ನವದೆಹಲಿ : ಇದೀಗ ಎಲ್ಲರೂ ಊಟೊಪಚಾರದಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವ ವಸ್ತುಗಳ ಬಳಕೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅಡುಗೆ ಮನೆಯಲ್ಲೇ ಸಿಗುವ ಸಿಂಪಲ್ ಮಸಾಲೆ ಪದಾರ್ಥಗಳಿಂದ ಟೇಸ್ಟಿ ರಸಂ (Rasam) ಮಾಡಿ. ಇದು ಇಮ್ಯೂನಿಟಿ ಬೂಸ್ಟರ್ ಕೂಡಾ. ಮಾಡೋದು ತುಂಬಾ ಸಿಂಪಲ್.


COMMERCIAL BREAK
SCROLL TO CONTINUE READING

ರಸಂ ಮಸಾಲೆ ಪದಾರ್ಥಗಳೆಲ್ಲಾ ಇಮ್ಯೂನಿಟಿ ಬೂಸ್ಟರ್ಸ್..!
ರಸಂ ಮಾಡಲು ಹುಣಸೆ ಹುಳಿ, ಟೊಮ್ಯಾಟೋ (tomato) ,  ಕರಿ ಬೇವು (Curry leaves) , ಬೆಳ್ಳುಳ್ಳಿ ಮತ್ತು ಕರಿಮೆಣಸು, ಅರಶಿನ.  ರಸಂ ಮಾಡಲು ಬೇಕಾದ ಸಾಮಾಗ್ರಿಗಳು ಇಷ್ಟೆ. ಇವೆಲ್ಲಾ ಇಮ್ಯೂನಿಟಿ ಬೂಸ್ಟರ್   (Immunity Booster) ಆಹಾರ. ಕಿಚನ್ ನಲ್ಲಿ ಸುಲಭವಾಗಿ ಸಿಗುತ್ತೆ. ಹೆಚ್ಚಿಗೆ ಹಣ ಖರ್ಚು ಮಾಡಬೇಕಾದ ಅಗತ್ಯವೇನಿಲ್ಲ. ರಸಂ (Rasam) ಕೂಡಾ ಟೇಸ್ಟಿ ಟೇಸ್ಟಿ ಆಗಿರುತ್ತದೆ. 


ಇದನ್ನೂ ಓದಿ : Ghee Benefits : ಮಹಿಳೆಯರಿಗೆ ದೇಸಿ ತುಪ್ಪದ 5 ಅದ್ಭುತ ಪ್ರಯೋಜನಗಳು : ಇಲ್ಲಿವೆ ನೋಡಿ!


ರಸಂ ಮಾಡೋದು ಹೇಗೆ..?
ಬೇಕಾದ ವಸ್ತುಗಳು : ಹುಣಸೆ ಪಲ್ಫ್ - 1 ಸ್ಪೂನ್, ಟೊಮ್ಯಾಟೊ 3-4 (ಕತ್ತರಿಸಿದ್ದು), ಕರಿಬೇವು  10-12 ಎಸಳು, ಕರಿ ಮೆಣಸು 1-2 ಟೀ ಸ್ಪೂನ್, ಬೆಳ್ಳುಳ್ಳಿ 4-5 ಎಸಳು, ಒಂದು ಸ್ಫೂನ್ ಸಾಸಿವೆ. ಅರಸಿಣ ಪುಡಿ ಅರ್ಧ ಚಮಚ, ಕೆಂಪು ಮೆಣಸು 3, ಉಪ್ಪು ರುಚಿಗೆ ತಕ್ಕಷ್ಟು,  ಒಂದು ಚಮಚ ಜೀರಿಗೆ. ಹಿಂಗ್, ದನಿಯಾ ಎಲೆ. 


ಮಾಡುವ ವಿಧಾನ :
ಕಂಪು ಮೆಣಸು, ಕರಿಮೆಣಸು, ಜೀರಿಗೆ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪನ್ನು(Curry leaves)  ಪಾನ್ ಗೆ ಹಾಕಿ ರೋಸ್ಟ್ ಮಾಡಿ,  ಪುಡಿ ಮಾಡಿ ಇಟ್ಟುಕೊಳ್ಳಿ.  ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ 2-3 ಸ್ಪೂನ್ ಎಣ್ಣೆ (Oil) ಹಾಕಿ ಬಿಸಿ ಆಗಲು ಬಿಡಿ. ಅದಕ್ಕೆ ಕತ್ತರಿಸಿದ ಟೊಮ್ಯಾಟೋ ಹಾಕಿ. ಕರಿಬೇವಿನ ಸೊಪ್ಪು ಹಾಕಿ. ಅರಶಿನ (Turmeric) , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 4-5 ನಿಮಿಷ ಬೇಯಿಸಿ. ಈಗ ಮೊದಲೇ ಪುಡಿ ಮಾಡಿ ಇಟ್ಟುಕೊಂಡಿರುವ ಮಸಾಲೆ ಪುಡಿಯನ್ನು ಅದಕ್ಕೆ ಸೇರಿಸಿ. ಮೊದಲೇ ರೆಡಿ ಮಾಡಿಕೊಂಡಿದ್ದ ಹುಣಸೆ ಪಲ್ಫ್ ಸೇರಿಸಿ. 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಲಿಡ್ ಕ್ಲೋಸ್ ಮಾಡಿ. ಸ್ಟೌ ಸಿಮ್ ನಲ್ಲಿಡಿ. ಹತ್ತು ನಿಮಿಷ ಬೇಯಲು ಬಿಡಿ. ಇನ್ನೊಂದು ಪಾನ್ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ (Ghee)  ಹಾಕಿ. ಸ್ವಲ್ಪ ಬಿಸಿ ಆಗಲು ಬಿಡಿ. ಬಿಸಿ ಆದಾಕ್ಷಣ ಒಂದು ಸ್ಪೂನ್ ಸಾಸಿವೆ ಹಾಕಿ. ಒಂದು ಕೆಂಪು ಮೆಣಸು ಹಾಕಿ. ಹಿಂಗ್ ಸೇರಿಸಿ.   ಈ ಒಗ್ಗರಣೆಯನ್ನು  ಮಾಡಿಟ್ಟಿರುವ  ರಸಂ ಪಾತ್ರೆಗೆ ಸೇರಿಸಿ. ಒಳ್ಳೆಯ ಘಮ ಹೊರಡಿಸುತ್ತದೆ ಒಗ್ಗರಣೆ. ನಂತರ ಕೊತ್ತಂಬರಿ ಸುಪ್ಪು ಕಟ್ ಮಾಡಿ ಸೇರಿಸಿ. ಜೊತೆಗೆ ಬೇಕಾದರೆ ಸ್ವಲ್ಪ ಕರಿಮೆಣಸಿನ ಪುಡಿ (Pepper) ಸೇರಿಸಿ. ಘಮ ಘಮ ಖಡಕ್ ರಸಂ ಸವಿಯಲು ತಯಾರಾಗಿರುತ್ತದೆ. 


ಇದನ್ನೂ ಓದಿ : Clay Pot Water: ಬೇಸಿಗೆಯಲ್ಲಿ ಪ್ರತಿದಿನ ಮಡಕೆ ನೀರನ್ನು ಬಳಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.