ನವದೆಹಲಿ: Coronavirus Second Wave - ಕೋರೋನಾ ವೈರಸ್ (Coronavirus)ನ ಎರಡನೆಯ ಅಲೆ ಮತ್ತೊಮ್ಮೆ ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ನಿತ್ಯ 50 ಸಾವಿರಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿಶ್ವಾದ್ಯಂತ ಸುಮಾರು 12 ಕೋಟಿ 55 ಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ (Covid-19)ನ ಸೋಂಕಿಗೆ ಗುರಿಯಾಗಿದ್ದಾರೆ. ಒಂದೆಡೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ಕೊರೊನಾ ವೈರಸ್ ನ ಎರಡನೇ ಅಲೆ ಕೂಡ ತುಂಬಾ ಶಕ್ತಿಶಾಲಿ ಹಾಗೂ ಅಪಾಯಕಾರಿ ಎಂಬಂತೆ ಕಂಡುಬರುತ್ತಿದೆ. ಇದರಿಂದಾಗುತ್ತಿರುವ ಸೋಂಕಿನ ಸಂಖ್ಯೆ ಕೂಡ ವೇಗವಾಗಿ ಹರಡುತ್ತಿದೆ.


COMMERCIAL BREAK
SCROLL TO CONTINUE READING

ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಈ ಉಪಾಯಗಳನ್ನು ಅನುಸರಿಸಿ
ಕಳೆದ ಒಂದು ವರ್ಷದಿಂದ ನೀವು ಅನುಸರಿಸುತ್ತಿರುವ ಸಾಮಾಜಿಕ ಅಂತರ ಕಾಯುವಿಕೆಯ ನಿಯಮ, ಮಾಸ್ಕ್ ಧಾರಣೆ, ಕೈಗಳನ್ನು ಶುಚಿಯಾಗಿಡುವ ಕೆಲಸ ಮುಂದೆಯೂ ಕೂಡ ಜಾರಿಯಲ್ಲಿಡುವುದು ಆವಶ್ಯಕವಾಗಿದೆ. ಇದಲ್ಲದೆ ಈ ಮನೆ ಉಪಾಯಗಳನ್ನು (Home Remedies) ನೀವು ಅನುಸರಿಸಬೇಕಾಗಲಿದೆ (Tips To Stay Safe From Coronavirus).


1. ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿ - ಬಿಸಿ ನೀರಿಗೆ ಸೈಂಧವ ಉಪ್ಪು ಬೆರೆಸಿ ನಿತ್ಯ 2 ರಿಂದ 3 ಬಾರಿ ಬಾಯಿ ಮುಕ್ಕಳಿಸಿ. ಇದರಿಂದ ನಿಮ್ಮ ಶ್ವಾಸ ತಂತ್ರ ಕೊರೊನಾ ವೈರಸ್ ಮುಕ್ತವಾಗಲಿದೆ.


2. ಅರಿಶಿನ ಮಿಶ್ರಿನ ಹಾಲು ಸೇವನೆ- ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಸೇವಿಸಲು ಮರೆಯದಿರಿ. ಅರಿಶಿನ ಕೇವಲ ವೈರಸ್ ನಿಂದ ನಿಮ್ಮನ್ನು ಕಾಪಾಡುವುದಲ್ಲದೆ, ರೋಗಗಳ ಜೊತೆಗೆ ಹೋರಾಡಲು ನಿಮ್ಮ ಶರೀರವನ್ನು ಆಂತರಿಕವಾಗಿ ಗಟ್ಟಿಗೊಳಿಸುತ್ತದೆ. ಅಂದರೆ ಶರೀರದ ಇಮ್ಯೂನೀಟಿ ಹೆಚ್ಚಿಸುತ್ತದೆ.


3. ತುಳಸಿ ಕಷಾಯ ಸೇವನೆ- ತುಳಸಿ, ಲವಂಗ, ಪಿಪಲಿ ಹಾಗೂ ದಾಲ್ಚಿನಿಯನ್ನು ನೀರಿನಲ್ಲಿ ಕುದಿಸಿ ಅದರ ಕಷಾಯ ತಯಾರಿಸಿ, ಹಾಗೂ ನಿತ್ಯ ಎರಡು ಬಾರಿ ಈ ಕಷಾಯ ಸೇವಿಸಿ. ಈ ಕಷಾಯ ನಿಮ್ಮ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ವೈರಸ್ ಅನ್ನು ನಾಶಪಡಿಸಲು ಸಹಕಾರಿಯಾಗಿದೆ.


ಇದನ್ನೂ ಓದಿ-COVID-19 ಪ್ರಕರಣಗಳ ಹೆಚ್ಚಳ: ಲಾಕ್ ಡೌನ್ ಪರಿಹಾರವಲ್ಲ- ದೆಹಲಿ ಆರೋಗ್ಯ ಸಚಿವ


4. ನಿಮ್ಮ ಊಟದಲ್ಲಿ ಈ ಮಸಾಲೆ ಪದಾರ್ಥಗಳನ್ನು ಶಾಮೀಲುಗೊಳಿಸಿ - ಹಳದಿ, ಅಜ್ವಾಯಿನ್, ಪಿಪಲಿ, ಕರಿ ಮೆಣಸು, ದಾಲ್ಚಿನಿ, ಸೈಂಧವ ಲವಣ ಈ ಮಸಾಲೆ ಪದಾರ್ಥಗಳು ಕೊರೊನಾ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿವೆ. ಹೀಗಾಗಿ ಬೇಕಾದರೆ ನೀವು ಈ ಮಸಾಲೆ ಪದಾರ್ಥಗಳ ಕಷಾಯ ಕೂಡ ಸೇವಿಸಬಹುದು.


ಇದನ್ನೂ ಓದಿ-Coronavirus: ಈ ರಾಜ್ಯದಲ್ಲಿ ನಿಯಂತ್ರಣ ಮೀರಿದ ಕೊರೊನಾ, ಮಾರ್ಚ್ 28 ರಿಂದ Night Curfew ಘೋಷಣೆ


5. ಈ ವಿಷಯಗಳನ್ನೂ ಕೂಡ ನೆನಪಿಡಿ -ನಿತ್ಯ 20 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಿ, 8 ಗಂಟೆ ನಿದ್ರೆ ಮಾಡಿ, ನಿತ್ಯ ಎರಡರಿಂದ ಮೂರು ಲೀಟರ್ ನೀರು ಸೇವಿಸಿ, ಆರಿದ ಆಹಾರ ಸೇವಿಸಬೇಡಿ. 


ಇದನ್ನೂ ಓದಿ-ದೆಹಲಿ, ಮತ್ತು ಕರ್ನಾಟಕದಲ್ಲಿ ಆತಂಕ ತರಿಸಿದ ಕೊರೊನಾ ಪ್ರಕರಣಗಳ ಹೆಚ್ಚಳ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.