ಬೆಂಗಳೂರು : ಪ್ರತಿ ಅಡುಗೆಮನೆಯಲ್ಲಿಯೂ  ಶುಂಠಿ ಇದ್ದೇ ಇರುತ್ತದೆ. ಶುಂಠಿ ಅನೇಕ  ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಶುಂಠಿಯನ್ನು ಚಹಾ ಮಾಡುವಾಗ, ಕಶಾಯಕ್ಕೆ, ಪಲ್ಯ, ಸಾಂಬಾರ್, ರಸಂ ಮಾಡುವಾಗ ಸೇರಿಸಲಾಗುತ್ತದೆ. ಇದು ಅಡುಗೆಯ ರುಚಿ ಹೆಚ್ಚಿಸುತ್ತದೆ ಜೊತೆಗೆ ಉತ್ತಮ ಘಮವನ್ನು ಕೂಡಾ ನೀಡುತ್ತದೆ. ಇದರ ಜೊತೆ  ವಾಕರಿಕೆ, ಹೊಟ್ಟೆ ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿಯೂ ಕೆಲಸ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ. ಶುಂಠಿ  ರಸವನ್ನು ಸೇವಿಸುವ ಮೂಲಕ ದಿನವನ್ನು ಪ್ರಾರಂಭಿಸಿದರೆ ಅದು ದಿನದ ಆರೋಗ್ಯಕರ ಆರಂಭವಾಗಿರುತ್ತದೆ. 


COMMERCIAL BREAK
SCROLL TO CONTINUE READING

1 ನಿಶಕ್ತಿ ಹೋಗಲಾಡಿಸುತ್ತದೆ : 
ಕೆಲವೊಮ್ಮೆ ರಾತ್ರಿಯಿಡೀ ಮಲಗಿದರೂ ಬೆಳಗ್ಗೆ ಎದ್ದಾಗ ಸುಸ್ತು, ಆಲಸ್ಯ ಕಾಡುತ್ತದೆ. ಈ ವೇಳೆ  ಶುಂಠಿ ರಸವನ್ನು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಅದು ದೇಹಕ್ಕೆ ವಿಶೇಷ ಶಕ್ತಿಯನ್ನು ನೀಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ನಿಮ್ಮ ಚಹಾ ಮತ್ತು ಕಾಫಿಗೆ ಕೆಲವು ಹನಿ ಶುಂಠಿ ರಸವನ್ನು ಸೇರಿಸುವ ಮೂಲಕ ನೀವು ಯಾವುದೇ ಭಯವಿಲ್ಲದೆ ಕುಡಿಯಬಹುದು.


ಇದನ್ನೂ ಓದಿ : Vitamin B6 Pills Benefits: ಖಿನ್ನತೆ ಹಾಗೂ ಒತ್ತಡ ನಿವಾರಿಸಲು ಬಲು ಸಹಕಾರಿ ಈ ಮಾತ್ರೆಗಳು, ಅಧ್ಯಯನದಲ್ಲಿ ಅಂಶ ಬಹಿರಂಗ


2- ವಾಕರಿಕೆ ದೂರವಾಗುತ್ತದೆ :
ಶುಂಠಿ  ರಸ  ವಾಕರಿಕೆ ಮಾತ್ರವಲ್ಲ ವಾಂತಿ ಸಮಸ್ಯೆಗೂ ಪರಿಹಾರ ನೀಡುತ್ತದೆ. ಹಸಿ ಶುಂಠಿಯಲ್ಲಿರುವ ಜಿಂಜರಾಲ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ವಾಕರಿಕೆ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಗರ್ಭಿಣಿಯರು ವಾಕರಿಕೆ ನಿವಾರಣೆಗೆ ಶುಂಠಿಯ  ರಸವನ್ನು ಕುಡಿಯಬೇಕು ಎಂದು ಹೇಳಲಾಗುತ್ತದೆ.


3-ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುತ್ತದೆ :
ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಲು ಬಿಡುವುದಿಲ್ಲ. ಶುಂಠಿ ರಸ ಅಧಿಕ  ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : ಇದು ಹೆಪಟೈಟಿಸ್ ಲಕ್ಷಣವಾಗಿರಬಹುದು .! ನಿರ್ಲಕ್ಷಿಸಿದರೆ ಸಾವಿಗೆ ಸನಿಹವಾಗಬೇಕಾದಿತು .!


4-ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ :
ಆಹಾರವು ದೇಹದ ಮೂಲಕ ಉತ್ತಮವಾಗಿ ಹಾದುಹೋಗಲು ಶುಂಠಿಯು  ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹೊಟ್ಟೆನೋವು, ವಾಯು ಮತ್ತು ಅಸಿಡಿಟಿ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ. ಗ್ಯಾಸ್ ಸಮಸ್ಯೆ ಇರುವವರು ಶುಂಠಿ ರಸವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಕಿಣ್ವಗಳು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ.


5-ಸ್ನಾಯು ಮತ್ತು ಮುಟ್ಟಿನ ನೋವಿನಲ್ಲಿ ಪರಿಹಾರ :
ಶುಂಠಿಯು ಪ್ಯಾರಾಡೋಲ್, ಜಿಂಜರಾಲ್ ಮತ್ತು ಶೋಗೋಲ್ ಅನ್ನು ಹೊಂದಿರುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಉರಿಯೂತವು ಸ್ನಾಯು ನೋವು, ಕೀಲು ನೋವು ಮತ್ತು ಊತವನ್ನು ಉಂಟುಮಾಡುತ್ತದೆ. ಇದರಲ್ಲಿ ಶುಂಠಿ ರಸವನ್ನು ಕುಡಿದರೆ, ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮುಟ್ಟಿನ ಸಮಯದಲ್ಲಿ ಉಂಟಾಗುವ ಸೆಳೆತವನ್ನೂ ಕಡಿಮೆ ಮಾಡುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.