ಚಹಾದೊಂದಿಗೆ ಈ ಆಹಾರ ಸೇವಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ತಂದೊಡ್ಡಬಹುದು ಆರೋಗ್ಯ ಸಮಸ್ಯೆ

Don't Consume Tea With Namkeen:ಚಹಾ ಕುಡಿಯುವಾಗ, ಅನೇಕ ಬಾರಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಚಹಾದ ಜೊತೆಗೆ ಖಾರದ ತಿಂಡಿಗಳನ್ನು ತಿನ್ನಲು ಅನೇಕರು ಇಷ್ಟಪಡುತ್ತಾರೆ. ಹೀಗೆ ಮಾಡಿದರೆ ಆದರಕ್ಕೆ ರುಚಿ ಖಂಡಿತಾ ಸಿಗಬಹುದು. ಆದರೆ ಉದರದ ಕತೆ ಏನು?

Written by - Ranjitha R K | Last Updated : Aug 5, 2022, 09:09 AM IST
  • ಚಹಾದೊಂದಿಗೆ ಬೇಡವೇ ಬೇಡ ಈ ತಿನಿಸು
  • ಜೀರ್ಣ ಕ್ರಿಯೆಯನ್ನು ಕೆಡಿಸುತ್ತದೆ
  • ಆಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ
ಚಹಾದೊಂದಿಗೆ ಈ ಆಹಾರ ಸೇವಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ತಂದೊಡ್ಡಬಹುದು ಆರೋಗ್ಯ ಸಮಸ್ಯೆ    title=
Namkeen with tea side effects (file photo)

Don't Consume Tea With Namkeen:  ಭಾರತದಲ್ಲಿ ನೀರಿನ ನಂತರ ಹೆಚ್ಚು ಸೇವಿಸುವ ಪಾನೀಯವೆಂದರೆ ಅದು ಚಹಾ. ದಿನದ ಆರಂಭಕ್ಕಾಗಲಿ, ಸಂಜೆಯ ವಿಶ್ರಾಂತಿಯಾಗಲಿ ಚಹಾ ಬೇಕೇ ಬೇಕು. ನಿದ್ದೆ ಓಡಿಸಲು ಕೂಡಾ ಚಹಾ ಬೇಕು. ಕೆಲಸದಲ್ಲಿ ಉತ್ಸಾಹ ಪಡೆಯಲು ಚಹಾ ಬೇಕು. ಹೀಗೆ ಚಹಾ ನಮ್ಮ ಒಂದೊಳ್ಳೆ ಗೆಳೆಯ ಎಂದರೂ ತಪ್ಪಾಗುವುದಿಲ್ಲ. ಆದರೆ ಚಹಾ ಕುಡಿಯುವಾಗ, ಅನೇಕ ಬಾರಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಚಹಾದ ಜೊತೆಗೆ ಖಾರದ ತಿಂಡಿಗಳನ್ನು ತಿನ್ನಲು ಅನೇಕರು ಇಷ್ಟಪಡುತ್ತಾರೆ. ಹೀಗೆ ಮಾಡಿದರೆ ಅದರಕ್ಕೆ ರುಚಿ ಖಂಡಿತಾ ಸಿಗಬಹುದು. ಆದರೆ ಉದರದ ಕತೆ ಏನು?

ಚಹಾ ಮತ್ತು ಕುರುಕಲು ತಿಂಡಿ ಜೊತೆಯಾಗಿ ತಿಂದರೆ ಏನಾಗುತ್ತದೆ ? : 
1. ಅಜೀರ್ಣ :
ಚಹಾವನ್ನು ತಯಾರಿಸಲು ಸಕ್ಕರೆಯನ್ನು ಬಳಸಲಾಗುತ್ತದೆ. ಚೌ ಚೌ ಅಥವಾ ಮಿಕ್ಚರ್  ನಲ್ಲಿ ಉಪ್ಪನ್ನು ಬಳಸಲಾಗುತ್ತದೆ. ವೈದ್ಯರ ಹುಳಿ ಮತ್ತು ಸಿಹಿ ಪದಾರ್ಥಗಳನ್ನು ಒಟ್ಟಿಗೆ ತಿನ್ನಲು ಶಿಫಾರಸು ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ : Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

2. ಅಸಿಡಿಟಿ :
ಒಣ ಹಣ್ಣುಗಳನ್ನು ಬಳಸುವ ಕೆಲವು ಸ್ನಾಕ್ಸ್ ಗಳಿರುತ್ತವೆ. ಡ್ರೈ ಫ್ರುಟ್ಸ್ ಅನ್ನು  ಚಹಾದೊಂದಿಗೆ ಎಂದಿಗೂ ತಿನ್ನಬಾರದು. ಚಹಾ ಮತ್ತು ಡ್ರೈ ಫ್ರೂಟ್ಸ್ ಜೊತೆಯಲ್ಲಿ  ತಿಂದರೆ ಅಸಿಡಿಟಿ ಸಮಸ್ಯೆ ಎದುರಾಗಬಹುದು. 

3. ಕಿಬ್ಬೊಟ್ಟೆಯ ಸೆಳೆತಗಳು :
ಹಾಲನ್ನು ಚಹಾ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಖಾರದ ವಸ್ತುಗಳನ್ನು ಹಾಲಿನೊಂದಿಗೆ ತಿನ್ನಬಾರದು. ಇದು ಆರೋಗ್ಯಕ್ಕೆ ಹಾನಿಕಾರವಾಗಿ ಪರಿಣಮಿಸಬಹುದು. ಉಪ್ಪು ಪದಾರ್ಥಗಳು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ, ಇದು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ. ಚಹಾ ಮತ್ತು ಖಾರದ ವಸ್ತುಗಳನ್ನು ಒಟ್ಟಿಗೆ ತಿಂದರೆ ಹೊಟ್ಟೆ ಸೆಳೆತ ಸಮಸ್ಯೆ ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ : Raw Milk: ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಕಿಂಚಿತ್ತು ಒಳ್ಳೆಯದಲ್ಲ.. ಯಾಕೆ ಗೊತ್ತಾ? 

4. ಹೊಟ್ಟೆ ನೋವು :
ಕೆಲವು ತಿನಿಸುಗಳನ್ನು ಕಡಲೆ  ಹಿಟ್ಟಿನ ಸಹಾಯದಿಂದ ತಯಾರಿಸಲಾಗುತ್ತದೆ. ಇದನ್ನು ಚಹಾದೊಂದಿಗೆ ತಿನ್ನುವುದು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಅರಿಶಿನದೊಂದಿಗೆ ಉಪ್ಪನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News