Abdominal Gas Ayurvedic Remedies : ಚಳಿಗಾಲದಲ್ಲಿ ಹೊಟ್ಟೆನೋವಿನ ಸಮಸ್ಯೆ ಸ್ವಲ್ಪ ಹೆಚ್ಚಾಗಿ ಕಾಡುತ್ತದೆ. ಚಳಿಗಾಲದಲ್ಲಿ, ಜೀರ್ಣಾಂಗ ವ್ಯವಸ್ಥೆ ಸ್ವಲ್ಪ ನಿಧನಾವಾಗಿ ಕೆಲಸ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ರಚನೆಯಾಗುತ್ತದೆ. ಆಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕೂಡಾ ಕಾಡುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಜನರು ಆಂಟಾಸಿಡ್ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅಂತಹ ಔಷಧಿಗಳನ್ನು ಪದೇ ಪದೇ ಸೇವಿಸುವುದರಿಂದ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟಾಗುತ್ತದೆ. ಈ ಸಮಸ್ಯೆಯ ನಿವಾರಣೆಗೆ ಅಡುಗೆಮನೆಯಲ್ಲಿ ಕಂಡುಬರುವ ಕೆಲವು ವಸ್ತುಗಳನ್ನು ಬಳಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜೀರಿಗೆ, ಓಮ ಕಾಳು ಮತ್ತು ಬ್ಲಾಕ್ ಸಾಲ್ಟ್ ಅನ್ನು ಬಳಸುವ ಮೂಲಕ ಹೊಟ್ಟೆಯ ಗ್ಯಾಸ್ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಈ 3 ಮಸಾಲೆಗಳ ಮಿಶ್ರಣವು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ : 
ನಾವು ಯಾವುದೇ ಅಡುಗೆ ಮಾಡಿದರೂ ಅದರಲ್ಲಿ ಜೀರಿಗೆಯ ಬಳಕೆ ಇದ್ದೇ ಇರುತ್ತದೆ. ಇದರೊಂದಿಗೆ ಕೆಲ ಅಡುಗೆಯಲ್ಲಿ ಓಮ ಕಾಳನ್ನು ಕೂಡಾ ಬಳಸಲಾಗುತ್ತದೆ.ಇದರಿಂದ ಜನರು ಆ ಖಾದ್ಯವನ್ನು ತಿಂದ ನಂತರ ಹೊಟ್ಟೆ ಉರಿ, ಅಥವಾ ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುವುದಿಲ್ಲ. ವಾಸ್ತವವಾಗಿ, ಜೀರಿಗೆ ಮತ್ತು ಓಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ  ಗ್ಯಾಸ್ ಸಮಸ್ಯೆಗಳನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಚಳಿಗಾಲದಲ್ಲಿ ಈ ಮಸಾಲೆಗಳನ್ನು ಸೇವಿಸಿದರೆ,  ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಾ ಕಡಿಮೆ ಮಾಡುತ್ತದೆ.


ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ʼಸೇಬು ಹಣ್ಣುʼ ತಿನ್ನಬಹುದಾ..!? ಈ ಅಭ್ಯಾಸ ಒಳ್ಳೆಯದೋ.. ಕೆಟ್ಟದ್ದೋ..


ಹೊಟ್ಟೆಯ ಗ್ಯಾಸ್ ನಿಂದ ಪರಿಹಾರ ಪಡೆಯಲು ಈ  ವಿಧಾನ ಅನುಸರಿಸಿ : 
ಮೊದಲ ವಿಧಾನ : 

-ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಜೀರಿಗೆ ಮತ್ತು 2 ಚಮಚ ಓಮ ಕಾಳುಗಳನ್ನು ಸೇರಿಸಿ.
-ಈ ಮಿಶ್ರಣವನ್ನು 5-6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹಾಗೆಯೇ ಮುಚ್ಚಿಡಿ.
- ಮರುದಿನ ಬೆಳಿಗ್ಗೆ, ಈ ನೀರನ್ನು ಗಾಜಿನೊಳಗೆ ಸುರಿಯಿರಿ ಮತ್ತು ಒಂದು ಚಿಟಿಕೆ  ಬ್ಲಾಕ್ ಸಾಲ್ಟ್ ಸೇರಿಸಿ, ಕುಡಿಯಿರಿ.


ಎರಡನೇ  ವಿಧಾನ : 
ತಲಾ 1 ಚಮಚ ಜೀರಿಗೆ ಪುಡಿ,  ಓಮ ಕಾಳು ಮತ್ತು ಒಂದು ಚಿಟಿಕೆ  ಬ್ಲಾಕ್ ಸಾಲ್ಟ್ ಅನ್ನು ತೆಗೆದುಕೊಂಡು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಪುಡಿಮಾಡಿ.ಸಾಮಾನ್ಯ ನೀರು ಅಥವಾ ಉಗುರುಬೆಚ್ಚನೆಯ ನೀರಿಗೆ ಈ ಪುಡಿಯನ್ನು ಸೇರಿಸಿ. 


ಓಮ ಕಾಳಿನ ಚಹಾ : 
ಓಮ ಕಾಳು ಮತ್ತು ಜೀರಿಗೆಯನ್ನು ಒಂದು ಲೋಟ ನೀರಿನೊಂದಿಗೆ ಕುದಿಸಿ ಮತ್ತು ಅದನ್ನು ಫಿಲ್ಟರ್ ಮಾಡಿದ ನಂತರ ಈ ಚಹಾವನ್ನು ಕುಡಿಯಿರಿ.


ಇದನ್ನೂ ಓದಿ :  Cinnamon Benefits: ಹೊಟ್ಟೆಯ ಕೊಬ್ಬು ಕರಗುವುದರಿಂದ ಹೃದಯದ ಆರೋಗ್ಯದವರೆಗೆ ದಿವ್ಯೌಷಧ ಚಕ್ಕೆ ! ಆದರೆ ಸೇವನೆ ಈ ರೀತಿ ಇರಬೇಕು !


ಜೀರಿಗೆ- ಓಮ ಕಾಳು ಮತ್ತು ಬ್ಲಾಕ್ ಸಾಲ್ಟ್ ಪ್ರಯೋಜನಗಳು :
ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ.
ಬ್ಲಾಕ್ ಸಾಲ್ಟ್  ಸೇವಿಸುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುತ್ತದೆ.
ವಾಕರಿಕೆಯಿಂದ ಪರಿಹಾರವನ್ನು ನೀಡುತ್ತದೆ.
ಹೊಟ್ಟೆಯ ಸೆಳೆತದಿಂದ ಪರಿಹಾರವನ್ನು ನೀಡುತ್ತದೆ.
ರಕ್ತದೊತ್ತಡದ ಮಟ್ಟ ಸಮತೋಲಿತವಾಗಿರುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.