ಮಲಬದ್ದತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ! ಹಾಗಾದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ
Gooseberry for constipation: ಸಾಮಾನ್ಯವಾಗಿ ಕೆಲವವರಲ್ಲಿ ಮಲಬದ್ಧತೆಯ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೆಲ್ಲಿಕಾಯಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಯಾವ ರೀತಿ ಇದನ್ನು ಬಳಸಬಹುದು ಎನ್ನುವದರ ಮಾಹಿತಿ ಇಲ್ಲಿದೆ.
Gooseberry benefits: ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಪ್ರಯೋಜನಕಾರಿ ಔಷಧಿ ಎಂದು ವಿವರಿಸಲಾಗಿದೆ. ನೀವು ಪ್ರತಿದಿನ ಮಲಬದ್ಧತೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಕೆಲವು ದಿನಗಳವರೆಗೆ ಈ ವಿಧಾನದಲ್ಲಿ ನೆಲ್ಲಿಕಾಯಿಯನ್ನು ತಿನ್ನಲು ಪ್ರಾರಂಭಿಸಿ. ವ್ಯತ್ಯಾಸವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮುನಿಂದ ದೇಹವನ್ನು ರಕ್ಷಿಸುತ್ತದೆ. ಆದರೆ ಇದು ಹೊಟ್ಟೆಯ ಸಮಸ್ಯೆ ಮುಂದುವರಿದರೆ ಮತ್ತು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದಾರೆ. ಅವರು ಆಯುರ್ವೇದದಲ್ಲಿ ಸೂಚಿಸಿದ ರೀತಿಯಲ್ಲಿ ನೆಲ್ಲಿಕಾಯಿಯನ್ನು ತಿನ್ನಬೇಕು. ಆದ್ದರಿಂದ ಮಲಬದ್ಧತೆಯನ್ನು ತೊಡೆದುಹಾಕಲು ಸಹಾಯ ಮಾಡುವ ನೆಲ್ಲಿಕಾಯಿಯನ್ನು ತಿನ್ನಿವ ಪರಿಣಾಮಕಾರಿ ವಿಧಾನವನ್ನು ನಾವು ತಿಳಿಸುತ್ತೇವೆ..
ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಸಿಹಿ ಪದಾರ್ಥಗಳು ರಾಮಬಾಣ!
ತಾಜಾ ನೆಲ್ಲಿಕಾಯಿ ಜ್ಯೂಸ್ ಮಲಬದ್ಧತೆಯನ್ನು ನಿವಾರಿಸುತ್ತದೆ
ಮಲಬದ್ಧತೆ ಹೆಚ್ಚಾಗುತ್ತಿದ್ದರೆ ಮತ್ತು ವಾಯು ಸಮಸ್ಯೆ ಶುರುವಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ.
ಈ ಜ್ಯೂಸ್ ಮಾಡಲು ಮೂರರಿಂದ ನಾಲ್ಕು ನೆಲ್ಲಿಕಾಯಿ ಗಳನ್ನು ತೆಗೆದುಕೊಂಡು ಅವುಗಳನ್ನು ಪುಡಿಮಾಡಿ ನಂತರ ಅದನ್ನು ಬಟ್ಟೆಯ ಸಹಾಯದಿಂದ ಫಿಲ್ಟರ್ ಮಾಡಿ ಮತ್ತು ರಸವನ್ನು ಹೊರತೆಗೆಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಕುಡಿಯಿರಿ.
ಕೇಲವೇ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯು ಕೊನೆಗೊಳ್ಳುತ್ತದೆ ಮತ್ತು ಮಲವು ಸುಲಭವಾಗಿ ಹೋಗುತ್ತದೆ.
ತಾಜಾ ನೆಲ್ಲಿಕಾಯಿ ಸಿಗದಿದ್ದರೆ ನೆಲ್ಲಿಕಾಯಿ ಪೌಡರ್ ತಿನ್ನಿ
ಒಂದು ವೇಳೆ ನೆಲ್ಲಿಕಾಯಿ ಸೀಸನ್ ಆಗದಿದ್ದರೆ ಮತ್ತು ಬೆಳಿಗ್ಗೆ ನೆಲ್ಲಿಕಾಯಿ ತಿನ್ನಲು ಬಯಸಿದರೆ ನಂತರ ನೆಲ್ಲಿಕಾಯಿ ಪುಡಿಯನ್ನು ಪುಡಿಮಾಡಿ ಇಟ್ಟುಕೊಳ್ಳಿ . ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ನೆನಸಿ ಅದನ್ನು ಪ್ರತಿ ರಾತ್ರಿ ಮುಚ್ಚಿಡಿ. ಈ ನೀರನ್ನು ಬೆಳಿಗ್ಗೆ ಬಟ್ಟೆಯ ಮೂಲಕ ಫಿಲ್ಟರ್ ಮಾಡಿದ ನಂತರ ಕುಡಿಯಿರಿ. ಕೆಲವು ದಿನಗಳ ಬಳಕೆಯ ನಂತರ ಮಲಬದ್ದತೆಯ ಸಮಸ್ಯೆಯು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Corona ಅಷ್ಟೇ ಅಲ್ಲ ಇದೀಗ ಈ ಮಾರಣಾಂತಿಕ ವೈರಸ್ ಕೂಡ ಡಬ್ಲ್ಯೂಹೆಚ್ಓ ಚಿಂತೆ ಹೆಚ್ಚಿಸಿದೆ! ಇಲ್ಲಿವೆ ಅದರ ಲಕ್ಷಣಗಳು
ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಚಳಿಗಾಲದಲ್ಲಿ ಪದೇ ಪದೇ ನೆಗಡಿ ಮತ್ತು ಕೆಮ್ಮು ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ಸ್ವಲ್ಪ ತಾಜಾ ನೆಲ್ಲಿಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿದ ನಂತರ ಜೇನುತುಪ್ಪದಲ್ಲಿ ಬೆರೆಸಿ, ಇಲ್ಲವಾದರೆ ನೆಲ್ಲಿಕಾಯಿಯನ್ನು ಜೇನುತುಪ್ಪದಲ್ಲಿ ನೆನಸಿ ಪ್ರತಿದಿನ ತಿನ್ನುವುದರಿಂದ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ ಮತ್ತು ದೇಹದ ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
(ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.