ಹೈ ಬಿಪಿಗಾಗಿ ನಿತ್ಯ ಔಷಧಿ ತೆಗೆದುಕೊಳ್ಳುವ ಬದಲು ಈರುಳ್ಳಿ ರಸವನ್ನು ಹೀಗೆ ಸೇವಿಸಿ ! ನಾರ್ಮಲ್ ಆಗುವುದು ರಕ್ತದೊತ್ತಡ
Onion Juice Health Benefits:ಈರುಳ್ಳಿ ಬಾಯಿ ರುಚಿ ಮಾತ್ರ ನೀಡುವುದಲ್ಲ ಬದಲಿಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ತರಕಾರಿಯಾಗಿದೆ.ಈ ತರಕಾರಿಯನ್ನು ಸರಿಯಾಗಿ ಸೇವಿಸಿದರೆ, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
Onion Juice Health Benefits : ದಿನನಿತ್ಯದ ಅಡುಗೆಮನೆಯಲ್ಲಿ ಬಳಸುವ ತರಕಾರಿಗಳಲ್ಲಿ,ದಿನಕ್ಕೆ ಒಮ್ಮೆಯಾದರೂ ಅಡುಗೆಯಲ್ಲಿ ಬಳಸುವ ಏಕೈಕ ತರಕಾರಿ ಈರುಳ್ಳಿ.ಈರುಳ್ಳಿ ಇಲ್ಲದೆ, ದಾಲ್, ಸಾಂಬಾರ್, ಪಲ್ಯ ಮತ್ತು ಬಿರಿಯಾನಿಯಂತಹ ಭಕ್ಷ್ಯಗಳು ಉತ್ತಮ ರುಚಿಯನ್ನು ನೀಡುವುದಿಲ್ಲ.ಇನ್ನು ಹಸಿ ಈರುಳ್ಳಿಯನ್ನು ಚಾಟ್ ಮತ್ತು ಸಲಾಡ್‌ನಲ್ಲಿ ಬಳಸಲಾಗುತ್ತದೆ.ಈರುಳ್ಳಿ ಬಾಯಿ ರುಚಿ ಮಾತ್ರ ನೀಡುವುದಲ್ಲ ಬದಲಿಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ತರಕಾರಿಯಾಗಿದೆ.ಈ ತರಕಾರಿಯನ್ನು ಸರಿಯಾಗಿ ಸೇವಿಸಿದರೆ, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಈರುಳ್ಳಿ ರಸದ ಪ್ರಯೋಜನ :
ರೋಗನಿರೋಧಕ ಶಕ್ತಿ ಹೆಚ್ಚಾಗಬಹುದು :
ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ.ಈ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಇದಲ್ಲದೆ, ಈರುಳ್ಳಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.ಇದು ದುರ್ಬಲ ರೋಗನಿರೋಧಕ ಶಕ್ತಿಯಿಂದ ಆಗಾಗ ಅನಾರೋಗ್ಯಕ್ಕೆ ಒಳಗಾಗುವವರಿಗೆ ಉತ್ತಮ ಆಹಾರವಾಗಿದೆ.ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈರುಳ್ಳಿ ರಸವನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಸೋಂಕುಗಳು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: High Cholesterol: ನಿಮ್ಮ ಕೈ ಮತ್ತು ಕಾಲುಗಳಲ್ಲಿ ಈ ರೀತಿ ಗೋಚರಿಸುತ್ತವೆ ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು!
ಅಧಿಕ ಬಿಪಿ ನಿರ್ವಹಣೆ :
ತಾಜಾ ಈರುಳ್ಳಿ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಆಕ್ಸಿಡೇಟಿವ್ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವುದು ಸಾಧ್ಯವಾಗುತ್ತದೆ.
ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು :
ಈರುಳ್ಳಿ ರಸವು ಅಜೀರ್ಣ ಅಥವಾ ಹೊಟ್ಟೆ ಉಬ್ಬರದಂತಹ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.ಇನ್ಯುಲಿನ್ ಎಂಬ ಸಂಯುಕ್ತವು ಈರುಳ್ಳಿಯಲ್ಲಿ ಕಂಡುಬರುತ್ತದೆ.ಇದು ಕರುಳಿನ ಬ್ಯಾಕ್ಟೀರಿಯಾದ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೊಟ್ಟೆಯ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳನ್ನು ಎಂದಿಗೂ ಅಸಡ್ಡೆ ಮಾಡಬೇಡಿ!
ತೂಕ ನಷ್ಟ ಪಾನೀಯ :
ಈರುಳ್ಳಿ ರಸವನ್ನು ಕುಡಿಯುವುದರಿಂದ ಸ್ಥೂಲಕಾಯತೆಯಿಂದ ಮುಕ್ತಿ ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.ಈರುಳ್ಳಿ ರಸವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು-ಮುಕ್ತ ರಸವಾಗಿದೆ.ಇದರ ಸೇವನೆಯು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಚಯಾಪಚಯ ದರವನ್ನು ಸುಧಾರಿಸುತ್ತದೆ.ಇದರಿಂದಾಗಿ ತೂಕ ನಷ್ಟವು ಸುಲಭವಾಗಿ ಮತ್ತು ತ್ವರಿತವಾಗಿ ಸಂಭವಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews