ಮೊಟ್ಟೆ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ಇಳಿಯುತ್ತೆ ತೂಕ

Eggs For Weight Loss: ತೂಕ ನಷ್ಟಕ್ಕೆ ಮೊಟ್ಟೆಯನ್ನು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗುತ್ತದೆ. ಮೊಟ್ಟೆಯೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಸುಲಭವಾಗಿ ತೂಕ ಇಳಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಆರೋಗ್ಯಕರ ತೂಕ ಇಳಿಕೆಗೆ ಮೊಟ್ಟೆಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ... 

Written by - Yashaswini V | Last Updated : Mar 23, 2023, 07:57 AM IST
  • ಆರೋಗ್ಯ ತಜ್ಞರ ಪ್ರಕಾರ, ನಾವು ನಿರ್ದಿಷ್ಟ ರೀತಿಯಲ್ಲಿ ಮೊಟ್ಟೆಗಳನ್ನು ಸೇವಿಸಿದರೆ ಖಂಡಿತವಾಗಿಯೂ ತೂಕವನ್ನು ಕಡಿಮೆ ಮಾಡಬಹುದು.
  • ಇದರಿಂದ ನಿಮ್ಮ ಹೊಟ್ಟೆ ಸುತ್ತಲೂ ಶೇಖರವಾಗಿರುವ ಕೊಬ್ಬು ಕೂಡ ಬಹಳ ಸುಲಭವಾಗಿ ಕರಗುತ್ತದೆ ಎಂದು ಹೇಳಲಾಗುತ್ತದೆ.
  • ಹಾಗಿದ್ದರೆ ಆರೋಗ್ಯಕರ ತೂಕ ಇಳಿಕೆಗೆ ಮೊಟ್ಟೆಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ...
ಮೊಟ್ಟೆ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ಇಳಿಯುತ್ತೆ ತೂಕ  title=
Eggs For Weight Loss

Weight Loss By Eating Egg: ಪ್ರಸ್ತುತ, ಯಾವುದೇ ವ್ಯಕ್ತಿಗೆ ಅತಿಯಾದ ತೂಕ ಒಂದು ಶಾಪವಾಗಿ ಪರಿಣಮಿಸಿದೆ. ತೂಕ ಹೆಚ್ಚಾಗಲು ಕಾರಣ ಹಲವು, ಆದರೆ, ಎಷ್ಟೇ ಪ್ರಯತ್ನಿಸಿದರೂ ಕೂಡ ಅಷ್ಟು ಸುಲಭವಾಗಿ ತೂಕ ಇಳಿಸಲು ಸಾಧ್ಯವಾಗುವುದಿಲ್ಲ. ಆಹಾರ ತಜ್ಞರ ಪ್ರಕಾರ, ಮೊಟ್ಟೆ ತಿನ್ನುವುದರಿಂದಲೂ ಕೂಡ ಆರೋಗ್ಯಕರವಾಗಿ ತೂಕ ಇಳಿಸಬಹುದು. 

ಪ್ರಸಿದ್ಧ ಆಹಾರ ತಜ್ಞರಾದ ಆಯುಷಿ ಯಾದವ್ ಅವರ ಪ್ರಕಾರ,  ನಾವು ನಿರ್ದಿಷ್ಟ ರೀತಿಯಲ್ಲಿ ಮೊಟ್ಟೆಗಳನ್ನು ಸೇವಿಸಿದರೆ ಖಂಡಿತವಾಗಿಯೂ ತೂಕವನ್ನು ಕಡಿಮೆ ಮಾಡಬಹುದು. ಇದರಿಂದ ನಿಮ್ಮ ಹೊಟ್ಟೆ ಸುತ್ತಲೂ ಶೇಖರವಾಗಿರುವ ಕೊಬ್ಬು ಕೂಡ ಬಹಳ ಸುಲಭವಾಗಿ ಕರಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಆರೋಗ್ಯಕರ ತೂಕ ಇಳಿಕೆಗೆ ಮೊಟ್ಟೆಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ... 

ಇದನ್ನೂ ಓದಿ- ಟೊಮೆಟೊ ಬರೀ ಅಡುಗೆಗಲ್ಲ.. ಕಾಂತಿಯುತ ʼಸೌಂದರ್ಯʼಕ್ಕೂ ಮದ್ದು..! ಹೇಗೆ ಗೊತ್ತಾ..?

ಮೊಟ್ಟೆ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ಇಳಿಯುತ್ತೆ ತೂಕ: 
ಸೂಪರ್ ಫುಡ್ ಮೊಟ್ಟೆಯನ್ನು ಬೇಯಿಸಿ ತಿನ್ನಬಹುದು. ಇದಲ್ಲದೆ, ಆಮ್ಲೆಟ್, ಭುರ್ಜಿ ಮತ್ತು ಎಗ್ ಕರಿ ಹೀಗೆ ಹಲವು ರೀತಿಯಲ್ಲಿ ಸೇವಿಸಬಹುದು. ಆದಾಗ್ಯೂ, ಮೊಟ್ಟೆಯೊಂದಿಗೆ ಮೂರು ವಿಶೇಷ ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಇದು ತೂಕ ನಷ್ಟಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

* ಕೊಬ್ಬರಿ ಎಣ್ಣೆ:
ಕೊಬ್ಬರಿ ಎಣ್ಣೆಯ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿ. ನೀವು ಮೊಟ್ಟೆಯಿಂದ ಆಮ್ಲೆಟ್ ತಯಾರಿಸುವಾಗ ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ  ಇದು ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- ಮೂಳೆ & ಸ್ನಾಯುಗಳನ್ನು ಬಲಗೊಳಿಸಲು ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ನೀಡಿ

* ಕರಿಮೆಣಸು:
ನೀವು ರುಚಿಗಾಗಿ ಬೇಯಿಸಿದ ಮೊಟ್ಟೆ, ಇಲ್ಲವೇ ಆಮ್ಲೆಟ್ ಮೇಲೆ ಪೆಪ್ಪರ್ ಪೌಡರ್ ಎಂದರೆ ಕರಿಮೆಣಸಿನ ಪುಡಿಯನ್ನು ಹಾಕಿ ಸವಿದಿರಬಹುದು. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಲಾಭದಾಯಕ. ವಾಸ್ತವವಾಗಿ, ಕರಿಮೆಣಸಿನಲ್ಲಿ ಪೈಪರಿನ್ ಎಂಬ ಸಂಯುಕ್ತವು ಕಡುಬರುತ್ತದೆ. ಇದು ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

* ದಪ್ಪ ಮೆಣಸಿನಕಾಯಿ:
ಸಾಮಾನ್ಯವಾಗಿ ಕೆಲವರು ಅಲಂಕಾರದ ದೃಷ್ಟಿಯಿಂದ ಎಗ್ ಬುರ್ಜಿ ಜೊತೆಗೆ ದಪ್ಪ ಮೆಣಸಿನ ಕಾಯಿಯನ್ನು ಹಾಕಿರುತ್ತಾರೆ. ಆದರೆ, ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದಪ್ಪ ಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದು ಕೊಬ್ಬನ್ನು ಕರಗಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ, ಮೊಟ್ಟೆಯೊಂದಿಗೆ ದಪ್ಪ ಮೆಣಸಿನಕಾಯಿ ಸೇವನೆ ತೂಕ ನಷ್ಟಕ್ಕೆ ತುಂಬಾ ಸಹಾಯಕವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News