ತಂಪಾದ ಹಾಲು ಮತ್ತು ಬಿಸಿ ಹಾಲು.. ರಾತ್ರಿ ಯಾವುದನ್ನ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು..?
Milk health benefits : ರಾತ್ರಿ ಹೊತ್ತು ಮಲಗುವಾಗ ಹಾಲು ಕುಡಿದು ಮಲಗಿ ಅಂತ ಹಿರಿಯರು ಹೇಳುತ್ತಾರೆ.. ಇದಕ್ಕೆ ನಾನಾ ರೀತಿಯ ಕಾರಣಗಳನ್ನು ಸಹ ನೀಡುತ್ತಾರೆ.. ಹಾಗಿದ್ರೆ ರಾತ್ರಿ ತಣ್ಣನೆ ಹಾಲು ಕುಡಿದರೆ ಉತ್ತಮವೋ.. ಅಥವಾ ಬಿಸಿ ಹಾಲನ್ನು ಸೇವಿಸಿದರೆ ಉತ್ತವೋ..? ಬನ್ನಿ ತಿಳಿಯೋಣ..
Cold milk and Hot Milk : ಹಾಲನ್ನು ಸೂಪರ್ ಫುಡ್ ಅಂತ ಕರೆಯಲಾಗುತ್ತದೆ. ಅದಕ್ಕಾಗಿಯೇ ರಾತ್ರಿ ಮಲಗುವಾಗ ಹಾಲು ಕುಡಿದು ಮಲಗಿ ಅಂತ ಹಿರಿಯರು ಹೇಳುತ್ತಾರೆ. ಆದರೆ ತಣ್ಣನೆಯ ಹಾಲನ್ನು ಕುಡಿಯಬೇಕೋ ಅಥವಾ ಬಿಸಿ ಹಾಲನ್ನು ಕುಡಿಯಬೇಕೋ..? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತೆ. ಇವೆರಡರಲ್ಲಿ ಯಾವುದು ಉತ್ತಮ ? ಬನ್ನಿ ಈಗ ತಿಳಿಯೋಣ..
ಮೂಳೆ ನೋವು ಮತ್ತು ದೌರ್ಬಲ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ರಾತ್ರಿ ತಣ್ಣನೆಯ ಹಾಲು ಕುಡಿಯುವುದು ಒಳ್ಳೆಯದು. ಇದರಲ್ಲಿರುವ ಫಾಸ್ಫರಸ್ ಮತ್ತು ಕ್ಯಾಲ್ಸಿಯಂನಿಂದ ಮೂಳೆಗಳನ್ನು ಬಲಪಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ..
ಇದನ್ನೂ ಓದಿ:ಕಿಡ್ನಿ ಸ್ಟೋನ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ ಪೊದೆಗಳಲ್ಲಿ ಬೆಳೆಯುವ ಈ ಸೊಪ್ಪು!
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ತಣ್ಣನೆಯ ಹಾಲು ಉತ್ತಮ ಪರಿಹಾರ. ಇದು ಇಂತಹವರಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ತೂಕ ನಿಯಂತ್ರಣಕ್ಕಾಗಿ ತಣ್ಣನೆಯ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯ ತೊಂದರೆ ಮತ್ತು ಹೊಟ್ಟೆಯ ಕೊಬ್ಬು ಕರಗಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ರಾತ್ರಿ ತಣ್ಣನೆಯ ಹಾಲನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಳ್ಳೆಯ ನಿದ್ದೆಯನ್ನೂ ನೀಡುತ್ತದೆ. ಹಾಲಿನ ಪ್ರಯೋಜನಗಳು ಹಾಲಿನ ಸ್ವಭಾವ ಬದಲಾದಂತೆ ಬದಲಾಗುತ್ತವೆ. ಬಿಸಿಯಾದಾಗ ಒಂದು ಮತ್ತು ತಣ್ಣಗಾದಾಗ ಇನ್ನೊಂದು ಪ್ರಯೋಜನ ಪಡೆಯಬಹುದು. ಬಿಸಿ ಅಥವಾ ತಣ್ಣನೆ ಹಾಲಿನಲ್ಲಿ ಯಾವುದು ಒಳ್ಳೆಯದು ಅಂತ ಹೇಳುವುದು ಕಷ್ಟ.
ಇದನ್ನೂ ಓದಿ:ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಈ 6 ವಿಧಾನಗಳನ್ನು ಅನುಸರಿಸಿ...!
ಕೆಲವರಿಗೆ ರಾತ್ರಿ ಊಟದ ನಂತರ ಹೊಟ್ಟೆ ಸೆಳೆತ ಅಥವಾ ಉರಿ ಸಮಸ್ಯೆ ಉಂಟಾಗುತ್ತದೆ. ಅಂತಹವರು ರಾತ್ರಿ ಮಲಗುವ ಮುನ್ನ ತಣ್ಣನೆಯ ಹಾಲನ್ನು ಕುಡಿಯಬೇಕು. ಗ್ಯಾಸ್ ಸಮಸ್ಯೆ ಆಗುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.