ಪಿರಿಯಡ್ಸ್ ಸಮಯದಲ್ಲಿ ಈ 3 ತರಕಾರಿ ತಿನ್ನಿ , ನೋವು ಬಾಧಿಸುವುದೇ ಇಲ್ಲ !
Period Remedies: ಋತುಚಕ್ರದ ನೋವನ್ನು ಕಡಿಮೆ ಮಾಡುವಲ್ಲಿ ಡಯಟ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳು ಮುಟ್ಟಿನ ನೋವನ್ನು ಮಾಡಳು ಸಹಾಯಾ ಮಾಡುತ್ತದೆ.
Period Remedies : ಪೀರಿಯೇಡ್ಸ್ ಮಹಿಳೆಯರಲ್ಲಿ ಪ್ರತಿ ತಿಂಗಳು ಸಂಭವಿಸುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ಮಹಿಳೆಯರ ಆರೋಗ್ಯ ಮತ್ತು ಫರ್ಟಿಲಿಟಿಗೆ ಬಹಳ ಮುಖ್ಯವಾಗಿದೆ. ಪೀರಿಯೇಡ್ಸ್ ಸಮಯದಲ್ಲಿ ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಮಹಿಳೆಯರಿಗೆ ಈ ದಿನಗಳಲ್ಲಿ ಕಡಿಮೆ ಸಮಸ್ಯೆಗಳಿದ್ದರೆ ಕೆಲವರಿಗೆ ವಿಪರೀತ ಸೆಳೆತ, ನೋವು, ವಾಂತಿ, ತಲೆ ಸುತ್ತುವುದು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವನ್ನು ಹೋಗಲಾಡಿಸಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾಳೆ. ಈ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಅತಿಯಾದ ನೋವು ಹಾರ್ಮೋನುಗಳ ಅಸಮತೋಲನ ಸೇರಿದಂತೆ ಅನೇಕ ಸಮಸ್ಯೆಗಳ ಸಂಕೇತವಾಗಿರುತ್ತದೆ.
ಆಹಾರಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗಳು ಪೀರಿಯೇಡ್ಸ್ ನೋವನ್ನು ಕಡಿಮೆ ಮಾಡಬಹುದು. ಇಲ್ಲಿ ನಾವು ನಿಮಗೆ ಮೂರು ತರಕಾರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ತರಕಾರಿಗಳನ್ನು ಸೇವಿಸುವುದರಿಂದ ಪೀರಿಯೇಡ್ಸ್ ನೋವಿನಿಂದ ಪರಿಹಾರ ಪಡೆಯಬಹುದು.
ಇದನ್ನೂ ಓದಿ : ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ದೃಷ್ಟಿ ಕೂಡಾ ಮಂದವಾಗುವುದು !
ಬ್ರೊಕೊಲಿ :
ಬ್ರೊಕೋಲಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಋತುಚಕ್ರದ ನೋವನ್ನು ಕಡಿಮೆ ಮಾಡಲು, ಆ ದಿನಗಳಲ್ಲಿ ಬ್ರೊಕೊಲಿಯನ್ನು ಸೇವಿಸಬೇಕು. ಪೀರಿಯೇಡ್ಸ್ ಸಮಯದಲ್ಲಿ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಬ್ರೊಕೊಲಿ ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಕಬ್ಬಿಣ ಇರುತ್ತದೆ. ಇದು ಸೆಳೆತ ಮತ್ತು ಸೆಳೆತದ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದು ವಿಶೇಷವಾಗಿ ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ :
ಋತುಚಕ್ರದ ನೋವು ಮತ್ತು ಅನಿಯಮಿತ ಪೀರಿಯೇಡ್ಸ್ ಸಮಸ್ಯೆಯನ್ನು ಕಡಿಮೆ ಮಾಡಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ . ಇದರಲ್ಲಿರುವ ಕೆಲವು ಖನಿಜಗಳು ಮತ್ತು ವಿಟಮಿನ್‌ಗಳು ಪಿರಿಯಡ್ಸ್‌ನಲ್ಲಿ ಕಾಣಿಸಿಕೊಳ್ಳುವ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಅನಿಯಮಿತ ಪೀರಿಯೇಡ್ಸ್ ಮತ್ತು ಅತಿಯಾದ ರಕ್ತಸ್ರಾವವನ್ನು ಕೂಡಾ ತಡೆಯುತ್ತದೆ. ಮಹಿಳೆಯರು ಪ್ರತಿದಿನ ನೆಲ್ಲಿಕಾಯಿ ಸೇವಿಸಬೇಕು. ಇದರ ಜ್ಯೂಸ್ ಕೂಡಾ ಪ್ರಯೋಜನಕಾರಿ. ಇದು ವಿಟಮಿನ್ ಬಿ 1 ಮತ್ತು ಬಿ 2 ಅನ್ನು ಹೊಂದಿರುತ್ತದೆ. ಅಲ್ಲದೆ ಕಬ್ಬಿಣದ ಅಂಶದಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಹಿಮೋಗ್ಲೋಬಿನ್ ಕೊರತೆಯನ್ನು ಕೂಡಾ ನೆಲ್ಲಿಕಾಯಿ ನೀಗಿಸುತ್ತದೆ.
ಇದನ್ನೂ ಓದಿ : ಈ ಎಲೆಯನ್ನು ಪ್ರತಿನಿತ್ಯ ಜಗಿದರೆ ಮಲಬದ್ಧತೆ ಜೊತೆ ಮಧುಮೇಹವೂ ಗುಣವಾಗುತ್ತದೆ
ಟೊಮೆಟೊ :
ಋತುಚಕ್ರದ ಸಮಯದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಇದರ ಜೊತೆಗೆ ಟೊಮ್ಯಾಟೊ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಳು ಬಹಳವಾಗಿ ಸಹಾಯ ಮಾಡುತ್ತದೆ. ಈ ದಿನಗಳಲ್ಲಿ ಟೊಮೆಟೊ ಸೂಪ್ ಸೇವನೆ ಹೆಚ್ಚು ಪ್ರಯೋಜನಕಾರಿ. ಈ ದಿನಗಳಲ್ಲಿ, ಮಹಿಳೆಯರ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಈ ಸಂದರ್ಭದಲ್ಲಿ, ಎಲೆಕೋಸು, ಹೂಕೋಸು ಮತ್ತು ಇತರ ಹಸಿರು ಎಲೆಗಳ ತರಕಾರಿಗಳ ಸೇವೆನೆ ಆರೋಗ್ಯಕ್ಕೆ ಉತ್ತಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.