಗತ್ಯವಿದೆ..


ಇದನ್ನೂ ಓದಿ :  Hot Water : ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಗೊತ್ತಾ?


4 ಅಂಕಿಯ ಕೋಡ್‌ ಏನು ಹೇಳುತ್ತದೆ: 
ಹಣ್ಣಿನ ಸ್ಟಿಕ್ಕರ್‌ನಲ್ಲಿ ಹಣ್ಣಿನ  ಕೋಡ್ ಅನ್ನು ನೀಡಲಾಗುತ್ತದೆ. ಇದನ್ನು PLU ಎಂದು ಕರೆಯಲಾಗುತ್ತದೆ, ಅಂದರೆ Price Look Up. ಪ್ರತಿಯೊಂದು ಕೋಡಿಗೂ ಒಂದೊಂದು ಅರ್ಥವಿದೆ. ಇದನ್ನುತಿಳಿದುಕೊಂಡರೆ ನಾವು ಖರೀದಿಸುವ ಹಣ್ಣಿನ  ಬಗ್ಗೆಯೂ  ನಮಗೆ ತಿಳಿಯುತ್ತದೆ.   ಸ್ಟಿಕ್ಕರ್‌ನಲ್ಲಿ (Sticker) ನಾಲ್ಕು-ಅಂಕಿಯ ಕೋಡ್ ಇದ್ದರೆ  ಆ ಹಣ್ಣುಗಳನ್ನು ಬೆಳೆಯುವಾಗ ಕೀಟನಾಶಕಗಳು  (Insecticides) ಮತ್ತು ರಾಸಾಯನಿಕಗಳನ್ನು(Pesticides) ಬಳಸಲಾಗಿದೆ ಎಂದು ಅರ್ಥ..


 5 ಅಂಕಿಯ ಕೋಡ್‌ಈ ಮಾಹಿತಿ ನೀಡುತ್ತದೆ:
ಒಂದು ಹಣ್ಣಿನಲ್ಲಿ  8 ನಂಬರಿನಿಂದ ಆರಂಭವಾಗುವ 5 ಅಂಕೆಯ ಕೋಡ್ ಇದ್ದರೆ, ಆ ಹಣ್ಣನ್ನು ಸಾವಯವ  (Organic Form) ರೂಪದಿಂದ ಬೆಳೆಸಲಾಗಿದೆ ಎಂದರ್ಥ. ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳುತ್ತದೆ.


ಇದನ್ನೂ ಓದಿ : Processed Foodನ ಅತಿಯಾದ ಸೇವನೆ ಸಾವಿಗೂ ಕಾರಣವಾಗಬಹುದು ಎಚ್ಚರ ..!


ಸಂಖ್ಯೆ 7 ರಿಂದ ಪ್ರಾರಂಭವಾಗುವ ಕೋಡ್‌ನ ಅರ್ಥ:
ಒಂದು ಹಣ್ಣಿನಲ್ಲಿ 7ನಂಬರಿನಿಂದ ಆರಂಭವಾಗುವ 5 ಅಂಕೆಗಳ  ಕೋಡ್ ಇದ್ದರೆ, ಇದರರ್ಥ ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ. ಆದರೆ ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗುವುದಿಲ್ಲಎಂದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.