ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಇಂದು ಲಾಕ್ ಡೌನ್ ನ ಮೂರನೇ ದಿನವಾಗಿದೆ. ಇಂತಹುದರಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಲು ದೆಹಲಿ ಮೂಲದ ಕಂಪನಿ Map My India, ಆಪ್ ವೊಂದನ್ನು ಬಿಡುಗಡೆಗೊಳಿಸಿದೆ. ಈ ಆಪ್ ಸಹಾಯದಿಂದ ಜನರು ಕೊರೊನಾ ವೈರಸ್ ಸೋಂಕಿತರ ಕುರಿತು ವರದಿ ಮಾಡಬಹುದಾಗಿದೆ. ಜೊತೆಗೆ ವೈರಸ್ ನಿಂದ ಸೋಂಕಿತರ ಸರಿಯಾದ ಅಂಕಿಅಂಶಗಳ ಕುರಿತ ಹಾಗೂ ಇತರೆ ಮಾಹಿತಿಗಳನ್ನು ಸಹ ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

Map My India ಸಂಸ್ಥೆ MOVE ಹೆಸರಿನಡಿ ಆಪ್ ವೊಂದನ್ನು ಬಿಡುಗಡೆಗೊಳಿಸಿದೆ. ಗೂಗಲ್ ಪ್ಲೇ ಸ್ಟೋರ್ ಸರೆದಂತೆ ಇತರೆ ಆಪ್ ಸ್ಟೋರ್ ಗಳಲ್ಲಿ  ಈ ಆಪ್ ಲಭ್ಯವಿದೆ. ಈ ಆಪ್ ಅನ್ನು ಡೌನ್ ಲೋಡ್ ಮಾಡಿದ ಬಳಿಕ ಇ-ಮೇಲ್, ಫೇಸ್ಬುಕ್ ಮೂಲಕ ಇದರಲ್ಲಿ ನೀವು ಲಾಗ್ ಇನ್ ಆಗಬಹುದಾಗಿದೆ. ಜೊತೆಗೆ ಈ ಆಪ್ ಮೂಲಕ ಜನರಿಗೆ ಸಹಾಯ ಮಾಡಲು ನೀವು ಇಶ್ಯೂ ರಿಪೋರ್ಟ್ ಕೂಡ ಮಾಡಬಹುದು. ಅಂದರೆ, ಒಂದು ವೇಳೆ ನಿಮಗೆ ಯಾವುದೇ ಓರ್ವ ಕೊರೊನಾ ಶಂಕಿತನ ಕುರಿತು ಮಾಹಿತಿ ನೀಡಬೇಕಾದರೆ, ಅದಕ್ಕಾಗಿ ವಿಕಲ್ಪ ನಿಮಗೆ ಈ ಆಪ್ ನಲ್ಲಿ ಸಿಗಲಿದೆ. ವಿಕಲ್ಪದ ಆಯ್ಕೆಯ ಬಳಿಕ ನಿಮಗೆ ಲೋಕೇಶನ್ ಮಾಹಿತಿ ಕೇಳಲಾಗುವುದು. ಇದಕ್ಕಾಗಿ ನೀವು ನಿಮ್ಮ ಲೋಕೇಶನ್ ಗ್ರಾಂಟ್ ನೀಡಬೇಕು.


ಇಶ್ಯೂ ರಿಪೋರ್ ಮಾಡಲು ನಿಮಗೆ ಹಲವು ಕ್ಯಾಟೆಗರಿಗಳನ್ನು ನೀಡಲಾಗಿದ್ದು, ಅದರಲ್ಲಿ ಒಂದನ್ನು ನೀವು ಆಯ್ದುಕೊಳ್ಳಬೇಕು. ಇದಕ್ಕಾಗಿ ಮ್ಯಾಪ್ಸ್, ಟ್ರ್ಯಾಫಿಕ್, ಸೇಫ್ಟಿ, ಕಮ್ಯೂನಿಟಿ, ರೋಡ್ ಕಂಡಿಶನ್ ಹಾಗೂ ಕೊರೊನಾ ಕೆಟೆಗರಿಗಳನ್ನೂ ನೀಡಲಾಗಿದೆ. ಇವುಗಳನ್ನು ಬಳಸಿ ನೀವು ಇಶ್ಯೂ ರಿಪೋರ್ಟ್ ಮಾಡಬಹುದು. 


ಕೊರೊನಾ ಆಪ್ಶನ್ ಅನ್ನು ಆಯ್ದ ಬಳಿಕ ನಿಮಗೆ ಕೊರೊನಾ ಟ್ರೀಟ್ಮೆಂಟ್, ಕೊರೊನಾ ಸಸ್ಪೆಕ್ಟ್, ಟೆಸ್ಟಿಂಗ್ ಲ್ಯಾಬ್ ಇತ್ಯಾದಿ ಸಬ್ ಕೆಟೆಗರಿಗಳು ನಿಮಗೆ ಕಾಣಿಸಿಕೊಳ್ಳಲಿವೆ. ಆದರೆ, ಯಾವುದೇ ಇಶ್ಯೂ ರಿಪೋರ್ಟ್ ಮಾಡುವ ಮೊದಲು ನಿಮಗೆ ಆ ಇಶ್ಯೂಗೆ ಸಂಬಂಧಿಸಿದ ಫೋಟೋ ಸೇರಿದಂತೆ ಕಾಮೆಂಟ್ ನಮೂದಿಸುವುದು ಅವಶ್ಯಕವಾಗಿದೆ.