Cinnamon Benefits: ಹೊಟ್ಟೆಯ ಕೊಬ್ಬು ಕರಗುವುದರಿಂದ ಹೃದಯದ ಆರೋಗ್ಯದವರೆಗೆ ದಿವ್ಯೌಷಧ ಚಕ್ಕೆ ! ಆದರೆ ಸೇವನೆ ಈ ರೀತಿ ಇರಬೇಕು !

Cinnamon Benefits:ಖಾಲಿ ಹೊಟ್ಟೆಯಲ್ಲಿ ಚಕ್ಕೆಯನ್ನು   ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವವರೆಗೆ  ರಾಮಾ ಬಾಣ ಪರಿಹಾರವಾಗಿದೆ. 

Written by - Ranjitha R K | Last Updated : Jan 18, 2024, 01:55 PM IST
  • ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ
  • ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ
  • ಹೃದಯದ ಆರೋಗ್ಯ ವೃದ್ದಿಸುತ್ತದೆ
Cinnamon Benefits: ಹೊಟ್ಟೆಯ ಕೊಬ್ಬು ಕರಗುವುದರಿಂದ ಹೃದಯದ ಆರೋಗ್ಯದವರೆಗೆ ದಿವ್ಯೌಷಧ ಚಕ್ಕೆ ! ಆದರೆ ಸೇವನೆ ಈ ರೀತಿ ಇರಬೇಕು ! title=

ಬೆಂಗಳೂರು : ನಮ್ಮ ಅಡುಗೆಮನೆಯಲ್ಲಿ ಅನೇಕ ರೀತಿಯ ಮಸಾಲೆ ಪದಾರ್ಥಗಳು ಇರುತ್ತವೆ. ಆ ಮಸಾಲೆ ಪದಾರ್ಥಗಳು ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇವುಗಳಲ್ಲಿ ಚಕ್ಕೆ ಕೂಡಾ ಒಂದು. ಚಕ್ಕೆ ಅಥವಾ ದಾಲ್ಚಿನ್ನಿಯನ್ನು ಆಹಾರದಲ್ಲಿ ಮಸಾಲೆಯಾಗಿ ಮಾತ್ರವಲ್ಲದೆ ಆರೋಗ್ಯ ಸಮಸ್ಯೆಗಳಿಗೆ  ಪರಿಹಾರವಾಗಿಯೂ ಬಳಸಬಹುದು. ಹೌದು, ಖಾಲಿ ಹೊಟ್ಟೆಯಲ್ಲಿ ಚಕ್ಕೆಯನ್ನು   ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರಿಂದ  ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವವರೆಗೆ ರಾಮಬಾಣ ಪರಿಹಾರವಾಗಿದೆ. 

ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ :  
ದಾಲ್ಚಿನ್ನಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಮತ್ತು ಉರಿಯೂತ ವಿರೋಧಿಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ.ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಚಕ್ಕೆಯನ್ನು  ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ಇದಲ್ಲದೆ, ಇದು ಹೃದಯವನ್ನು ಆರೋಗ್ಯಕರವಾಗಿರಿಸಲು ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : Cancer in young women: ಯುವತಿಯರೇ ಎಚ್ಚರ..! ಈ 3 ರೀತಿಯ ಕ್ಯಾನ್ಸರ್‌ ವಕ್ಕರಿಸಬಹುದು..

ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ : 
ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದ್ದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿಯೂ ಸಮೃದ್ಧವಾಗಿದೆ.ಚಕ್ಕೆಯಲ್ಲಿರುವ ಸಿನ್ನಾಮಾಲ್ಡಿಹೈಡ್ ಎಂಬ ನೈಸರ್ಗಿಕ ರಾಸಾಯನಿಕವು ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಅನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯ ವೃದ್ದಿಸುತ್ತದೆ : 
ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಚಕ್ಕೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆಯಾಗುತ್ತದೆ. ದೇಹದ ನೋವಿನ ಜೊತೆಗೆ, ದಾಲ್ಚಿನ್ನಿ ಅಧಿಕ ಕೊಲೆಸ್ಟ್ರಾಲ್, ಉಸಿರಾಟದ ತೊಂದರೆಗಳು , ಮತ್ತು ಪಿರಿಯೇಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ನಿಯಂತ್ರಣಕ್ಕೂ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Heart Healthy Drinks: ನಿತ್ಯ ಈ ಪಾನೀಯಗಳ ಸೇವನೆಯಿಂದ ಹೃದಯ ಸಂಬಂಧಿತ ರೋಗಗಳಿಂದ ದೂರ ಉಳಿಯಬಹುದು

 ನೆನಪಿರಲಿ ಈ ವಿಚಾರಗಳು : 
ಗರಿಷ್ಠ ಪ್ರಯೋಜನಗಳು ಸಿಗುತ್ತವೆ ಎಂದು ಬೇಕಾ ಬಿಟ್ಟಿ ಚಕ್ಕೆಯನ್ನು ಸೇವಿಸುವುದು ಸರಿಯಲ್ಲ. ದಿನಕ್ಕೆ ಒಂದು ಟೀಚಮಚ ಚಕ್ಕೆ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕಿಂತ ಹೆಚ್ಚು ಚಕ್ಕೆಯನ್ನು ಸೇವಿಸಬಾರದು. ಚಕ್ಕೆಯನ್ನು ಹೆಚ್ಚಿನ್ ಪ್ರಮಾಣದಲ್ಲಿ ತಿನ್ನುವುದರಿಂದ ಹೊಟ್ಟೆಯ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.  

ಹೆಚ್ಚು ಚಕ್ಕೆ ತಿನ್ನುವುದರಿಂದ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳು : 
ಹೆಚ್ಚಿನ ಪ್ರಯೋಜನಗಳನ್ನು ಪಡೆಯುವ ದುರಾಸೆಯಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಚಕ್ಕೆಯನ್ನು ಸೇವಿಸಿದರೆ ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ
- ಹೆಚ್ಚು ದಾಲ್ಚಿನ್ನಿ ತಿನ್ನುವುದು ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡಬಹುದು.
- ಇದರ ಅತಿಯಾದ ಸೇವನೆಯು ದೇಹದಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು.
- ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಬೇಕು.

( ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News