ನವ ದೆಹಲಿ : ನೀರು ಉತ್ತಮ ಆರೋಗ್ಯಕ್ಕೆ ಬಹಳಮುಖ್ಯ. ನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಅನಕೂಲವಾಗುತ್ತದೆ. ನೀರು ಮಿನರಲ್ಸ್ ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಜನರು ಬಿಸಿ ಬಿಸಿ ನೀರು ಸೇವಿಸುತ್ತಾರೆ. ಆದರೆ ಹೆಚ್ಚು ಬಿಸಿ ನೀರು ಕುಡಿಯುವುದು ಕೂಡಾ ಸಮಸ್ಯೆಯನ್ನುಂಟು ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ಇಲ್ಲ ಎಂದಾದರೆ ಇದನ್ನು ಓದಿ..
ಚಳಿಗಾಲದಲ್ಲಿ (Winter) ಹೆಚ್ಚಿನ ಜನರು ಬಿಸಿ ಬಿಸಿ ನೀರನ್ನು ಕುಡಿಯುತ್ತಾರೆ. ಬಿಸಿ ನೀರನ್ನು(Hot Water) ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗಬಹುದು. ಚರ್ಮ(Skin) ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಆದರೆ ಅತಿಯಾದ ಬಿಸಿ ನೀರು ಕುಡಿಯುವುದರಿಂದಲೂ ಅನಾನುಕೂಲತೆಗಳೂ ಇವೆ. ಅತಿಯಾದ ಬಿಸಿ ನೀರು ಆರೋಗ್ಯದ (Health) ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?
ಬಾಯಿಯಲ್ಲಿ ಗುಳ್ಳೆಗಳು ಬೀಳುತ್ತವೆ :
ಚಳಿಗಾಲದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದರಿಂದ ಬಾಯಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ರೀತಿ ಕಾಣಿಸಿಕೊಳ್ಳುವ ನೋವಿನಿಂದ ಆಹಾರ ತಿನ್ನುವುದು ಮತ್ತು ಕುಡಿಯುವುದು ಕಷ್ಟವಾಗುತ್ತದೆ. ಇದಲ್ಲದೆ, ಹೆಚ್ಚು ಬಿಸಿ ನೀರನ್ನು ಸೇವಿಸುವುದರಿಂದ ನಾಲಿಗೆ ಉರಿಯುವ ಸಂಭವವೂ ಇರುತ್ತದೆ.
ಮೂತ್ರಪಿಂಡದ ಹಾನಿ :
ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಮೂತ್ರಪಿಂಡದ (Kidney) ಸಮಸ್ಯೆ ಎದುರಾಗಬಹುದು. ಆದ್ದರಿಂದ, ಯಾವತ್ತಿಗೂ ಅತಿಯಾದ ಬಿಸಿನೀರನ್ನು ಸೇವಿಸಬೇಡಿ. ಉಗುರುಬೆಚ್ಚಗಿರುವ ನೀರನ್ನೇ ಕುಡಿಯುವುದು ಒತ್ತಮ.
ಬಾಯಿಯ ಒಳ ಭಾಗದಲ್ಲಿ ಸುಡುತ್ತದೆ:
ಅನೇಕ ಜನರು ಚಳಿಗಾಲದಲ್ಲಿ ತುಂಬಾ ಬಿಸಿನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ತುಟಿ (Lips) ಮತ್ತು ಬಾಯಿಯ ಒಳಭಾಗದಲ್ಲಿ ಸುಡಬಹುದು. ಇದು ಆಹಾರ ಸೇವನೆ ವೇಳೆ ಕಿರಿಕಿರಿ ಉಂಟುಮಾಡಬಹುದು.
ಇದನ್ನೂ ಓದಿ: Processed Foodನ ಅತಿಯಾದ ಸೇವನೆ ಸಾವಿಗೂ ಕಾರಣವಾಗಬಹುದು ಎಚ್ಚರ ..!
ಏಕಾಗ್ರತೆ ಕಡಿಮೆಯಾಗುತ್ತದೆ :
ಬಿಸಿನೀರಿನ ಸೇವನೆಯು ಏಕಾಗ್ರತೆ ಮತ್ತು ಚಂಚಲತೆಯ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಯಾವಾಗಲೂ ಉಗುರು ಬೆಚ್ಚಗಿರುವ ನೀರನ್ನು ಕುಡಿಯಿರಿ.
ಮೆದುಳಿನ ಕೋಶಗಳಲ್ಲಿ ಉರಿಯೂತ ಸಂಭವಿಸುತ್ತದೆ:
ಚಳಿಗಾಲದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದರಿಂದ ಮೆದುಳಿನ ಕೋಶಗಳಲ್ಲಿ ಉರಿಯೂತ ಉಂಟಾಗುತ್ತದೆ. ಆದ್ದರಿಂದ ಹೆಚ್ಚು ಬಿಸಿನೀರನ್ನು ಸೇವಿಸಬೇಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.