ವೇಗವಾಗಿ ತೂಕ ಕಳೆದುಕೊಳ್ಳಬೇಕಾದರೆ ಈ ನಾಲ್ಕು ಜ್ಯೂಸ್ ಟ್ರೈ ಮಾಡಿ

 ಡಯೆಟ್ ಮಾಡದೆಯೇ ಸರಳ, ನೈಸರ್ಗಿಕ ವಿಧಾನಗಳಲ್ಲಿ ತೂಕ ಇಳಿಸಿಕೊಳ್ಳಬಹುದು.  ಇದಕ್ಕಾಗಿ ನಿಮ್ಮ ಆಹಾರದಲ್ಲಿ ಈ ನಾಲ್ಕು ಜ್ಯೂಸ್ ಗಳನ್ನು ಸೇರಿಸಿಕೊಳ್ಳಿ. 

Written by - Ranjitha R K | Last Updated : Sep 4, 2023, 03:37 PM IST
  • ತೂಕ ಹೆಚ್ಚಾಗುವುದು ಅನೇಕ ಜನರ ಪ್ರಮುಖ ಸಮಸ್ಯೆಯಾಗಿದೆ.
  • ಇದು ಅನೇಕ ರೀತಿಯ ದೈಹಿಕ ಹಾನಿಯನ್ನು ಉಂಟುಮಾಡುತ್ತದೆ.
  • ನಾನಾ ಕಾಯಿಲೆಗಳ ಅಪಾಯ ಕೂಡಾ ಎದುರಾಗುತ್ತದೆ.
ವೇಗವಾಗಿ ತೂಕ ಕಳೆದುಕೊಳ್ಳಬೇಕಾದರೆ ಈ ನಾಲ್ಕು ಜ್ಯೂಸ್ ಟ್ರೈ ಮಾಡಿ   title=

ಬೆಂಗಳೂರು : ತೂಕ ಹೆಚ್ಚಾಗುವುದು ಅನೇಕ ಜನರ ಪ್ರಮುಖ ಸಮಸ್ಯೆಯಾಗಿದೆ. ಇದು ಅನೇಕ ರೀತಿಯ ದೈಹಿಕ ಹಾನಿಯನ್ನು ಉಂಟುಮಾಡುತ್ತದೆ. ಅನಾರೋಗ್ಯಕರ ಆಹಾರ ಮತ್ತು ಕಳಪೆ ಜೀವನಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಗೊತ್ತು ಗುರಿಯಿಲ್ಲದೆ ತಿನ್ನುವುದು, ಬೇಕಾಬಿಟ್ಟಿ ಮಲಗುವುದು ಹೀಗೆ ಯಾವುದೇ ದಿನಚರಿಯಿಲ್ಲದೆ ಬದುಕುವುದರಿಂದ  ತೂಕ ಹೆಚ್ಚಾಗಲು ಆರಂಭವಾಗುತ್ತದೆ. ಕಳಪೆ ಜೀವನಶೈಲಿಯು ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಇದರಿಂದ ನಾನಾ ಕಾಯಿಲೆಗಳ ಅಪಾಯ ಕೂಡಾ ಎದುರಾಗುತ್ತದೆ. 

ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಆಹಾರಕ್ರಮದ ಮೇಲೆ ಹೆಚ್ಚಿನ ಗಮನ ಹರಿಸಲು ಆರಂಭಿಸುತ್ತೇವೆ. ಊಟ ತಿಂಡಿಯಲ್ಲಿ ಕಂಟ್ರೋಲ್ ಮಾಡಿಕೊಳ್ಳಲು ಆರಂಭಿಸುತ್ತೇವೆ. ಆದರೆ ಒಮ್ಮೆಲೇ  ಅತಿಯಾದ ಆಹಾರದ ನಿರ್ಬಂಧಗಳಿಂದಾಗಿ, ದೇಹವು ಪೋಷಕಾಂಶಗಳ ಕೊರತೆಯನ್ನು ಎದುರಿಸಬೇಕಾಗಬಹುದು. ಇದರಿಂದ ಚಯಾಪಚಯವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಡಯೆಟ್ ಮಾಡದೆಯೇ ಸರಳ, ನೈಸರ್ಗಿಕ ವಿಧಾನಗಳಲ್ಲಿ ತೂಕ ಇಳಿಸಿಕೊಳ್ಳಬಹುದು.  ಇದಕ್ಕಾಗಿ ನಿಮ್ಮ ಆಹಾರದಲ್ಲಿ ಈ ನಾಲ್ಕು ಜ್ಯೂಸ್ ಗಳನ್ನು ಸೇರಿಸಿಕೊಳ್ಳಿ. 

ಇದನ್ನೂ ಓದಿ : ಆರೋಗ್ಯಕರ ಲಿವರ್ ಡಯಟ್‌ಗಾಗಿ ಇಲ್ಲಿದೆ ಆಹಾರಕ್ಕೆ ಸೇರಿಸಬೇಕಾದ 6 ಸೂಪರ್‌ಫುಡ್‌ಗಳು

ತೂಕ ಇಳಿಸಲು ಸಹಾಯ ಮಾಡುವ ಜ್ಯೂಸ್‌ಗಳು  : 
ಬೀಟ್ರೂಟ್ ಜ್ಯೂಸ್ :
ಬೀಟ್ರೂಟ್ ರಸವನ್ನು ಸುಲಭವಾಗಿ ಆಹಾರದಲ್ಲಿ ಸೇರಿಸಬಹುದು. ಅದರ ರಸವನ್ನು ಕುಡಿಯುವುದರಿಂದ ತೂಕ ನಷ್ಟದಲ್ಲಿ ಅತ್ಯುತ್ತಮ ಫಲಿತಾಂಶ ಕಂಡು ಬರುತ್ತದೆ. ಈ ರಸವು ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು ಮತ್ತು ಫೈಬರ್‌ಗಳನ್ನು ಹೊಂದಿದ್ದು ಅದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್, ನೀರು, ಒಮೆಗಾ 3, ಕೊಬ್ಬಿನಾಮ್ಲಗಳು, ಫೋಲೇಟ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಕಬ್ಬಿಣವನ್ನು ಸಹ ಒಳಗೊಂಡಿದೆ. ಹಾಗಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುವುದಲ್ಲದೆ, ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕ ಸಿಗಲು ಮತ್ತು ತ್ರಾಣ ಹೆಚ್ಚಾಗಲು ಸಹಾಯ ಮಾಡುತ್ತದೆ.

ಪಾಲಕ್  ಜ್ಯೂಸ್ : 
ಪಾಲಕ್ ಸೊಪ್ಪನ್ನು ಹಸಿರು ಎಲೆ ತರಕಾರಿಗಳಲ್ಲಿ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.  ಪಾಲಕ್ ಸೊಪ್ಪಿನಲ್ಲಿ ಫೈಬರ್, ಫೋಲೇಟ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಪಾಲಕ್ ರಸವನ್ನು ಕುಡಿಯಬಹುದು. ಇದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. 

ಇದನ್ನೂ ಓದಿ ಮಳೆಗಾಲದಲ್ಲಿ ಸಿಗುವ ಈ ತರಕಾರಿ ತೂಕ ಇಳಿಕೆ ಸೇರಿದಂತೆ ಹಲವು ಜೀವನಶೈಲಿ ಕಾಯಿಲೆಗಳಿಗೆ ರಾಮಬಾಣ ಚಿಕಿತ್ಸೆ!

ಕ್ಯಾರೆಟ್ ಜ್ಯೂಸ್ : 
ತೂಕ ಇಳಿಸುವ ಜ್ಯೂಸ್‌ಗಳ ಪೈಕಿ ಕ್ಯಾರೆಟ್‌ ಜ್ಯೂಸ್ ಕೂಡಾ ಒಂದು. ಇದು ಫೈಬರ್ನಲ್ಲಿ ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿ ತರಕಾರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಪಿತ್ತರಸ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಎಲೆಕೋಸು ರಸ : 
ಎಲೆಕೋಸು ಅಧಿಕ ಫೈಬರ್ ತರಕಾರಿ. ಇದನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಅನೇಕ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಎಲೆಕೋಸು ಜ್ಯೂಸ್ ತಯಾರಿಸಿ ಸೇವಿಸುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಕುಡಿದರೆ ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಎಲೆಕೋಸು ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಅಥವಾ ಅಧಿಕ ಕೊಲೆಸ್ಟ್ರಾಲ್ ಅಪಾಯ ಕೂಡಾ ಕಡಿಮೆಯಾಗುತ್ತದೆ.

ಇದನ್ನೂ ಓದಿ :   ಹಲವು ಪ್ರಯತ್ನಗಳ ಬಳಿಕವೂ ತೂಕ ಇಳಿಕೆಯಾಗುತ್ತಿಲ್ಲವೇ? ಈ ಆಹಾರದ ಕಾಂಬಿನೇಷನ್ ಟ್ರೈ ಮಾಡಿ !

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News