Cinnamon For Weight Loss : ತೂಕ ಇಳಿಸಿಕೊಳ್ಳಲು ನಾವು ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಪೌಷ್ಟಿಕ ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಹಣ್ಣಿನ ರಸವನ್ನು ಸೇವಿಸುತ್ತೇವೆ.  ಜಿಮ್‌ ನಲ್ಲಿಯೂ ಗಂಟೆ ಗಟ್ಟಲೆ ಬೆವರು ಸುರಿಸುತ್ತೇವೆ. ಆದರೆ, ಹೀಗೆ ನಾನಾ ಕ್ರಮಗಳನ್ನು ಕೈಗೊಂಡರೂ ದೇಹದ ತೂಕ ಕಡಿಮೆಯಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಹಲವು ನೈಸರ್ಗಿಕ ವಿಧಾನಗಳಿವೆ. ಅವುಗಳನ್ನು ಆವಡಿಸಿಕೊಳ್ಳುವ ಮೂಲಕ ದೇಹದ ತೂಕವೂ ಕಡಿಮೆಯಾಗುತ್ತದೆ. ಮಾತ್ರವಲ್ಲ ಇದು ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮವನ್ನು ಕೂಡಾ ಬೀರುವುದಿಲ್ಲ.


COMMERCIAL BREAK
SCROLL TO CONTINUE READING

ತೂಕವನ್ನು ಕಳೆದುಕೊಳ್ಳುವ ಮೊದಲ ಹೆಜ್ಜೆ ಎಂದರೆ ಆಹಾರದ ಕಡೆ  ಗಮನ ಕೊಡುವುದು. ಆಹಾರವು ಸಮತೋಲನದಲ್ಲಿದ್ದರೆ, ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ. ಅನೇಕ ಅಡಿಗೆ ಉತ್ಪನ್ನಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ. ಅವುಗಳಲ್ಲಿ ಒಂದು ದಾಲ್ಚಿನ್ನಿ ಅಥವಾ ಚಕ್ಕೆ. 


ಇದನ್ನೂ ಓದಿ : ನೀವು ತುಂಬಾ ತೆಳ್ಳಗಿದ್ದೀರಾ..? ಚಿಂತಿಸಬೇಡಿ - ಪ್ರತಿದಿನ ಬೆಲ್ಲ ಮತ್ತು ತುಪ್ಪ ತಿನ್ನಿರಿ


ಚಕ್ಕೆ : 
ಚಕ್ಕೆಯನ್ನು ಸರಿಯಾಗಿ ಸೇವಿಸಿದರೆ ಹೊಟ್ಟೆಯಲ್ಲಿನ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೊಬ್ಬನ್ನು ಸುಡುವಲ್ಲಿ ದಾಲ್ಚಿನ್ನಿ ಪರಿಣಾಮಕಾರಿಯಾಗಿದೆ. ಮತ್ತು ಇದನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯಕರವಾಗಿರಲು ನಿಮ್ಮ ಆಹಾರದಲ್ಲಿ ಚಕ್ಕೆಯನ್ನು ಹೇಗೆ ಸೇರಿಸಬೇಕೆನ್ನುವ ಮಾಹಿತಿ ಇಲ್ಲಿದೆ. 


ತೂಕ ನಷ್ಟಕ್ಕೆ ಚಕ್ಕೆ : 
ಚಕ್ಕೆ ಒಂದು ಮಸಾಲೆ. ಇದನ್ನು ಚಹಾದಿಂದ ಹಿಡಿದು ಅನೇಕ ಆಹಾರಗಳಿಗೆ ಸೇರಿಸಲಾಗುತ್ತದೆ. ದಾಲ್ಚಿನ್ನಿ ಸೌಮ್ಯವಾದ ಸಿಹಿ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಅದರ ಸುಗಂಧ ಆಹ್ಲಾದಕರವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸಬಹುದು.


ಚಕ್ಕೆ ಚಹಾ :
ತೂಕ ನಷ್ಟಕ್ಕೆ ನೀವು ದಾಲ್ಚಿನ್ನಿ ಚಹಾವನ್ನು ತಯಾರಿಸಿ ಕುಡಿಯಬಹುದು. ಇದಕ್ಕೆ ಒಂದು ಕಪ್ ನೀರು, ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ ಮತ್ತು ಒಂದು ಸಣ್ಣ ತುಂಡು ದಾಲ್ಚಿನ್ನಿ ಅಗತ್ಯವಿದೆ. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ದಾಲ್ಚಿನ್ನಿ ಹಾಕಿ ಕುದಿಸಿ. ಇದನ್ನು ಸೋಸಿ, ಒಂದು ಕಪ್‌ನಲ್ಲಿ ತೆಗೆದುಕೊಂಡು ಅದಕ್ಕೆ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. 


ಇದನ್ನೂ ಓದಿ : ಆರೋಗ್ಯಕ್ಕೆದ ಹಲವಾರು ಸಮಸ್ಯೆಗಳಿಗೆ ಹಸುವಿನ ಹಾಲು ಪರಿಹಾರವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ!


ಚಕ್ಕೆ ಕಾಫಿ :
ಕಾಫಿಯೊಂದಿಗೆ ಕೂಡಾ ದಾಲ್ಚಿನ್ನಿ ಮಿಶ್ರಣ ಮಾಡಬಹುದು. ಇದು ಕಾಫಿಯ ರುಚಿಯನ್ನು ಹೆಚ್ಚಿಸುತ್ತದೆ. ಕಾಫಿಯೊಂದಿಗೆ ದಾಲ್ಚಿನ್ನಿ ಬೆರೆಸುವುದು ಆರೋಗ್ಯಕ್ಕೂ ಒಳ್ಳೆಯದು.


ಚಕ್ಕೆ ನೀರು :
ತೂಕವನ್ನು ಕಳೆದುಕೊಳ್ಳುವ ಇನ್ನೊಂದು ವಿಧಾನವೆಂದರೆ ದಾಲ್ಚಿನ್ನಿ ನೀರನ್ನು ಕುಡಿಯುವುದು. ದಾಲ್ಚಿನ್ನಿ ನೀರನ್ನು ತಯಾರಿಸಲು, ಒಂದು ಲೋಟ ನೀರಿಗೆ ಒಂದು ತುಂಡು ಚಕ್ಕೆ ಅಥವಾ ಅರ್ಧ ಚಮಚ ಚಕ್ಕೆ ಪುಡಿಯನ್ನು ಸೇರಿಸಿ. ರಾತ್ರಿಯ ಊಟದ ಅರ್ಧ ಘಂಟೆಯ ನಂತರ ಕುಡಿಯಿರಿ. ದಾಲ್ಚಿನ್ನಿ ನೀರನ್ನು ಕುಡಿದ ನಂತರ ನೀವು ಬೇರೆ ಏನನ್ನೂ ತಿನ್ನಬಾರದು. 


ಇದನ್ನೂ ಓದಿ : ಬೆಳಗಿನ ಉಪಹಾರ - ಮಧ್ಯಾಹ್ನದ ಭೋಜನದ ಮಧ್ಯೆ ಎಷ್ಟು ಗಂಟೆಗಳ ಅಂತರವಿರಬೇಕು?


ಚಕ್ಕೆಯನ್ನು ತರಕಾರಿ, ಸ್ಮೂಥಿಗಳು, ಹಾಟ್ ಚಾಕೊಲೇಟ್ ಅಥವಾ ಶೇಕ್‌ಗಳಿಗೆ ಕೂಡ ಸೇರಿಸಬಹುದು. ಇದು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದೇಹ ತೂಕ ಕಳೆದುಕೊಳ್ಳಬೇಕು ಎಂದು ಚಕ್ಕೆ ಸೇವಿಸುವಾಗ ಹೆಚ್ಚು ಚಕ್ಕೆ ಸೇವಿಸಬಾರದು ಎನ್ನುವುದು ನೆನಪಿರಲಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.