ಒಂದು ಚಮಚ ತುಪ್ಪಕ್ಕೆ ಈ ಎರಡು ವಸ್ತುಗಳನ್ನು ಬೆರೆಸಿ ಸೇವಿಸಿದರೆ ಈ ಸಮಸ್ಯೆಗಳಿಗೆ ಸಿಗುವುದು ಮುಕ್ತಿ
ಮಳೆಗಾಲದಲ್ಲಿ ಸಮತೋಲಿತ ಆಹಾರವನ್ನು ಅನುಸರಿಸುವುದು ಅಗತ್ಯ. ಇದಕ್ಕಾಗಿ ಹೊರಗಿನ ಆಹಾರವನ್ನು ತ್ಯಜಿಸಬೇಕು. ಅಲ್ಲದೆ ನಮ್ಮ ಹಿರಿಯರು ನೀಡುತ್ತಾ ಬಂದಿರುವ ಸಲಹೆಗಳನ್ನು ಅನುಸರಿಸಿಕೊಂಡು ಬಂದರೆ ಎದುರಾಗಬಹುದಾದ ಸಮಸ್ಯೆ ಪರಿಹಾರವಾಗುತ್ತದೆ.
ಬೆಂಗಳೂರು : ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ವಾತಾವರಣದಲ್ಲಿ, ಅನೇಕ ಸೂಕ್ಷ್ಮಾಣುಜೀವಿಗಳು ಸೋಂಕನ್ನು ಉಂಟುಮಾಡಬಹುದು. ಇದರಿಂದ ಮಲೇರಿಯಾ, ಡೆಂಗ್ಯೂ, ಕಾಲರಾ ಮುಂತಾದ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಈ ರೋಗಗಳನ್ನು ತಪ್ಪಿಸಲು, ನಿಮ್ಮ ಆಹಾರದಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಋತುವಿನಲ್ಲಿ ಸಮತೋಲಿತ ಆಹಾರವನ್ನು ಅನುಸರಿಸಲು, ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಅಲ್ಲದೆ ಒಂದು ಚಮಚ ತುಪ್ಪಕ್ಕೆ ಅರಿಶಿನ, ಕರಿಮೆಣಸು ಬೆರೆಸಿ ಸೇವಿಸಿದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.
ಉರಿಯೂತವನ್ನು ಕಡಿಮೆ ಮಾಡುವುದು :
ಅರಿಶಿನದಲ್ಲಿರುವ ಬಯೋಆಕ್ಟಿವ್ ಎಲಿಮೆಂಟ್ ಕರ್ಕ್ಯುಮಿನ್, ಕರಿಮೆಣಸಿನಲ್ಲಿರುವ ಪೈಪರಿನ್ ಅದರ ಉರಿಯೂತ ವಿರೋಧಿ ಅಥವಾ ಆಂಟಿ ಇಂಫ್ಲಮೆಟರಿ ಗುಣಗಳಿಗೆ ಹೆಸರುವಾಸಿಯಾಗಿದೆ. ದೇಹದಲ್ಲಿನ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಅರಶಿನ ಮತ್ತು ಕರಿ ಮೆಣಸು ಕೆಲಸ ಮಾಡುತ್ತವೆ. ಇದು ಹೃದ್ರೋಗಗಳು, ಆಸ್ತಮಾ, ಪಾರ್ಶ್ವವಾಯು ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ.
ಇದನ್ನೂ ಓದಿ : Diabetes: ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವಾಗ ಈ ತಪ್ಪುಗಳನ್ನು ಮಾಡ್ಬೇಡಿ ರೀಡಿಂಗ್ ತಪ್ಪಾಗಬಹುದು
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :
ಈ ಮಿಶ್ರಣವನ್ನು ಸೇವಿಸುವ ಇನ್ನೊಂದು ಪ್ರಯೋಜನವೆಂದರೆ ಅದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪೈಪೆರಿನ್ ಜೀರ್ಣಕಾರಿ ಕಿಣ್ವಗಳ ಬಿಡುಗಡೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತೊಂದೆಡೆ, ಅರಿಶಿನವು ಇರಿಟೇಬಲ್ ಬೌಲ್ ಮೂವ್ಮೆಂಟ್, ಆಸಿಡ್ ರಿಫ್ಲೆಕ್ಸ್ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ :
ಅರಿಶಿನ ಮತ್ತು ಕರಿಮೆಣಸನ್ನು ಜೊತೆಯಾಗಿ ಸೇವಿಸಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿನ ಮತ್ತು ಕರಿಮೆಣಸು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ,
ಇದನ್ನೂ ಓದಿ : ಈ ಸಮಸ್ಯೆ ಇರುವವರು ತಪ್ಪಿಯೂ ಹೆಸರು ಬೇಳೆ ಸೇವಿಸಬಾರದು
ಜ್ಞಾಪಕಶಕ್ತಿ ಉತ್ತಮವಾಗಿಸುತ್ತದೆ :
ಕರ್ಕ್ಯುಮಿನ್ ಮೆದುಳಿನ ಕೆಲಸ ಮಾಡುವ ಸಾಮರ್ಥ್ಯವನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ ಎಂಬ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಇದಲ್ಲದೆ, ಪೈಪೆರಿನ್ ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ಅಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ಅಸ್ವಸ್ಥತೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕರ ಹೃದಯಕ್ಕಾಗಿ :
ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಡೋಥೀಲಿಯಂನ ಕಾರ್ಯವನ್ನು ಸುಧಾರಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಉರಿಯೂತ ವಿರೋಧಿ ಗುಣಲಕ್ಷಣಗಳು ಹೃದಯದ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.