ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ದೇಹವನ್ನು ಒಂದು ನಿರ್ದಿಷ್ಟ ಆಕಾರದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ದೇಹದ ತೂಕವನ್ನು ಕಾಪಾಡಿಕೊಳ್ಳಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ. ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಾರೆ. ಆದರೂ, ಅನೇಕ ಸಂದರ್ಭಗಳಲ್ಲಿ, ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. 


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ ಬೇಸಿಗೆ ಅತ್ಯುತ್ತಮ ಕಾಲ : 
ಈ ಋತುವಿನಲ್ಲಿ ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆಯು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  ಬೇಸಿಗೆಯಲ್ಲಿ ಕೊಬ್ಬು ನಷ್ಟ ಮತ್ತು ತೂಕ ನಷ್ಟಕ್ಕೆ ಕಲ್ಲಂಗಡಿ ಉತ್ತಮ ಆಯ್ಕೆ ಎಂದು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ ಎಂದು ತಜ್ಞರು ಹೇಳುತ್ತಾರೆ. 


ಇದನ್ನೂ ಓದಿ : Home Remedies: ಕಿವಿ ನೋವಿಗೆ ಇಲ್ಲಿವೆ ಸರಳ ಮನೆ ಮದ್ದುಗಳು


ಕಲ್ಲಂಗಡಿ ತಿಂದು ತೂಕ ಕಡಿಮೆ ಮಾಡಿಕೊಳ್ಳಬಹುದೇ? :
ತೂಕ ಇಳಿಸಲು ಕಲ್ಲಂಗಡಿ ಅತ್ಯುತ್ತಮ ಹಣ್ಣು ಎನ್ನುತ್ತಾರೆ ಪೌಷ್ಟಿಕತಜ್ಞರು. ಕಲ್ಲಂಗಡಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರಿನ ಅಂಶ ಇರುತ್ತದೆ. ಬೇಸಿಗೆಯ ಇತರ ಹಣ್ಣುಗಳಿಗೆ ಹೋಲಿಸಿದರೆ ಕಲ್ಲಂಗಡಿಯಲ್ಲಿ ಕ್ಯಾಲೋರಿ ಪ್ರಮಾಣ ಕೂಡಾ ಕಡಿಮೆ. ಆದ್ದರಿಂದ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 


1 ಕೆಜಿ ಕಲ್ಲಂಗಡಿ ಸುಮಾರು 300 ರಿಂದ 350 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದು ಕೇವಲ 2 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಕಡಿಮೆ ಕೊಬ್ಬಿನಾಂಶದಿಂದಾಗಿ, ಇದು ತೂಕ ನಷ್ಟಕ್ಕೆ ಪರಿಪೂರ್ಣ ಹಣ್ಣು ಎಂದು ಹೇಳಲಾಗುತ್ತದೆ. ಕಲ್ಲಂಗಡಿಯಲ್ಲಿ ಫೈಬರ್, ಪೊಟ್ಯಾಸಿಯಮ್, ವಿಟಮಿನ್-ಸಿ, ಎ ಮತ್ತು ಬಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ.


ಇದನ್ನೂ ಓದಿ :  ಮೊಟ್ಟೆ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ಇಳಿಯುತ್ತೆ ತೂಕ


ಕಲ್ಲಂಗಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ :
ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ. ಅಲ್ಲದೆ ಈ ಹಣ್ಣನ್ನು ತಿಂದ ಬಳಿಕ ಹೊಟ್ಟೆ ಹೆಚ್ಚು ಕಾಲ ತುಂಬಿರುತ್ತದೆ. ಈ ಕಾರಣದಿಂದಾಗಿ, ಆಗಾಗ ಹಸಿವಾಗುವುದಿಲ್ಲ.  ಪದೇ ಪದೇ ಹಸಿವಾಗದ ಕಾರಣ ಹೆಚ್ಚುವರಿ ಕೊಬ್ಬಿನ ಆಹಾರಗಳು ಮತ್ತು ಜಂಕ್, ಫಾಸ್ಟ್ ಫುಡ್ ಅನ್ನು ಸೇವಿಸಬೇಕಾಗಿರುವುದಿಲ್ಲ. ಜಂಕ್ ಫುಡ್ ಮತ್ತು ಕೊಬ್ಬಿನ ಆಹಾರಗಳಿಂದ ದೂರವಿದ್ದರೆ ತೂಕ ಇಳಿಸುವುದು ಸುಲಭ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇದಲ್ಲದೆ, ಕಲ್ಲಂಗಡಿ ಸೇವನೆಯು ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.


ತೂಕ ನಷ್ಟಕ್ಕೆ ಕಲ್ಲಂಗಡಿ ಸೇವಿಸುವುದು ಹೇಗೆ?  :
ತೂಕ ನಷ್ಟಕ್ಕೆ ಕಲ್ಲಂಗಡಿಯನ್ನು ಹೇಗೆ ಸೇವಿಸಬೇಕು ಎನ್ನುವುದಕ್ಕೂ ನಿಯಮವಿದೆ. ಹೇಗೆ ಬೇಕೋ ಹಾಗೆ ತಿಂದರೆ ತೂಕ ಕಳೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ತೂಕವನ್ನು ಕಳೆದುಕೊಳ್ಳಬೇಕಾದರೆ ಬೆಳಗಿನ ಉಪಾಹಾರದಲ್ಲಿ ಕಲ್ಲಂಗಡಿ ಸೇವಿಸಬೇಕು. ಬೆಳಗಿನ ಉಪಾಹಾರದ ಹೊರತಾಗಿ, ರಾತ್ರಿಯ ಊಟಕ್ಕೆ ಕಲ್ಲಂಗಡಿಯನ್ನು ಸಲಾಡ್ ಆಗಿ ಸೇವಿಸಬಹುದು. ರಾತ್ರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಲಾಡ್ ಆಗಿ ತಿನ್ನುವವರು ರಾತ್ರಿ  ಮತ್ತೆ ಹಸಿವಾಗದಂತೆ ನೋಡಿಕೊಳ್ಳಲು ಬೇರೆ ಏನನ್ನಾದರೂ ತಿನ್ನಬೇಕು ಎನ್ನುತ್ತಾರೆ ತಜ್ಞರು. 


ಇದನ್ನೂ ಓದಿ :  ಟೊಮೆಟೊ ಬರೀ ಅಡುಗೆಗಲ್ಲ.. ಕಾಂತಿಯುತ ʼಸೌಂದರ್ಯʼಕ್ಕೂ ಮದ್ದು..! ಹೇಗೆ ಗೊತ್ತಾ..?


ತೂಕ ಇಳಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹಲವು ರೀತಿಯಲ್ಲಿ ಸೇವಿಸಬಹುದು.  ಸಲಾಡ್ ರೂಪದಲ್ಲಿ, ಜ್ಯೂಸ್,  ಸ್ಮೂಥಿಗಳು, ಶೇಕ್‌ ರೂಪದಲ್ಲಿ ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಯಾವುದೇ ಆಹಾರಕ್ರಮವನ್ನು ಅನುಸರಿಸಿದರೂ, ಜಂಕ್ ಫುಡ್ ತಿನ್ನಬಾರದು ಎನ್ನುವುದು ಇಲ್ಲಿ ಮುಖ್ಯ ನಿಯಮ. ಕಲ್ಲಂಗಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ಅದನ್ನು ಕಾಪಾಡಿಕೊಳ್ಳಲು, ಆಹಾರ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.