Corona India Update: ಭಾರತದ ಈ ರಾಜ್ಯಗಳಲ್ಲಿ ಮತ್ತೆ ಬಂದಿದೆ ಕೋರೋನಾ ಅಲೆ, ಈ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದ ಅಲರ್ಟ್ ಜಾರಿ
Coronavirus: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾದ 19406 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಸುಮಾರು 49 ಜನರು ಕೋರೋನಾ ದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
Corona India Update: ದೇಶದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ವೇಗವಾಗಿ ತನ್ನ ಪಾದಗಳನ್ನು ಚಾಚುತ್ತಿದೆ, ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ದೆಹಲಿ, ತೆಲಂಗಾಣ ಮತ್ತು ತಮಿಳುನಾಡು ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಶುಕ್ರವಾರ ದೆಹಲಿಯಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಆದರೆ, ಮಹಾರಾಷ್ಟ್ರದಲ್ಲಿ ಶುಕ್ರವಾರ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ರಾಜ್ಯಗಳಿಗೆ ಪತ್ರ ಬರೆದ ಆರೋಗ್ಯ ಸಚಿವಾಲಯ
ಮೇಲೆ ಸೂಚಿಸಲಾದ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದ ಆರೋಗ್ಯ ಸಚಿವಾಲಯ ಇನ್ಫ್ಲುಯೆನ್ಸ ತರಹದ ಕಾಯಿಲೆ ಮತ್ತು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸರಿಯಾದ ಮೇಲ್ವಿಚಾರಣೆ ಮಾಡಲು ಸೂಚನೆ ನೀಡಿದೆ ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಅದು ಹೇಳಿದೆ. ಈ ರಾಜ್ಯಗಳ ಕರೋನಾ ಪ್ರಕರಣವನ್ನು ಹೇಗೆ ನಿಯಂತ್ರಿಸಬೇಕೆಂದು ಎಂಬುದನ್ನು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಕಳೆದ ಕೆಲವು ದಿನಗಳಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಮತ್ತು ಸಕಾರಾತ್ಮಕತೆಯ ದರದಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರವು ಈ ರಾಜ್ಯಗಳಿಗೆ ಮಾಹಿತಿ ನೀಡಿದೆ. ಹೀಗಾಗಿ ಈ ರಾಜ್ಯಗಳು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದಿದೆ.
ಆತಂಕ ಹೆಚ್ಚಿಸಿದ ಕೊರೊನಾ ವೇಗ
ಆಗಸ್ಟ್ 5 ರಂದು ದೆಹಲಿಯಲ್ಲಿ ವರದಿಯಾದ 2202 ಕರೋನಾ ಪ್ರಕರಣಗಳನ್ನು ಉಲ್ಲೇಖಿಸಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿ ಪ್ರತಿದಿನ 811 ಪ್ರಕರಣಗಳು ವರದಿಯಾಗುತ್ತಿವೆ. ಸರಾಸರಿ ಪ್ರಕರಣಗಳು ಸಂಖ್ಯೆ ಕೂಡ ಹೆಚ್ಚಾಗಿದೆ. ಜುಲೈ 29 ಕ್ಕೆ ಕೊನೆಗೊಂಡ ವಾರದಲ್ಲಿ ದಿನಕ್ಕೆ ಸರಾಸರಿ 802 ಪ್ರಕರಣಗಳು ಕಂಡುಬಂದರೆ, ಆಗಸ್ಟ್ 5 ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ 1492 ಕ್ಕೆ ಏರಿಕೆಯಾಗಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರವೂ ಶೇ.5.90 ರಿಂದ ಶೇ.9.86 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ-ಆರೋಗ್ಯಕರ ತೂಕ ಇಳಿಕೆಗಾಗಿ ನಿಮ್ಮ ಬ್ರೇಕ್ ಫಾಸ್ಟ್ ಹೀಗಿರಲಿ
24 ಗಂಟೆಗಳಲ್ಲಿ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19406 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 49 ಮಂದಿ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಂಕಿಅಂಶದಲ್ಲಿ, ಕೇರಳದ 11 ಸಾವುಗಳು ಶಾಮೀಲಾಗಿವೆ. 19,928 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ, ಭಾರತದಲ್ಲಿ ಸಕ್ರಿಯ ಕರೋನಾ ರೋಗಿಗಳ ಸಂಖ್ಯೆ 1,34,793 ಆಗಿದೆ. ಅಂಕಿಅಂಶಗಳ ಪ್ರಕಾರ, ಇದುವರೆಗೆ 4,34,65,552 ಜನರನ್ನು ಕರೋನಾ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 5,26,649 ರೋಗಿಗಳು ಸಾವನ್ನಪ್ಪಿದ್ದಾರೆ. ದೈನಂದಿನ ಸಕಾರಾತ್ಮಕತೆಯ ದರವು ಶೇ.4.95 ರಷ್ಟು ವರದಿಯಾಗಿದೆ.
ಇದನ್ನೂ ಓದಿ-ಹೈ ಕೊಲೆಸ್ಟ್ರಾಲ್ ಬಗ್ಗೆ ನಿಮ್ಮ ಕೂದಲೂ ನೀಡುತ್ತೆ ಸಂಕೇತ
ಎಚ್ಚೆತ್ತುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ
ಕೇರಳದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಕರೋನಾ ಪ್ರಕರಣಗಳಿವೆ. ಕೇರಳದಲ್ಲಿ 12,344 ರೋಗಿಗಳು ಸಕ್ರಿಯರಾಗಿದ್ದರೆ, ಮಹಾರಾಷ್ಟ್ರದಲ್ಲಿ 12,077 ಪ್ರಕರಣಗಳು ವರದಿಯಾಗಿದ್ದು ಎರಡನೇ ಸ್ಥಾನದಲ್ಲಿದೆ. ಸಕ್ರಿಯ ರೋಗಿಗಳ ವಿಷಯದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಇಲ್ಲಿ 11,067 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಂತರ ತಮಿಳುನಾಡಿನಲ್ಲಿ 10,987 ಮತ್ತು ಪಂಜಾಬ್‌ನಲ್ಲಿ 10,858 ಪ್ರಕರಣಗಳಿವೆ. ಮುಂಬರುವ ದಿನಗಳಲ್ಲಿ ರಕ್ಷಾ ಬಂಧನದ ಜೊತೆಗೆ ಉತ್ತರ ಭಾರತದಲ್ಲೂ ಹಬ್ಬದ ಸೀಸನ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಜಾಗರೂಕರಾಗಿರಬೇಕು ಎಂದು ಸರ್ಕಾರ ಸೂಚಿಸಿದೆ. ವಿಶ್ವಾದ್ಯಂತ ಕರೋನಾ ಆಗಮನದ ನಂತರ, ಒಟ್ಟು ಪ್ರಕರಣಗಳಲ್ಲಿ ಭಾರತವು ಅಮೆರಿಕದ ನಂತರ ಎರಡನೇ ಸ್ಥಾನದಲ್ಲಿದೆ ಮತ್ತು ಒಟ್ಟು ಸಾವಿನ ವಿಷಯದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ ಮೂರನೇ ಸ್ಥಾನದಲ್ಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.